ಸರ್ಕಾರದ ಪೋಷಣ ಮಾಸಾಚರಣೆ ಕಾರ್ಯ ಶ್ಲಾಘನೀಯ: ಶಾಸಕ ಬಿ.ಆರ್.
ಆಳಂದ:ಅ.5: ಸಮಾಜದಲ್ಲಿನ ಬಡ ಮಕ್ಕಳು ಮತ್ತು ಮಹಿಳೆಯರನ್ನು ಸದೃಢಗೊಳಿಸಲು ಸರ್ಕಾರವು ಆರಂಭಿಸಿದ ಪೋಷಣ ಮಾಸಾಚರಣೆ ಕಾರ್ಯ ಶ್ಲಾಘನೀಯವಾಗಿದೆ. ಶುಶು ಅಭಿವೃದ್ಧಿ ಯೋಜನೆಯ ಮೂಲಕ ನೀಡುವ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸುವ ಕಾರ್ಯ ಯಶಸ್ವಿಯಾಗಿ ಮುನ್ನೆಡೆಯಲಿ ಎಂದು ಮುಖ್ಯಮಂತ್ರಿಗಳ ಸಲಹೆಗಾರ, ಶಾಸಕ ಬಿ.ಆರ್. ಪಾಟೀಲ ಅವರು ಇಂದಿಲ್ಲಿ ಹೇಳಿದರು.
ಪಟ್ಟಣದ ಎ.ವಿ.ಪಾಟೀಲ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಹಾಗೂ ತಾಪಂ, ಆರೋಗ್ಯ ಇಲಾಖೆ, ಪುರಸಭೆ, ಶಿಕ್ಷಣ, ಅರಣ್ಯ, ಕೃಷಿ ತೋಟಗಾರಿಕೆ ಇಲಾಖೆಯ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಪೊಷಣ ಮಾಸಾಚರಣೆ ಸಮಾರೋಪ ಉದ್ಘಾಟಿಸಿ ಮಾತನಾಡಿದರು.
ಶಿಶು ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ತಾಲೂಕಿನಾದ್ಯಂತ ತಿಂಗಳಕಾಲ ಹಮ್ಮಿಕೊಂಡ ಪೊಷಣ ಮಾಸಾಚರಣೆಯೂ ಗ್ರಾಮೀಣ ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಅರಿವು, ಪೌಷ್ಠಿಕ ಆಹಾರ ಸೇವನೆಯಂತೆ ಜಾಗೃತಿಯ ಅಧಿಕಾರಿಗಳು ಮತ್ತು ಅವರ ತಂಡದ ಕಾರ್ಯವು ಶ್ಲಾಘನೀಯವಾಗಿದೆ ಎಂದು ಹೇಳಿದರು.
ಅಂಗನವಾಡಿ ಕೇಂದ್ರಗಳಲ್ಲಿ ತಾಲೂಕಿನಲ್ಲಿ ಪ್ರತಿ ತಿಂಗಳ 15 ಕೋಟಿ ರೂಪಾಯಿ ಖರ್ಚಾಗುತ್ತದೆ. ಹಣ ಖರ್ಚಾದಂತೆ ಮಕ್ಕಳು, ಗರ್ಭೀಣಿ, ಬಾಣಂತಿಯರ ಆರೋಗ್ಯದಲ್ಲಿ ಅಮೂಲಾಗೃಹÀ ಸುಧಾರಣೆ ಕಾಣುವಂತಾಗಿ ಸಂವಿಧಾನದ ಆಶಯವನ್ನು ಈಡೇರುವಂತಾಗಬೇಕು ಎಂದು ಹೇಳಿದರು. ಸಮಾಜಕ್ಕೆ ಅಂಗನವಾಡಿ ಮಹಿಳೆಯರ ತ್ಯಾಗ ಮತ್ತು ಸಮುದಾಯದ ಮೇಲಿನ ಅವರ ಮಹತ್ವದ ಕಾರ್ಯವಾಗಿದೆ. ಸಮಾಜದಲ್ಲಿ ಮಹಿಳೆಯರು ಇನ್ನೂ ಸಮಾನತೆಯ ಸ್ಥಾನಮಾನವನ್ನು ಸಂಪೂರ್ಣವಾಗಿ ಧಕ್ಕಿಲ್ಲ. ಈ ಹಿನ್ನೆಲೆಯಲ್ಲಿ, ಮಹಿಳೆಯರು ಕಾನೂನುಬದ್ಧ ಹಕ್ಕುಗಳು ಮತ್ತು ಸಮಾನತೆಗಾಗಿ ಹೋರಾಟಕ್ಕೆ ಮುಂದಾಗಬೇಕೆಂದು ಕರೆ ನೀಡಿದರು.
ತಾಪಂ ಇಒ ಮಾನಪ್ಪ ಕಟ್ಟಿಮನಿ ಅವರು ಮಾತನಾಡಿ, ಗ್ರಾಮೀಣ ಮಕ್ಕಳು ಮಹಿಳೆಯರಲ್ಲಿಮ ರಕ್ತ ಹೀನತೆ, ಅಪೌಷ್ಠಿಕತೆ ಶಿಶು ಮರಣ ತಡೆ ಪೂಕರವಾಗಿ ಪೊಷಣ ಮಾಸಾಚರಣೆ ಆಚರಿಸಲಾಗುತ್ತಿದೆ. ಇದರ ಜಾಗೃತಿ ಭಾಗವಾಗಿ ನಿರಂತರವಾಗಿ ಫಲಾನುಭವಿಗಳು ಸೌಲಭ್ಯಗಳು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ಅತಿಥಿಗಳಾಗಿ ಪಾಲ್ಗೊಂಡಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಉಪನಿರ್ದೇಶಕ ರಾಜಕುಮಾರ ರಾಠೋಡ ಮಾತನಾಡಿ, ಇಲಾಖೆಯ ಮೂಲಕ ಮಹಿಳೆಯರು ಮತ್ತು ಮಕ್ಕಳಿಗೆ ನೀಡುವ ಸೌಲಭ್ಯ ಸದ್ಬಳಕೆ ಮಾಡಿಕೊಂಡು ಆರೋಗ್ಯ ಮತ್ತು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದರು.
ತಾಲೂಕು ಸಿಡಿಪಿಒ ಶ್ರೀಕಾಂತ ಮೇಂಗಜಿ ಮಾತನಾಡಿ, ಎಲ್ಲಡೆ ತಿಂಗಳ ಕಾಲ ಪೋಷಣ ಮಾಸಾಚರಣೆ ಕಾರ್ಯಕ್ರಮದ ಯಶಸ್ವಿಗೆ ಸಿಬ್ಬಂದಿಗಳ ಮತ್ತು ಜನರ ಸಹಕಾರ ದೊರೆತ್ತಿದೆ. ಇಲಾಖೆ ಸೌಲಭ್ಯಗಳ ಲಾಭ ಪಡೆಯಲು ಫಲಾನುಭವಿಗಳು ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣಾಧಿಕಾರಿ ಅರವಿಂದ ಭಾಸಗಿ, ವೈದ್ಯಾಧಿಕಾರಿ ಡಾ. ಸಂಗೀತಾ ಪಾಟೀಲ, ಡಾ. ಸಮೀರ್, ವಿಜಯಲಕ್ಷ್ಮೀ ನಂದಿಕೋಲಮಠ, ಬೇಬಿನಂದಾ ಎಸ್. ಪಾಟೀಲ, ಸೂರೆಖಾ ವಿ. ಪೂಜಾರಿ, ಮೀನಾಕ್ಷಿ ಹಿರೇಮಠ, ಗೋದಾವರಿ ಪತ್ತಾರ, ಲಕ್ಷ್ಮೀಗೌಡರ, ಭಾಗೀರಥಿ ಯಲಶೆಟ್ಟಿ, ಕಲಾವತಿ ಅವುಟೆ, ಕವಿತಾ ಮುಚ್ಚಳಂಬಿ, ಪದ್ಮಾವತಿ ಬಿರಾದಾರ, ನೇಹಾ ಜಾಗೀರಧಾರ, ಎಫ್‍ಡಿಎ ಪ್ರಶಾಂತ, ಚನ್ನಬಸಯ್ಯಾ, ಅಪ್ಪಾಸಾಬ, ಪಷ್ಪಾವತಿ ಚಟ್ಟಿ ಸೇರಿ ವಿವಿಧ ಇಲಾಖೆ ಸಿಬ್ಬಂದಿಗಳು, ಅಂಗನವಾಡಿ ಸಹಾಯಕಿಯರು ಮತ್ತು ಕಾರ್ಯಕರ್ತೆಯರು ಮಕ್ಕಳು ಗರ್ಭೀಣಿಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಶಾಸಕರ ಮೂಲಕ ತಾಯಿ ಹೆಸರಲ್ಲಿ ಸಸಿ ನೆಡಲಾಯಿತು. 20 ಗರ್ಭೀಣಿ ಮಹಿಳೆಯರಿಗೆ ಸಿಮಿಂತ, ಅನ್ನ ಪ್ರಶಾನ, ಮಕ್ಕಳಿಗೆ ಅಕ್ಷರ ಅಭ್ಯಾಸ, ಮಾತೃವಂದನಾ ನಡೆಯಿತು.