ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಖಂಡಿಸಿ ಎತ್ತಿನ ಬಂಡಿಯಲ್ಲಿ ಬೈಕ್ ಮೆರವಣಿಗೆ
ವಿಜಯಪುರ,ಜೂ.21: ರಾಜ್ಯ ಸರ್ಕಾರದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯನ್ನು ವಿರೋಧಿಸಿ ಬಬಲೇಶ್ವರ ಬಿಜೆಪಿ ಮಂಡಲ ವತಿಯಿಂದ ತಿಕೋಟ ಪಟ್ಟಣದಲ್ಲಿ ಎತ್ತಿನ ಬಂಡಿಯಲ್ಲಿ ಬೈಕ್ ಮೆರವಣಿಗೆ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ಮಾಡಲಾಯಿತು.
ಪ್ರತಿಭಟನೆಯ ನೇತೃತ್ವ ವಹಿಸಿದ ಮುಖಂಡ ವಿಜುಗೌಡ ಪಾಟೀಲ ಹಾಗೂ ಮುಖಂಡರು ಮಾತನಾಡಿ, ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಆಗುತ್ತಿರುವಂತಹ ಸಮಸ್ಯೆಗಳನ್ನು ಹಾಗೂ ರಾಜ್ಯ ಸರ್ಕಾರ ಹೇಗೆ ಭ್ರμÁ್ಟಚಾರದಲ್ಲಿ ಮುಳುಗಿದೆ ಎನ್ನುವದನ್ನ ಸವಿಸ್ತಾರವಾಗಿ ವಿವರಿಸಿದರು.
ವಾಲ್ಮೀಕಿ ಹಗರಣ, ಕೊ¯, ಸುಲಿಗೆ ಹಾಗೂ ಮತಕ್ಷೇತ್ರದಲ್ಲಿ ಯಾವುದೇ ಹೊಸ ಅಭಿವೃದ್ದಿ ಕಾಮಗಾರಿಗಳು ನಡೆಂiÀiದೇ ಇರುವ ಬಗ್ಗೆ ಬೆಳಕು ಚಲ್ಲಿದರು.
ಈ ಸಂದರ್ಭದಲ್ಲಿ ಬಬಲೇಶ್ವರ ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಕುರದಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರಣ್ಣ ರಾವುರ, ನಿಕಟ ಪೂರ್ವ ಕಾರ್ಯದರ್ಶಿ ಬಸವರಾಜ ಬಿರಾದಾರ, ಮಂಡಲ ಪ್ರಧಾನ ಕಾರ್ಯದರ್ಶಿ ವಿನಾಯಕ ಮಮದಾಪುರ, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಹಾವೀರ ಮಾಯಪ್ಪಗೋಳ, ಮುಖಂಡರಾದ ರಾಮು ಜಾಧವ, ರಾಜೇಂದ್ರ ಕುಲಕರ್ಣಿ, ಮಹಾನಿಂಗ ಮಂಟೂರ, ರಾವತ ಕಂಬಾರ, ಗಿರೀಶ ಕುಲಕರ್ಣಿ, ಯುವ ಮೋರ್ಚಾ ಅಧ್ಯಕ್ಷ ಸಚಿನ ಗದ್ಯಾಳ, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಎಚ್.ಎಮ್. ಅತ್ತಾರ ಹಾಗೂ ಪಕ್ಷದ ಪದಾಧಿಕಾರಿಗಳು, ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.