ಕೃಷಿ ಹಾಗೂ ವೈದ್ಯಕೀಯ ವಿಜ್ಞಾನಗಳು ಒಂದಕ್ಕೊಂದು ಪೂರಕ: ಡಾ. ಮುಧೋಳ
ವಿಜಯಪುರ,ಜೂ.21: ಇಂದು ಕೃಷಿ ಹಾಗೂ ವೈದ್ಯಕೀಯ ವಿಜ್ಞಾನಗಳಲ್ಲಿ ಸಾಕಷ್ಟು ಅವಿಷ್ಕಾರಗಳಾಗಿದ್ದು, ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬಿ.ಎಲ್.ಡಿ.ಇ. ಸ್ವಾಯತ್ತ ವಿವಿ ಕುಲಪತಿ ಡಾ. ಆರ್. ಎಸ್. ಮುಧೋಳ ಹೇಳಿದರು.
ನಗರದ ಹೊರವಲಯದ ಹಿಟ್ನಳ್ಳಿಯ ಕೃಷಿ ಮಹಾವಿದ್ಯಾಲಯದಲ್ಲಿ ಮಹಾವಿದ್ಯಾಲಯ ಹಾಗೂ ವಸತಿ ನಿಲಯಗಳ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಮುಂಬರುವ ದಿನಗಳಲ್ಲಿ ಕೃಷಿ ವಿದ್ಯಾರ್ಥಿಗಳಿಗೆ ಬಿ.ಎಲ್.ಡಿ.ಇ. ವಿವಿಯಿಂದ ಸಂಶೋಧನೆ ಕೈಗೊಳ್ಳಲು ಸೌಲಭ್ಯ ಕಲ್ಪಿಸಲಾಗುವುದು ಮತ್ತು ಆರೋಗ್ಯ ತಪಾಸಣೆ, ರಕ್ತದಾನ ಶಿಬಿರಗಳನ್ನು ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಆಯೋಜಿಸಲಾಗುವುದು ಎಂದರು.
ಸಾಹಿತಿ ಹಾಗೂ ಉಪನ್ಯಾಸಕ ಅಶೋಕ ಹಂಚಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಎಲ್ಲ ವಿದ್ಯೆಗಳಲ್ಲಿ ಕೃಷಿ ವಿದ್ಯೆ ಅತ್ಯಂತ ಪವಿತ್ರ ಹಾಗೂ ಶ್ರೇಷ್ಠ ವಿದ್ಯೆಯಾಗಿದೆ. ಹಿಂದೆ ಸಾಂಪ್ರದಾಯಿಕ ಪದ್ಧತಿ ಅಳವಡಿಸಿ ಆಹಾರ ಉತ್ಪಾದನೆಯನ್ನು ನಮ್ಮ ರೈತರು ಮಾಡುತ್ತಿದ್ದರು. ಆದರೆ ಜನಸಂಖ್ಯೆ ಬೆಳವಣಿಗೆಯಿಂದಾಗಿ ಇಂದು ಆಧುನಿಕ ಕೃಷಿ ಪದ್ಧತಿ ಅಳವಡಿಸಿ ಆಹಾರ ಉತ್ಪಾದನೆ ದ್ವಿಗುಣಗೊಳಿಸಬೇಕಾಗಿದೆ. ಇಂದು ಕೃಷಿಕರಿಗೆ ಹೆಣ್ಣು ಕೊಡುತ್ತಿಲ್ಲವೆಂಬ ಕೂಗು ಕೇಳಿಬರುತ್ತಿದೆ. ಆದರೆ ಕೃಷಿಯಲ್ಲಿ ಪ್ರಾವಿಣ್ಯತೆಯನ್ನು ಪಡೆದ ತಾವು ಮರಳಿ ಹಳ್ಳಿಗೆ ಹೋಗಿ ವ್ಯವಸಾಯ ಮಾಡಿ ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿ ಮಾಡಿ ತೋರಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ವಿಶೇಷ ಅಹ್ವಾನಿತರಾಗಿ ಆಗಮಿಸಿದ ಚಲನಚಿತ್ರ ನಟ ಕ್ರಾಂತಿ ಹಾಗೂ ನಟಿ ಅಮೃತಾ ಅವರು ಹಸಿರೇ ಉಸಿರು, ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು. ಈ ದೇಶದಲ್ಲಿ ಎಲ್ಲರಿಗಿಂತ ರೈತನೇ ಶ್ರೀಮಂತ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಡೀನ್ ಡಾ. ಎ. ಭೀಮಪ್ಪ ಮಾತನಾಡಿ, ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಅನೇಕ ಬಹುಮಾನಗಳನ್ನು ಪಡೆದಿರುವುದು ಹೆಮ್ಮೆಯ ಸಂಗತಿ. ದಾವಣಗೆರೆಯಲ್ಲಿ ಇತ್ತೀಚೆಗೆ ಜರುಗಿದ ರಾಷ್ಟ್ರೀಯ ಸೇವಾ ಯೋಜನೆ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಜನಪದ ನೃತ್ಯದಲ್ಲಿ ನಮ್ಮ ಕಾಲೇಜಿನ ಅಶ್ವಿನಿ ಮಾಂಡ್ರೆ ಪ್ರಥಮ ಬಹುಮಾನ ಪಡೆದಿದ್ದಾರೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ, ಸಹ ಸಂಶೋಧನಾ ನಿರ್ದೇಶಕ ಡಾ. ಅಶೋಕ ಸಜ್ಜನ, ಡಾ. ಎಮ್. ವಾಯ್. ತೆಗ್ಗಿ, ಡಾ. ಎಸ್. ಹೆಚ್. ಗೊಟ್ಯಾಳ, ಡಾ. ಎಸ್. ಹೆಚ್. ಗುತ್ತರಗಿ, ಡಾ. ಜಿ. ಶ್ರೀನಿವಾಸಲು, ಡಾ. ಬಿ. ಎಸ್. ಹರೀಶ, ಡಾ. ವಿದ್ಯಾವತಿ ಯಡಹಳ್ಳಿ, ಡಾ. ಎನ್. ಡಿ. ಸುನೀತಾ, ಡಾ. ಎಸ್. ಜಿ. ಅಸ್ಕಿ, ಡಾ. ರಮೇಶ ಬೀರಗೆ, ಡಾ. ಸಂಗೀತಾ ಜಾಧÀವ, ಡಾ. ಸಾವಿತ್ರಿ ಪಾಟೀಲ, ಡಾ. ಬಂಗಾರೆಮ್ಮ ಒಡೆಯರ, ಡಾ. ಸಿದ್ದರಾಮ ಪಾಟೀಲ, ಡಾ. ಅಶ್ವಿನಿ ಬೆಳುಂಡಗಿ, ವಿದ್ಯಾರ್ಥಿ ಮುಖಂಡರಾದ ವಿಕ್ರಮ ತುಂಬಗಿ, ರಿಹಾನ್ ಮಲ್ಲಿಕ ಹಳ್ಳೂರ, ರಕ್ಷಿತ ಬಟಕುರ್ಕಿ, ಮೌನೇಶ ಬಡಿಗೇರ, ರಾಕೇಶ ಬಡಿಗೇರ, ಪ್ರಿಯಾಂಕಾ ಆನೆಕಿವಿ, ಲಕ್ಷ್ಮೀ ಬಳ್ಳೂರ, ಅಂಕಿತಾ ಬೆಳ್ಳಿಹಾರ, ಶರಣಗೌಡ ಸೇರಿದಂತೆ ಕೃಷಿ ಕಾಲೇಜಿನ ಸಮಸ್ತ ಸಿಬ್ಬಂದಿವರ್ಗ ಮತ್ತು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದರು.