ಮನೆಗೆ ನುಗ್ಗಿದ ಕಳ್ಳರು; ೨ ಲಕ್ಷ ಮೌಲ್ಯದ ಚಿನ್ನಾಭರಣ ಕಳವು
ಕಾರ್ಕಳ- ಮನೆಗೆ ನುಗ್ಗಿ ಗೊದ್ರೆಜ್ ನಲ್ಲಿ ಇಟ್ಟಿದ್ದ ೨ ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಗೈದ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದಲ್ಲಿ ಸೆ.೨೧ ರಂದು ವರದಿಯಾಗಿದೆ.
ಶಿರ್ಲಾಲು ಗ್ರಾಮದ ಲಕ್ಷ್ಮೀ ಎಂಬವರು ಬೆಳಗಿನ ವೇಳೆಯಲ್ಲಿ, ಮನೆಗೆ ಬೀಗ ಹಾಕದೆ ತನ್ನ ಅತ್ತೆಯನ್ನು ಬೀಡಿ ಬ್ರಾಂಚ್ ಗೆ ಬಿಟ್ಟು ಹೋಗಿ ವಾಪಾಸ್ ಮನೆಗೆ ಬಂದಿದ್ದಾರೆ. ಈ ನಡುವೆ ಕಳ್ಳರು ಮನೆಯ ಒಳಗೆ ಬಂದು ಗೊದ್ರೇಜ್ ಕಪಾಟಿನಲ್ಲಿ ಇಟ್ಟಿದ್ದ ಒಂದು ಮುಕ್ಕಾಲು ಪವನ್ ಚಿನ್ನದ ಪೆಂಡೆಂಟ್ ಚೈನ್ ಮತ್ತು ೨ ಪವನ್ ನ ಚಿನ್ನದ ಉಂಗುರ ಮತ್ತು ಅರ್ಧ ಪವನ್ ನ ಚಿನ್ನದ ಕಿವಿಯೋಲೆ ಸೇರಿದಂತೆ ಒಟ್ಟು ೨,೦೦,೦೦೦ ಚಿನ್ನಾಭರಣ ಕಳವು ಮಾಡಿದ್ದಾರೆ ಎಂದು ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.