ತುಳಸಿಕೆರೆ ಸರ್ಕಾರಿ ಶಾಲಾ ಮಕ್ಕಳಿಗೆ:ಸ್ವೆಟರ್ ವಿತರಣೆ
ಸಂಜೆವಾಣಿ ವಾರ್ತೆ
ಹನೂರು ಸೆ 26 :- ತಾಲೂಕಿನ ಮಲೈ ಮಹದೇಶ್ವರ ಬೆಟ್ಟ ಗ್ರಾಮ ಪಂ. ವ್ಯಾಪ್ತಿಯ ತುಳಸಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಅಬಕಾರಿ ಇಲಾಖೆಯ ಕಾನ್ಸ್ಟೇಬಲ್ ಮಹದೇವಸ್ವಾಮಿ ಸುಜ್ಜಲೂರು ಅವರು ಸ್ಟೇಟರ್ ಗಳನ್ನು ಉಡುಗೊರೆಯಾಗಿ ನೀಡಿರುತ್ತಾರೆ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಅಬಕಾರಿ ಇಲಾಖೆಯ ಕಾನ್ ಸ್ಟೆಬಲ್ ಮಹದೇವಸ್ವಾಮಿ ಸುಜಲೂರು ಅವರು ತುಳಸಿಕೆರೆ ಷಟ್ಕಾರಿ ಶಾಲೆಯ ಸುಮಾರು 60 ಮಕ್ಕಳಿಗೆ ಉತ್ತಮ ಗುಣಮಟ್ಟದ ಸ್ವೆಟ್ಟರ್ ಗಳನ್ನು ವಿತರಣೆ ಮಾಡಿದ್ದಾರೆ.
ಇದೆ ವೇಳೆ ಅಬಕಾರಿ ಇಲಾಖೆಯ ಮಹದೇವಸ್ವಾಮಿ ಅವರು ಮಾತನಾಡಿ ಶಾಲೆಯು ಗುಡ್ಡಗಾಡು ಪ್ರದೇಶದಲ್ಲಿ ಇರುವುದರಿಂದ ಇಂತಹ ದುರ್ಗಮ ಪ್ರದೇಶದ ಮಕ್ಕಳಿಗೆ ನಮ್ಮ ಸೇವೆಯು ಇರಬೇಕೆಂದು ಬಯಸಿ ಈ ಶಾಲೆಯನ್ನು ಆಯ್ಕೆ ಮಾಡಿಕೊಂಡಿದ್ದೇವೆ.
ನಾನೂ ಸಹಾ ಸರ್ಕಾರಿ ಶಾಲೆಯಲ್ಲಿಯೇ ವ್ಯಾಸಂಗ ಮಾಡಿ ಇಂದು ಒಂದು ಒಳ್ಳೆಯ ಸ್ಥಾನದಲ್ಲಿದ್ದು, ಸರ್ಕಾರಿ ಶಾಲೆಯ ಮಕ್ಕಳ ಶ್ರೇಯೋಭಿವೃದ್ಧಿಗೆ ನನ್ನ ಕೈಲಾದ ಅಳಿಲು ಸೇವೆಗೆ ಇದು ಅವಕಾಶವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಚೇತನ್ ಬಂಡಳ್ಳಿ ರವರು ಉಪಸ್ಥಿತರಿದ್ದು ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಕ್ಕಳಿಗೆ ಶುಭವಾಗಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಸದರಿ ಶಾಲೆಯ ಹಳೆಯ ಶಾಲಾ ಕಟ್ಟಡದ ದುರಸ್ತಿ ಕಾರ್ಯವನ್ನು ಶಾಲೆಯ ಹಳೆಯ ವಿದ್ಯಾರ್ಥಿಗಳು ಹಾಗೂ ಸಮುದಾಯದ ಸಹಕಾರ ಮತ್ತು ಶಾಲೆಗೆ ಮೊದಲಿನಿಂದಲೂ ದಾನ ನೀಡುತ್ತಾ ಬಂದಿರುವ ದಾನಿಗಳಿಂದ ದೇಣಿಗೆ ಸಂಗ್ರಹಿಸಿ ದುರಸ್ತಿ ಕಾರ್ಯವನ್ನು ನೆರವೇರಿಸಿದರು.
ಇದಕ್ಕೆ ತಗುಲಿರುವ ವೆಚ್ಚವನ್ನು ಹಳೆಯ ವಿದ್ಯಾರ್ಥಿ ಸಂಘದ ವತಿಯಿಂದ ಪಾವತಿಸಿದ್ದು ಸ್ವಲ್ಪ ಪ್ರಮಾಣದ ಕೊರತೆಯಾಗಿರುವುದಾಗಿಯೂ ಅದನ್ನು ಶ್ರೀಯುತ ಮಹದೇವ ಸ್ವಾಮಿಯವರ ಗಮನಕ್ಕೆ ತರಲಾಗಿದ್ದು, ನಮ್ಮ ಸಂಘದ ವತಿಯಿಂದ ನಮ್ಮ ಕೈಲಾದ ಸಹಾಯ ಮಾಡುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಮಹದೇವಸ್ವಾಮಿ ಅವರ ತಂದೆ ಶ್ರೀ ಸಿದ್ದಯ್ಯ, ತಾಯಿ ಶ್ರೀಮತಿ ಭಾಗ್ಯಮ್ಮ, ಧರ್ಮಪತ್ನಿ ಶ್ರೀಮತಿ ಭಾನು ಪ್ರಿಯಾ, ಸಹೋದರರಾದ ಬಾಬು ಮತ್ತು ಅರುಣ್, ಹಾಗೂ ಇವರ ಮಗಳಾದ ಯೋಗ ಶಾಲೆಯ ಶಿಕ್ಷಕರು, ಅತಿಥಿ ಶಿಕ್ಷಕರು ಹಾಗೂ ಎಸ್.ಡಿ.ಎಂ.ಸಿ ಸಮಿತಿಯ ಸದಸ್ಯರು ಹಾಜರಿದ್ದರು.