ಆರ್.ಜೆ ಕಾಲೇಜಿನಲ್ಲಿ ವಿಶ್ವ ಪ್ರಾಣಿ ದಿನಾಚರಣೆ
ಕಲಬುರಗಿ:ಅ.5: ನಗರದ ಸರದಾರ ವಲ್ಲಭಭಾಯಿ ಪಟೇಲ್ ಎಜ್ಯುಕೇಷನ್ ಟ್ರಸ್ಟ್ ಸಂಚಾಲಿತ ರಮಾಬಾಯಿ ಜಹಾಗೀರದಾರ (ಆರ್.ಜೆ) ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಎನ್.ಎಸ್.ಎಸ್ ಘಟಕದ ವತಿಯಿಂದ ವಿಶ್ವ ಪ್ರಾಣಿ ದಿನಾಚರಣೆ ಅಂಗವಾಗಿ ಕಾಲೇಜಿನ ಪ್ರಾಂಶುಪಾಲರಾದ ಡಾ|| ಭುರ್ಲಿ ಪ್ರಹ್ಲಾದ ರವರು ವಿಶೇಷ ಉಪನ್ಯಾಸ ನೀಡಿದರು. ನಾವು ಪ್ರಾಣಿಗಳನ್ನು ಪ್ರೀತಿಸಿದರೆ ಅವುಗಳು ನಮ್ಮನ್ನು ಪ್ರೀತಿಸುತ್ತವೆ ಹಾಗೂ ಯಾವ ಪ್ರಾಣಿಗಳು ನಮ್ಮ ವೈರಿಗಳಲ್ಲ, ಏಕೆಂದರೆ ಪರಿಸರ ಸಮತೋಲನ ಆಗಬೇಕಾದರೆ ನಾವು ಪ್ರಾಣಿಗಳು ಕೂಡಿಕೊಂಡೇ ಹೋಗಬೇಕು.
ಇಂದಿನ ಆದುನಿಕ ಯುಗದಲ್ಲಿ ನಗರೀಕರಣ, ಮೊಬೈಲ್ ಬಳಕೆ ಹಾಗೂ ಮಾಲಿನ್ಯದಿಂದಾಗಿ ಕೆಲವೊಂದು ಪ್ರಾಣಿಗಳು ನಶಿಸಿ ಹೋಗುತ್ತಿವೆ, ಉದಾ: ಇಂದಿನ ದಿನಗಳಲ್ಲಿ ನಾವು ಗುಬ್ಬಿಗಳ ಕಲರವ ಕೇಳುತ್ತಿಲ್ಲ, ಪ್ರಾಣಿಗಳಿಂದ ನಮಗೆ ಪರೋಕ್ಷವಾಗಿ ಆಹಾರ ದೊರಕುತ್ತದೆ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ಉಪಯೋಗವಾಗುತ್ತವೆ. ಉದಾ: ನಮ್ಮ ಕಾಮಧೇನುವಾದ ಆಕಳುಗಳಿಂದ ಹಾಲು ಹಾಗೂ ಹಾಲಿನ ಉತ್ಪನ್ನಗಳು ದೊರೆಯುತ್ತವೆ. ಹಿಂದಿನ ಕಾಲದಲ್ಲಿ ಶಸ್ತ್ರ ಚಿಕಿತ್ಸೆಯಲ್ಲಿ ಲೀಚ(Leech) ಗಳನ್ನು ರಕ್ತ ಹೀರುವಿಕೆಯಲ್ಲಿ ಉಪಯೋಗಿಸುತ್ತಿದ್ದರು. ಈ ನಿಟ್ಟಿನಲ್ಲಿ ಭಾರತ ಸರ್ಕಾರವು ಪ್ರಾಣಿ ಹತ್ತ್ಯೆ ಕಾಯಿದೆ (Animal cruelty act) ಅನ್ವಯ ನಾವು ಪ್ರಾಣಿಗಳನ್ನು ಯಾವುದೇ ಕಾರಣಕ್ಕೂ ಕೊಲ್ಲುವುದನ್ನು ನಿಷೇದಿಸಲಾಗಿದೆ. ಉದಾ: ಈ ಕಾಯ್ದೆಯ ಅನ್ವಯ ಜೀವಶಾಸ್ತ್ರ ಪ್ರಾಯೋಗಾಲಯದಲ್ಲಿ ಯಾವುದೇ ಪ್ರಾಣೀಗಳ ಡಿಸ್ಸಕ್ಷನ್ (Dissection) ಮಾಡುವಂತಿಲ್ಲ. ಕೆಲವೊಂದು ಸನ್ನಿವೇಶಗಳಲ್ಲಿ ಮೂಡನಂಬಿಕೆಗಳಿಂದ ನಾವು ಪ್ರಾಣೀಗಳನ್ನು ದೂರವಿಡುತ್ತೇವೆ. ಉದಾ: ಹಾವುಗಳು ಸರಿಸೃಪಗಳಾಗಿದ್ದು ಅವುಗಳಿಗೆ ನಾವು ಹಾಲೆರೆದು ಪೂಜೆಯನ್ನು ಮಾಡಿ ಅವುಗಳಿಗೆ ತೊಂದರೆಯನ್ನು ಕೊಡುತ್ತೇವೆ. ಈಗಿನ ಕಾಲದಲ್ಲಿ ಪ್ರಾಣಿ ಪ್ರಿಯರು ನಾಯಿಗಳನ್ನು ಸಾಕುಪ್ರಾಣಿಗಳಾಗಿ ಸಾಕುತ್ತಿದ್ದು ಅವುಗಳ ಉಪಯೋಗ ಅಪರಾದ ಪತ್ತೆದಳ ವಿಭಾಗದಲ್ಲಿ ಗಣನೀಯವಾಗಿದೆ. ಕೆಲವೊಂದು ಪ್ರದೇಶಗಳನ್ನು ಸರ್ಕಾರವು ಪವಿತ್ರ ಸ್ಥಳಗಳೇಂದು (Sಚಿಛಿಡಿeಜ ಠಿಟಚಿಛಿes) ಎಂದು ಘೋಷಣೆ ಮಾಡಿದೆ. ಉದಾ: ನಾಗಬನಾಜ್. ಇಂದಿನ ಪೀಳಿಗೆಯು ಪ್ರಾಣಿ ಸಂಕುಲನದ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೆ ನಿಮ್ಮ ಉನ್ನತ ಶಿಕ್ಷಣವನ್ನು ಸ್ನಾತಕೋತ್ತರ ಪದವಿಗಳಾದ ಪ್ರಾಣಿ ಶಾಸ್ತ್ರ, ಕೀಟಶಾಸ್ತ್ರ, ಪಕ್ಷಿಶಾಸ್ತ್ರ ಮುಂತಾದವುಗಳ ಬಗ್ಗೆ ಅಧ್ಯಾಯನ ಮಾಡಬಹುದು. ಸಾಮಾನ್ಯ ಮಾನವರಾದ ನಾವು ಪ್ರಾಣಿಗಳಿಗೆ ತೊಂದರೆ ಕೊಡದೇ ಅವಗಳಷ್ಟಕ್ಕೆ ಅವುಗಳನ್ನು ಬಿಟ್ಟರೆ ನಮ್ಮ ದೇಶವು ಜೈವಿಕ ವೈವಿದ್ಯತೆಯಲ್ಲಿ ಮುಂಚುಣಿಯಲ್ಲಿರಬಹುದು.
ಜೀವಶಾಸ್ತ್ರ ಮುಖ್ಯಸ್ಥರಾದ ಡಿ.ಕೊಂಡಲರಾವ್ ಅವರು ಮಾತಾಡುತ್ತಾ ವಿಶ್ವ ಪ್ರಾಣಿ ದಿನಾಚಾರಣೆ 1925 ರಲ್ಲಿ ಹೆರ್ನಿಕ್ ಜಿಮ್ಮರ್ ಮನ್ ಅವರು ಪ್ರಾರಂಭಿಸಿದರು. 2024ನೇ ವಿಷಯವಾಗಿ “The world is their home too” ಎಂದು ಹೇಳಿದರು. ಘೋಷಣೆಗಳಾದ “Small or big save them all” and “Animal kill for their need, human kill for their greed” ಎಂದು ನೆನಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಡಾ|| ಸೋನಿಯಾ, ವಂದನಾರ್ಪಣೆಯನ್ನು ನವೀನ ಪಾಟೀಲ ನೆರವೇರಿಸಿದರು. ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿಗಳಾದ ಪ್ರಕಾಶ ಚವ್ಹಾಣ, ಉಪನ್ಯಾಸಕರಾದ ಅಜಯದತ್ತ್ ಉಪಸ್ಥಿತರಿದ್ದರು.