ವಿಶ್ವ ಯೋಗ ದಿನ: ವಳಕೇರಿಯಿಂದ ಜಲಯೋಗ
ಕಲಬುರಗಿ,ಜೂ.21-ವಿಶ್ವ ಯೋಗ ದಿನದ ಅಂಗವಾಗಿ ನಂದಿಕೂರ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಪವನಕುಮಾರ ಬಿ.ವಳಕೇರಿ ಅವರು ಗ್ರಾಮದ ಮಲ್ಲೇಶಪ್ಪ ಏವೂರ ಅವರ ತೋಟದ ಬಾವಿಯಲ್ಲಿ ಇಂದು ಬೆಳಿಗ್ಗೆ 7 ರಿಂದ 8 ಗಂಟೆಯವರೆಗೆ ಜಲಯೋಗ ಮಾಡಿದರು.
ಪ್ರತಿ ವರ್ಷವೂ ವಳಕೇರಿ ಅವರು ವಿಶ್ವ ಯೋಗ ದಿನದಂದು ಜಲಯೋಗ ಮಾಡುವುದರ ಮೂಲಕ ಯೋಗದ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ.