ಬಿ.ವಿ. ಭೂಮರಡ್ಡಿ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ
ಬೀದರ :ಜೂ.21: ನಗರದ ಪ್ರತಿಷ್ಠಿತ ಬಿ.ವಿ. ಭೂಮರಡ್ಡಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಪಿ. ವಿಠ್ಠಲ ರಡ್ಡಿಯವರು ಸಸಿಗೆ ನೀರೆರುವುದರ ಮುಖಾಂತರ ಉದ್ಘಾಟಿಸಿ ಮಾತನಾಡುತ್ತಾ ಯೋಗವು ವೇದಗಳ ಕಾಲದಿಂದ ಪಂತಜಲಿ ಮಹರ್ಷಿಯು ಯೋಗದ ಬಗ್ಗೆ ಹಲವಾರು ಮಹತ್ವದ ವಿಚಾರಗಳನ್ನು ಅಂದು ಸಂಸ್ಕøತ ಭಾಷೆಯಲ್ಲಿ ಬರೆದಿರುವ ಗ್ರಂಥ ಇಂದಿನ ಜನನಿಬಿಡ ಒತ್ತಡದ ಜೀವನದಲ್ಲಿ ಯೋಗವು ಮಹತ್ವದ ಪಾತ್ರ ವಹಿಸುತ್ತದೆ ಯೋಗದಲ್ಲಿ ಬರುವ ಪ್ರಾಣಯಾಮ, ಅನುಲೋಮ, ವಿಲೋಮ, ಧ್ಯಾನ, ಇವೇಲ್ಲವು ಮಾಡುವುದರಿಂದ ಮಾನವನ ಬುದ್ಧಿ ಮತ್ತು ಶರೀರ ಹತೋಟ್ಟಿಯಲ್ಲಿರುತ್ತದೆ ಇಂದಿನ ಜನರಿಗೆ ಬರುವ ಸಾಮಾನ್ಯ ಕಾಯಿಲೆಗಳೆಂದರೆ, ಬಿ.ಪಿ., ಸಕ್ಕರೆ ಕಾಯಿಲೆ ಇವೇಲ್ಲವುಗಳಿಗೆ ರಾಮಬಾಣ ಯೋಗವಾಗಿದೆ. ಆದ್ದರಿಂದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಾವು ಸಹ ಯೋಗ ಕಲಿತು ಕೇವಲ ಇವತ್ತಿನ ದಿನ ಸೀಮಿತವಾಗಿರದೆ ಪ್ರತಿನಿತ್ಯ ಒಂದು ತಾಸು ಯೋಗ ಸಮಯ ಕೊಟ್ಟಾಗ ಸದೃಢ ಆರೋಗ್ಯದಿಂದ ಸದೃಢ ಭಾರತ ನಿರ್ಮಾಣ ಮಾಡಬಹುದೆಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ನಿವೃತ್ತ ಉಪನ್ಯಾಸಕರಾದ ಹಾಗೂ ಯೋಗ ಗುರುಗಳಾದ ಶ್ರೀ ಗುರುನಾಥ ಮೂಲಗೆಯವರು ಮಾತನಾಡುತ್ತಾ ಯೋಗದಿಂದ ಮಾರಣಾಂತೀಕ ರೋಗಗಳಾದ ಕ್ಯಾನ್ಸರ್, ಜಠರ್ ಹಾಗೂ ಕರಳು ಬೇನೆ, ತಲೆ ನೋವು ಅತೀಯಾದ ತೂಕ ಹಾಗೂ ಅರ್ಧ ತಲೆ ನೋವು ಮುಂತಾದ ರೋಗಗಳು ನಿವಾರಣೆ ಮಾಡಬಹುದು ಹಾಗೂ ವಿದ್ಯಾರ್ಥಿಗಳು ಎತ್ತರ ಬೆಳೆಯಲು ಹಾಗೂ ನೆನಪಿನ ಶಕ್ತಿ ಹೆಚ್ಚಾಗಲು ಯೋಗದಲ್ಲಿ ಶಕ್ತಿಯಿದೆ ಆದ್ದರಿಂದ ಇಂದಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಶಾಲಾ, ಕಾಲೇಜುಗಳಲ್ಲಿ ಯೋಗದ ತರಗತಿಗಳನ್ನು ಸೇರ್ಪಡೆ ಮಾಡಿ ಯೋಗದ ಮಹತ್ವ ತಾವು ಕಲಿತು ತಮ್ಮ ಮನೆ ಹಾಗೂ ಗ್ರಾಮಗಳಲ್ಲಿ ಯೋಗ ಬಗ್ಗೆ ಜನರಿಗೆ ತಿಳಿಸಿಕೊಡಬೇಕು ಹಾಗೂ ಅವರು ಸ್ವತ: ಯೋಗದ ವಿವಿಧ ಭಂಗಿಗಳನ್ನು ವಿದ್ಯಾರ್ಥಿಗಳಿಗೆ ಸುಮಾರು ಒಂದು ತಾಸು ಹೇಳಿಕೊಟ್ಟರು ಹಾಗೂ ಪ್ರತಿನಿತ್ಯ ಯೋಗ ಮಾಡಲು ಹೇಳಿಕೊಟ್ಟರು.
ಕಾರ್ಯಕ್ರಮದ ವೇದಿಕೆಯ ಮೇಲೆ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಮಲ್ಲಿಕಾರ್ಜುನ ಕನಕಟ್ಟೆ, ಹಾಗೂ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ದೀಪಾ ರಾಗ, ಕರ್ನಾಟಕ ಪ್ರೌಢ ಶಾಲೆ ಹಾಗೂ ಎನ್.ಸಿ.ಸಿ. ಅಧಿಕಾರಿಗಳಾದ ಶ್ರೀ ಮಹಮ್ಮದ ರಫೀ ತಾಳಿಕೋಟೆ ಹಾಗೂ ಕರ್ನಾಟಕ ಮಹಾವಿದ್ಯಾಲಯದ ಎನ್.ಸಿ.ಸಿ. ಅಧಿಕಾರಿ ಲೆಫ್ಟಿನೆಂಟ್ ಶ್ರೀ ಅಶ್ವಿನಕುಮಾರ ಸಹ ಉಪಸ್ಥಿತರಿದ್ದರು.
ಕಾರ್ಯಕ್ರಮ ಮೊದಲಿಗೆ ಉಪ ಪ್ರಾಂಶುಪಾಲರಾದ ಶ್ರೀ ಅನೀಲಕುಮಾರ ಅಣದೂರೆ ಸ್ವಾಗತಿಸಿದರು ಸಿಬ್ಬಂದಿ ಕಾರ್ಯದರ್ಶಿ ಡಾ. ಮಲ್ಲಿಕಾರ್ಜುನ ವಂದಿಸಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ ಪ್ರಶಿಕ್ಷಣಾರ್ಥಿಗಳು, ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿ, ವಿದ್ಯಾರ್ಥಿನಿರು, ಶ್ರೀ ಶರಣಬಸವೇಶ್ವರ ಅಭ್ಯಾಸಾರ್ಥ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಾಗೂ ನ್ಯಾಷನಲ್ ಇಂಗ್ಲೀಷ್ ಮಾಧ್ಯಮದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದರು.