ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ನೀಡಿದ ಡಾ.ದೇವೇಂದ್ರಪ್ಪಾ ತೇಲ್ಕರ್
ಕಲಬುರಗಿ,ಜೂ.21- ಇಲ್ಲಿನ ಪ್ರತಿಷ್ಠಿತ ರೇಷ್ಮಿ ಎಜ್ಯುಕೇಷನಲ್ ಅ್ಯಂಡ ಚಾರಿಟೇಬಲ್ ಟ್ರಸ್ಟ ಅಡಿಯಲ್ಲಿ ನಡೆಯುವ ಶ್ರೀ ಮುರುಘ ರಾಜೇಂದ್ರ ಸ್ವಾಮಿಜಿ ಬಿ.ಇಡಿ ಹಾಗೂ ಡಿ.ಇಡಿ ಕಾಲೇಜು ಮತ್ತು ಕು.ಶರಣೇಶ್ವರಿ ರೇಷ್ಮಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಯೋಗ ತರಬೇತಿದಾರ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯ ಯೋಗ ತರಬೇತಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾದ ಡಾ.ದೇವೇಂದ್ರಪ್ಪಾ ತೇಲ್ಕರ್ ಅವರು ಚಾಲನೆ ನೀಡಿದರು.
ಸ್ವ-ಹಿತ ಮತ್ತು ಸಮಾಜದ ಹಿತಕ್ಕಾಗಿ ಯೋಗ ಕಾರ್ಯಕ್ರಮದ ಧ್ಯೆಯ ಮತ್ತು ಉದ್ದೇಶಗಳ ಕುರಿತು ಡಾ.ತೇಲ್ಕರ ಅವರು ಸವಿಸ್ತಾರವಾಗಿ ವಿವರಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲರಾದ ಡಾ.ರಾಜಶೇಖರ ಶಿರವಾಳಕರ್, ಡಾ.ಗೀತಾ ಆರ್.ಎಂ. ಕಾರ್ಯಕ್ರಮ ಸಂಯೋಜಕರಾದ ಅನೀಲ ಜಿ.ಜಾಧವ ಮತ್ತು ಪ್ರಾಧ್ಯಾಪಕರು, ಪ್ರಶಿಕ್ಷಣಾಥಿಗಳು ಭಾಗವಹಿಸಿದ್ದರು.