ಇಂಡಿ ನಗರದಲ್ಲಿ ಬಿಡಾಡಿ ದನಗಳ ಹಾವಳಿ
ಇಂಡಿ :ಅ.5:ನಗರದ ಮುಖ್ಯ ರಸ್ತೆ ಹಾಗೂ ಬೀದಿಗಳಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಿದ್ದು, ಸಂಚಾರಕ್ಕೆ ತೊಂದರೆಯಾಗುತ್ತಿದೆ.
ನಗರದ ಬಸವೇಶ್ವರ ವೃತ್ತ,ಅಂಬೇಡ್ಕರ್ ವೃತ್ತ,ಮಹಾವಿರ ವೃತ್ತ,ಬಸ್ ನಿಲ್ದಾಣ, ಸಿಂದಗಿ ರಸ್ತೆ ಮುಂಭಾಗ, ವಿಜಯಪುರ ರಸ್ತೆ ಸೇರಿದಂತೆ ವಿವಿಧೆಡೆ ಬಿಡಾಡಿ ದನಗಳು ರಾಜಾರೋಷವಾಗಿ ರಸ್ತೆ ಮಧ್ಯೆದಲ್ಲಿಯೇ ಓಡಾಡುತ್ತಿರುತ್ತದೆ. ಇದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ನಿತ್ಯ ಪರದಾಡುತ್ತಿದ್ದಾರೆ. ಆದರೆ, ಸಂಬಂಧಪಟ್ಟ ಪುರಸಭೆ ತಮಗೂ ಇದಕ್ಕೂ ಸಂಬಂಧವಿಲ್ಲವೆಂಬಂತೆ ಕಣ್ಣು ಮುಚ್ಚಿ ಕುಳಿತಿದೆ ಎಂಬ ಆರೋಪವೂ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ವಾಹನ ಚಾಲನೆಗೆ ಸಮಸ್ಯೆ: ಬಿಡಾಡಿ ದನಗಳಿಂದ ಚಾಲಕರಿಗೆ ಅವುಗಳಿಂದ ತಪ್ಪಿಸಿಕೊಂಡು ಚಾಲನೆ ಮಾಡುವುದೇ ದೊಡ್ಡ ಸಮಸ್ಯೆ .ಇಂಡಿ ನಗರದಲ್ಲಿ ಒಂದು ಸುತ್ತು ಹೊಡೆದರೆ ದನಗಳು ಓಡಾಟವೇ ಕಂಡು ಬರುತ್ತದೆ. ಇಂಡಿ ನಗರದಲ್ಲಿ ಪಾಕಿರ್ಂಗ್ ಸಮಸ್ಯೆ ಹೆಚ್ಚಾಗಿದೆ. ಇದರ ನಡುವೆ ಇರುವ ರಸ್ತೆಗಳಲ್ಲಿ ಪಾಕಿರ್ಂಗ್ ಹೆಚ್ಚಾಗಿ ರಸ್ತೆ ಕಿರಿದಾಗಿದೆ. ಹೀಗಿರುವಾಗ ಇರುವ ರಸ್ತೆಯಲ್ಲಿ ಬಿಡಾಡಿ ದನಗಳು ಓಡಾಡಿದರೆ ಸವಾರರು ಮಾತ್ರ ಪೆಚ್ಚು ಮೋರೆ ಹಾಕಿಕೊಂಡು ದನಗಳಿಗೆ ಸ್ಥಳವಾಕಾಶ ಮಾಡಿಕೊಡುವ ಪರಿಸ್ಥಿತಿ ಬಂದೊದಗಿದೆ.
ಬೀದಿ ಬದಿ ವ್ಯಾಪಾರಕ್ಕೂ ಕಷ್ಟ: ರಸ್ತೆ ಪಕ್ಕದಲ್ಲಿ ಹಣ್ಣು, ಹಂಪಲು, ತರಕಾರಿ ಮಾರಾಟಕ್ಕೂ ಬಿಡಾಡಿ ದನಗಳಿಂದ ಸಮಸ್ಯೆ ಉಂಟಾಗುತ್ತಿದೆ. ಇಲ್ಲಿ ಬೀಳುವ ಹಣ್ಣಿನ ಸಿಪ್ಪೆಗಳೇ ಇವುಗಳ ಆಹಾರ. ಕೆಲ ದನಗಳು ಅಂಗಡಿಗಳಿಗೆ ನುಗ್ಗಲು ಪ್ರಯತ್ನಿಸುವ ಸ್ಥಿತಿ ಸಾಮಾನ್ಯವಾಗಿದೆ.
ಸಾರ್ವಜನಿಕರ ಅಸಮಾಧಾನ: ನಿತ್ಯವೂ ನಗರದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗುತ್ತಲೇ ಇರುತ್ತದೆ. ಆದರೆ, ಪುರಸಭೆ ಮಾತ್ರ ಆಗೊಮ್ಮೆ ಈಗೊಮ್ಮೆ ಕ್ರಮವನ್ನು ಕೆ?ಗೊಳುವಂತೆ ಮೇಲ್ನೋಟಕ್ಕೆ ಕಂಡು ಬಂದರು ಬಿಡಾಡಿ ಧನಗಳ ಹಾವಳಿ ನಿಂತಿಲ್ಲ. ಸಂಬಂಧಪಟ್ಟವರು ಇದರತ್ತ ಹಮನ ಹರಿಸುವ ಅಗತ್ಯವಿದೆ. ಇಲ್ಲದಿದ್ದಲ್ಲಿ ಮುಂದೆ ಹೆಚ್ಚಿನ ಅಪಾಯವುಂಟಾಗುವ ಸಾಧ್ಯತೆ ಎನ್ನುತ್ತಾರೆ ಜನತೆ.
ಗೂಳಿಗಳು ನಗರ ಮಧ್ಯೆ ಕಾಳಗಕ್ಕೆ ಇಳಿದ ಸಂದರ್ಭ ವಸಾರ್ವಜನಿಕರು ಅಪಾಯಕ್ಕೆ ತುತ್ತಾಗುವ ಸನ್ನಿವೇಶ ಎದುರಾಗಬಹುದು. ಇದಲ್ಲದೇ ಗಾಂಧಿ ವೃತ್ತದ ಬಳಿ ಕಾಳಗದಲ್ಲಿ ತೊಡಗಿದ ದನಗಳು ಬೆ?ಕ್‍ಗೆ ಡಿಕ್ಕಿ ಹೊಡೆದ ಘಟನೆಯೂ ನಡೆದಿತ್ತು. ಇದೆಲ್ಲ ನಡೆದರೂ ಸಂಬಂಧಪಟ್ಟವರೂ ಇದರ ಬಗ್ಗೆ ಗಮನ ಹರಿಸದೇ ಇರುವ ಬಗ್ಗೆ ಅಸಮಾಧಾನ ಕೇಳಿ ಬರುತ್ತಿದೆ.
ಶಾಲಾ ಮಕ್ಕಳಿಗೆ ಸಂಕಷ್ಟ: ಸಾರ್ವಜನಿಕರು ಮಾತ್ರವಲ್ಲದೇ ಶಾಲಾ ಕಾಲೇಜಿಗೆ ತೆರಳುವ ಮಕ್ಕಳಿಗೆ ಬಿಡಾಡಿ ದನಗಳಿಂದ ಹೆಚ್ಚಿನ ಸಮಸ್ಯೆ ಕಾಡುತ್ತಿದೆ. ಅದರಲ್ಲೂ ಪುಟಾಣಿ ಮಕ್ಕಳು ಶಾಲೆಗೆ ಬರಲು ಹಾಗೂ ಹಿಂತಿರುಗಲು ಪೋಷಕರನ್ನು ಅವಲಂಬಿಸಲೇ ಬೇಕಾದ ಪರಿಸ್ಥಿತಿ ಇದೆ. ಶಾಲಾ ವಾಹನದಲ್ಲಿ ತೆರಳುವ ಮಕ್ಕಳ ಬಗ್ಗೆ ಶೈಕ್ಷ ಣಿಕ ಸಂಸ್ಥೆಗಳೇ ಕಾಳಜಿ ವಹಿಸುತ್ತವೆ ಆದರೆ, ಕಾಲ್ನಡಿಯಲ್ಲಿ ತೆರಳುತ್ತಿರುವ ವಿದ್ಯಾರ್ಥಿಗಳಿಗೆ ಬಿಡಾಡಿ ದನಗಳ ಸಮಸ್ಯೆ ಎದುರಿಸುವಂತೆ ಆಗಿದೆ
ರಸ್ತೆ ಸಂಚಾರಕ್ಕೆ ಬಹಳ ಅಡಚಣೆಯಾಗುತ್ತಿದೆ. ದನಗಳು ದ್ವಿಚಕ್ರ ವಾಹನಗಳಿಗೆ ಅಡ್ಡವಾಗಿ ನಿಲ್ಲುತ್ತವೆ. ಪುರಸಭೆ ಅಧಿಕಾರಿಗಳು ಬಿಡಾಡಿ ಧನಗಳ ಹಾವಳಿ ತಡೆಗೆ ಮುಂದಾಗಬೇಕು.
ಕರವೇ ತಾಲೂಕ ಅಧ್ಯಕ್ಷರ ಶಿವು ಮಲಕಗೊಂಡ