ಪಂಚ ಗ್ಯಾರಂಟಿ ಯೋಜನೆ ಯಶಸ್ವಿ ಅನುಷ್ಠಾನ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.26-ರಾಜ್ಯ ಸರ್ಕಾರಚುನಾವಣಾ ಪೂರ್ವದಲ್ಲಿ ನೀಡಿದ ಮಾತಿನಂತೆಜನರಿಗೆ ಅನುಕೂಲವಾಗುವ ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ನುಡಿದಂತೆ ಸರ್ಕಾರ ನಡೆದುಕೊಂಡಿದೆಎಂದುಕರ್ನಾಟಕರಾಜ್ಯಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದಉಪಾಧ್ಯಕ್ಷರಾದಡಾ. ಪುಷ್ಪಾಅಮರನಾಥ್ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವಕೆಡಿಪಿ ಸಭಾಂಗಣದಲ್ಲಿಂದುಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿಅವರು ಮಾತನಾಡಿದರು.
ಚುನಾವಣೆಗೂ ಮೊದಲೇಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡುವುದಾಗಿ ವಾಗ್ದಾನ ಮಾಡಲಾಗಿತ್ತು. ಅದರಂತೆಅನ್ನಭಾಗ್ಯ, ಶಕ್ತಿ ಯೋಜನೆ, ಗೃಹಜ್ಯೋತಿ, ಗೃಹಲಕ್ಷ್ಮಿ, ಯುವನಿಧಿ ಯೋಜನೆಗಳನ್ನು ಜಾರಿಗೊಳಿಸಿ ಜನರಿಗೆ ಸರ್ಕಾರ ಅನುಕೂಲ ಮಾಡಿಕೊಟ್ಟಿದೆ. ನುಡಿದಂತೆ ನಡೆದಿರುವ ಸರ್ಕಾರಜನರಿಗೆಗ್ಯಾರಂಟಿ ಯೋಜನೆಗಳ ಪ್ರಯೋಜನವನ್ನು ಸಮರ್ಪಕವಾಗಿತಲುಪಿಸುತ್ತಿದೆಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಗತಿಯನ್ನು ಪರಿಶೀಲಿಸಲಾಗುತ್ತಿದೆ. ಈಗಾಗಲೇ ದಕ್ಷಿಣಕನ್ನಡ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಸಭೆ ನಡೆಸಿ ಪ್ರಗತಿ ಪರಾಮರ್ಶೆ ನಡೆಸಿದ್ದೇನೆ. ತಾಲೂಕು ಮಟ್ಟದಲ್ಲಿಯೂ ಸಮಿತಿ ರಚಿಸಿ ಅಲ್ಲಿಯೇಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲಿಸುವ ಕಾರ್ಯವು ಮಾಡಲಾಗುತ್ತದೆ. ಯೋಜನೆ ಮುಟ್ಟಿಸುವಲ್ಲಿಯಾವುದಾದರೂತಾಂತ್ರಿಕಅಥವಾಇನ್ನಿತರತೊಡಕು ಅಡಚಣೆಗಳು ಕಂಡುಬಂದಲ್ಲಿ ಪರಿಹರಿಸುವ ಕೆಲಸವನ್ನು ಸಹ ಕೈಗೊಳ್ಳಲಾಗುತ್ತಿದೆ ಎಂದುಉಪಾಧ್ಯಕ್ಷರು ತಿಳಿಸಿದರು.
ಗ್ಯಾರಂಟಿ ಯೋಜನೆಗಳು ಆರ್ಥಿಕ ಶಕ್ತಿ, ಮಹಿಳಾ ಸಬಲೀಕರಣ, ಸ್ವಾಭಿಮಾನ ಹೆಚ್ಚಿಸಲುಅನುಕೂಲಕರವಾಗಿವೆ. ರಾಜ್ಯದಲ್ಲಿಯೇಗೃಹಲಕ್ಷ್ಮಿಯೋಜನೆ ಅನುಷ್ಠಾನದಲ್ಲಿಚಾಮರಾಜನಗರಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿಗೃಹಲಕ್ಷ್ಮಿಯೋಜನೆಗೆ 2,73,414 ನೋಂದಣಿಯಾಗಿದ್ದಾರೆ. ಶೇ. 99ರಷ್ಟು ಪ್ರಗತಿಯಾಗಿದ್ದು, ಬಾಕಿ ಉಳಿದಿರುವ ಫಲಾನುಭವಿಗಳಿಗೂ ಯೋಜನೆ ಸೌಲಭ್ಯ ಲಭಿಸಲುಇರುವ ತೊಡಕುಗಳನ್ನು ಸರಿಪಡಿಸುವಕಾರ್ಯದಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆಎಂದರು.
ಮಹಿಳೆಯರಿಗೆ ಉಚಿತ ಪ್ರಯಾಣಕ್ಕಾಗಿ ಜಾರಿಗೊಳಿಸಿರುವ ಶಕ್ತಿ ಯೋಜನೆಯಡಿಜಿಲ್ಲೆಯಲ್ಲಿ 6,27,27,062 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಗೃಹಜ್ಯೋತಿಯೋಜನೆಯಡಿಜಿಲ್ಲೆಯಲ್ಲಿ ಶೇ. 99.48ರಷ್ಟು ಸಾಧನೆಯಾಗಿದೆ. 265911 ಗ್ರಾಹಕರುಯೋಜನೆಗೆ ನೋಂದಾಯಿಸಿದ್ದಾರೆ. ಅನ್ನಭಾಗ್ಯಯೋಜನೆಯು ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದ್ದು, ಜಿಲ್ಲೆಯಲ್ಲಿಒಟ್ಟು 2,89,747 ಪಡಿತರ ಚೀಟಿಗಳಿವೆ. ಒಟ್ಟು ಪಡಿತರ ಫಲಾನುಭವಿಗಳು 8,73,225 ಇದ್ದಾರೆ. ಯುವನಿಧಿ ಯೋಜನೆಯಡಿ 2,175 ಅಭ್ಯರ್ಥಿಗಳು ನೋಂದಣಿಯಾಗಿದ್ದು, ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚು ಪ್ರಚಾರ ಕಾರ್ಯಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆಎಂದು ವಿವರಿಸಿದರು.
ಕರ್ನಾಟಕರಾಜ್ಯಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದಜಿಲ್ಲಾಧ್ಯಕ್ಷಹೆಚ್.ವಿಚಂದ್ರು, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಾಧಿಕಾರಿ ಮೋನಾ ರೋತ್, ಜಿಲ್ಲಾಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದಉಪಾಧ್ಯಕ್ಷರು, ಸದಸ್ಯರು ಸುದ್ದಿಗೋಷ್ಠಿಯಲ್ಲಿಇದ್ದರು.