ಕನ್ನಡಿಗರ ಸಹೃದಯತೆ ವಿಶ್ವವ್ಯಾಪಿ : ಶುಭ ಧನಂಜಯ
ಇಂಡಿ : ಜೂ.21: ದಿ. ವಿಷ್ಣು ನಾಯ್ಕ ಸಂಸ್ಮರಣಾ ವೇದಿಕೆ. ಹೃದಯ ವಾಹಿನಿ ಮಂಗಳೂರು,
ಮಂಜುನಾಥ್ ಎಜುಕೇಷನ್ ಟ್ರಸ್ಟ್ (ರಿ.) ಮತ್ತು ಕನ್ನಡ ಸಂಘ ಅಂಡಮಾನ್ ಸಂಯುಕ್ತ ವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಪೆÇೀರ್ಟ್ ಬ್ಲೇರ್ ನ ಎಸ್.ಆರ್. ಕ್ಯಾಸೆಲ್ ಸಭಾಂಗಣದಲ್ಲಿ ಜೂನ್ 15, ರಂದು 19ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ ಸಂಭ್ರಮದಿಂದ ಜರಗಿತು.
ಸಮ್ಮೇಳನವನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ಶ್ರೀಮತಿ ಶುಭ ದನಂಜಯ ಅವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಕರ್ನಾಟಕದ ಕಲೆ ಮತ್ತು ಸಂಸ್ಕೃತಿ ವಿಶ್ವವ್ಯಾಪಿ ಆಗುತ್ತಿರುವುದು ಕನ್ನಡಿಗರೆಲ್ಲರೂ ಹೆಮ್ಮೆ ಪಡುವ ವಿಷಯ. ಕನ್ನಡಿಗರ ಸಹೃದಯತೆ ಇದಕ್ಕೆ ಕಾರಣ ಎಂದರು.
ಸಮ್ಮೇಳನಾಧ್ಯಕ್ಷ ಸ್ಥಾನದಿಂದ ಮಾತನಾಡಿದ ಡಾ. ಅರ್ಚನಾ ಅಥಣಿ ಅವರು, ಕರ್ನಾಟಕಕ್ಕೂ ಮತ್ತು ಅಂಡಮಾನಿಗೂ ಭಾವನಾತ್ಮಕ ಸಂಬಂಧವಿದೆ. ಸ್ವಾತಂತ್ರ್ಯದ ಕಿಡಿ ಹಚ್ಚಿದ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಉಳ್ಳಾಲದ ರಾಣಿ ಅಬ್ಬಕ್ಕ ಅವರನ್ನು ಇಲ್ಲಿ ನೆನೆಸುವುದರಿಂದ ನಮ್ಮ ದೇಶಪ್ರೇಮದ ಕೆಚ್ಚನ್ನು ಹೆಚ್ಚಿಸುವುದು ಎಂದರು.
ದಿವ್ಯ ಸಾನಿಧ್ಯ ವಹಿಸಿದ್ದ ಶಿವಗಂಗೆ ಮೇಲಣ ಗವಿಮಠದ ಡಾ.ಮಲಯಶಾಂತಮುನಿ ಶಿವಾಚಾರ್ಯ ಸ್ವಾಮಿಜಿ
ತಮ್ಮ ಆಶೀರ್ವಚನ ಭಾಷಣದಲ್ಲಿ ಪ್ರತಿಯೊಬ್ಬ ಭಾರತೀಯನು ಅಂಡಮಾನ್ ಜೈಲಿಗೆ ಭೇಟಿ ಕೊಡಬೇಕು, ಆಗ ವೀರ ಸಾವರ್ಕರ್ ಅವರಂತಹ ಸ್ವಾತಂತ್ರ್ಯ ಸೇನಾ ನಿಗಳು ಅನುಭವಿಸಿದ ಯಾತನೆ ಎಂತಹದ್ದೆಂದು ತಿಳಿದುಕೊಳ್ಳಬಹುದು. ಬ್ರಿಟಿಷರ ದೌರ್ಜನ್ಯದಿಂದ ಎಷ್ಟೋ ಭಾರತೀಯ ಸ್ವಾತಂತ್ರ್ಯ ಸೇನಾನಿಗಳು ಈ ನೆಲದಲ್ಲಿ ನರಕ ಅನುಭವಿಸಿ ಜೀವ ತೆತ್ತಿದಿದ್ದಾರೆ. ಸದಾ ಅವರನ್ನು ಸ್ಮರಿಸುವುದರಿಂದ ನಮ್ಮಲ್ಲಿ ದೇಶಾಭಿಮಾನ ಉಕ್ಕಿ ಹರಿಯುತ್ತದೆ ಎಂದರು.
ಗೌರವ ಅತಿಥಿಗಳಾದ ಅಂಡಮಾನ್ ನ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕನ್ನಡಿಗ ಡಾ. ಟಿ. ಎಸ್. ಅಶೋಕ್ ಕುಮಾರ್ ಅವರು ಮಾತನಾಡಿ, ಅಂಡಮಾನಿನ ಮಣ್ಣಿನ ಕಣಕಣದಲ್ಲೂ ಸ್ವಾತಂತ್ರ್ಯದ ಹೋರಾಟದ ಕೆಚ್ಚಿದೆ. ಇಲ್ಲಿನ ಮೂಲ ವಾಸಿಗಳಾದ ಬುಡಕಟ್ಟು ಜನರು ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ಜೀವತೆತ್ತಿದ್ದಾರೆ. ಅವರ ನಾಯಕ ವರ್ದಿನ್ ಗಾಗಿ ಅಂಡಮಾನ್ ನಲ್ಲಿ ಸ್ಮಾರಕ ನಿರ್ಮಿಸಲಾಗಿದೆ. ಈ ನೆಲಕ್ಕೆ ಕಾಲಿಟ್ಟ ಪ್ರತಿಯೊಬ್ಬ ಭಾರತೀಯ ಕೂಡ ಹಿಂದಿರುಗುವಾಗ ಅಪ್ಪಟ ದೇಶಪ್ರೇಮಿಯಾಗಿಬಿಟ್ಟಿರುತ್ತಾನೆ. ಈ ಮಣ್ಣಿಗೆ ಅಂತಹ ಶಕ್ತಿ ಇದೆ ಎಂದರು.
ವಿಶೇಷ ಆಮಂತ್ರಿತರಾದ ಖ್ಯಾತ ಚಿಂತಕರು ಮತ್ತು ವಾಗ್ಮಿ ಹಾಗೂ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ
ಶ್ರೀ ಮೊಹಮ್ಮದ್ ರಫಿ ಪಾಷ ಅವರು ಮಾತನಾಡಿ ಸಾಹಿತ್ಯದ ಸಖ್ಯ ವ್ಯಕ್ತಿಯ ಮನೋವಿಕಾಸವನ್ನು ಉಜ್ವಲಗೊಳಿಸುವಲ್ಲಿ ಪೂರಕವಾಗುತ್ತದೆ. ಸಂತುಲಿತ ಮನಸ್ಸು ಸೌಹಾರ್ದತೆಯನ್ನು ಬಯಸುತ್ತದೆ. ನಾವು ಸಾಮರಸ್ಯದ ಕೂಡಿಕೊಳ್ಳುವಿಕೆ ಮೂಲಕ. ವಿಶ್ವಮಾನವರಾಗೋಣ ಎಂದರು.
ಪ್ರಾಸ್ತಾವಿಕ ಭಾಷಣ ಮಾಡಿದ ಸಮ್ಮೇಳನ ಸಮಿತಿ ಅಧ್ಯಕ್ಷ ಕೆ. ಪಿ. ಮಂಜುನಾಥ್ ಸಾಗರ್ ಅವರು ಮಾತನಾಡಿ, ಹೃದಯವಾಹಿನಿ ಕರ್ನಾಟಕ 2004 ರಿಂದ ಪ್ರತಿ ವರ್ಷ ನಿರಂತರವಾಗಿ ದೇಶದ ವಿವಿಧ ರಾಜ್ಯಗಳ ಕನ್ನಡ ಸಂಘಗಳ ಸಹಯೋಗದೊಂದಿಗೆ 19 ರಾಷ್ಟ್ರೀಯ ಕನ್ನಡ ಸಮ್ಮೇಳನಗಳನ್ನು ಆಯೋಜಿಸಿ ಕರ್ನಾಟಕದ ಸಾವಿರಾರು ಕನ್ನಡಿಗರಿಗೆ ಕಲಾವಿದರಿಗೆ, ಕವಿಗಳಿಗೆ ಮತ್ತು ಸಂಪನ್ಮೂಲ ವ್ಯಕ್ತಿಗಳಿಗೆ ರಾಷ್ಟ್ರಮಟ್ಟದಲ್ಲಿ ವೇದಿಕೆಯನ್ನು ಕಲ್ಪಿಸುವ ಮೂಲಕ ಕನ್ನಡಿಗರ ಮನೆ ಮಾತಾಗಿದೆ ಎಂದರು. .
ಅಂಡಮಾನ್ ಕನ್ನಡ ಸಂಘದ ಕಾರ್ಯದರ್ಶಿ ಶ್ರೀಮತಿ ರೋನಿಕಾ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಗೌರವ ಅತಿಥಿಗಳಾಗಿ ಬೆಂಗಳೂರಿನ ಸ್ವಾಮಿ ಎಂಟಪ್ರ್ರೈಸಸ್ ಎಂ.ಡಿ ಶ್ರೀ ಗೊ.ನಾ. ಸ್ವಾಮಿ, ರಾಯಚೂರಿನ ಕುಬೇರ ಗ್ರೂಪ್ಸ್, ಎಂ. ಡಿ. ಡಾ. ಈ. ಆಂಜನೇಯ, ಕನ್ನಡ ಸಂಘ ಅಂಡಮಾನ್ ಕಾರ್ಯಕಾರಿ ಸಮಿತಿಯ. ಡಾ. ಶಿವಕುಮಾರ್ ಹ.ದೊ., ನಿವೃತ್ತ ಜಿಲ್ಲಾಧಿಕಾರಿ. ಡಾ. ಡಿ. ಎಸ್. ವಿಶ್ವನಾಥ್ ಐ.ಎ.ಎಸ್.(ನಿ.), ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟದ ಅಧ್ಯಕ್ಷ. ಶ್ರೀ ಕೆ. ನಾಗರಾಜ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಾ. ಪ್ರಕಾಶ ಗ. ಖಾಡೆ ಅಧ್ಯಕ್ಷತೆಯಲ್ಲಿ ಸಮ್ಮೇಳನಾಧ್ಯಕ್ಷರಾದ ಡಾ. ಅರ್ಚನಾ ಅಥಣಿ ಅವರಗೌರವ ಉಪಸ್ಥಿತಿಯಲ್ಲಿ ಕವಿಗಳಾದ ಪೆÇ್ರ. ಬಿಂಡಿಗನವೀಲೆ ಭಗವಾನ್, ಫೆÇೀಟೊ ಜರ್ನಲಿಸ್ಟ್ ಆರೀಫ್ ಕಲ್ಕಟ್ಟ, ಶ್ರೀಮತಿ ಆರತಿ ಸುರೇಶ್ ಮನು ಮಂಗಳೂರು ಕವನ ವಾಚನದೊಂದಿಗೆ ಕವಿಗೋಷ್ಟಿ ನಡೆಯಿತು
ಸಾಂಸ್ಕೃತಿಕ ಕಾರ್ಯಕ್ರಮವನ್ನು ಟಿ.ವಿ. 9 ಖ್ಯಾತಿಯ ಮಹಾದೇವ ಸತ್ತಿಗೇರಿ ಇವರಿಂದ ಹಾಸ್ಯ ಕಾರ್ಯಕ್ರಮ,
ಬೆಂಗಳೂರಿನ ರಂಗಪುತ್ಥಳಿ ಯಶೋಧ ಪಪ್ಪೆಟರಿಯ ಶ್ರೀಮತಿ ಡಾ. ಯಶೋಧ ಶಶಿಧರ್, ಗಾಯತ್ರಿ ದೇವಿ
ಮತ್ತು ಹರೀಶ್ ಇವರಿಂದ ತೊಗಲು ಗೊಂಬೆಯಾಟ,ಬೆಂಗಳೂರಿನ ನಾಟ್ಯಾಂತರಂಗ ಕಲಾವಿದರಿಂದ ಭರತನಾಟ್ಯ ರೂಪಕ ಗುರು ಶುಭಧನಂಜಯ ನೃತ್ಯ ಸಂಯೋಜನೆ ಕಲಾವಿದರಾದ ಅಂಜನ ಎಸ್., ಹರ್ಷಿತ ಎಚ್. ಪಿ.,ಮುದ್ರಾ ಧನಂಜಯ, ಮಾಯಾ ಧನಂಜಯ,ಯಾಶಿಕಾ ಜೆ. ಕುಮಾರ್, ಕೃತಿಕಾ ಆರ್.,ಕು. ಖುಷಿ ನೃತ್ಯ ಪ್ರದರ್ಶನ ನೀಡಿದರು
ಬೆಂಗಳೂರಿನ ಅಂತರಾಷ್ಟ್ರೀಯ ನೃತ್ಯ ಕಲಾವಿದೆ ಅನು ಆನಂದ್ ಅವರಿಂದ ಭರತನಾಟ್ಯ
ಬೆಂಗಳೂರಿನ ರಂಗ ಸಮಾಜ (ರಿ.) ತಂಡದಿಂದ ಐತಿಹಾಸಿಕ ಕಿರುನಾಟಕ ಕಿತ್ತೂರು ರಾಣಿ ಚೆನ್ನಮ್ಮ
ಪ್ರಧಾನ ಭೂಮಿಕೆಯಲ್ಲಿ ಎಸ್. ತಿಲಕ್ ರಾಜ್ ಮತ್ತು ಶ್ರೀಮತಿ ಎ.ಎಸ್. ಆರತಿ ಸುರೇಶ್ ಅಭಿನಯಿಸಿದರು ಅಂತರಾಷ್ಟ್ರೀಯ ಜಾನಪದ ಗಾಯಕರಾದ ಗೋನಾ ಸ್ವಾಮಿ ಮತ್ತು ಶಿವರಾಜ್ ಪಾಂಡೇಶ್ವರ ಹಾಡಿ ಪ್ರೇಕ್ಷಕರನ್ನು ರಂಜಿಸಿದರು.