ಗಾಣಿಗರ ಕುಲೋದ್ಧಾರಕರುಶ್ರೀ ಜಗದ್ಗುರು ರೇವಣಸಿದ್ಧರು:ಡಾ. ರಾಜಶೇಖರ ಶಿವಾಚಾರ್ಯರು
ಬೀದರ:ಜೂ.21:ಸಮಾಜೋಧಾರ್ಮಿಕ ಹರಿಕಾರರೆನಿಸಿರುವ ಶ್ರೀ ಜಗದ್ಗುರು ರೇವಣಸಿದ್ಧರು ಗಾಣಿಗರ ಸಮಾಜವನ್ನು ಉದ್ಧರಿಸಿದ ಮಹಿಮಾನ್ವಿತರು ಎಂದು ಬೇಮಳಖೇಡ ಮಠದ ಶ್ರೀ.ಷ.ಬ್ರ. ಡಾ|| ರಾಜಶೇಖರ ಶಿವಾಚಾರ್ಯರು ಅಭಿಪ್ರಾಯ ಪಟ್ಟರು. ಅವರು ತಾಲೂಕಿನ ಬುಧೇರಾ ಗ್ರಾಮದಲ್ಲಿಯ ಶ್ರೀ ನಾಗಣ್ಣ ಸಜ್ಜನಶೆಟ್ಟಿ ಅವರ ಮನೆಯಲ್ಲಿ ನಡೆದ ಗಾಣಿಗರ ದೇವತೆಯ ಸ್ಥಾಪನಾ ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದರು.
ಗಾಣಿಗರ ಕುಲತಿಲಕನೆನಿಸಿದ ಕಲ್ಯಾಣದ ಗಾಣದ ಕಲ್ಲಿಶೆಟ್ಟಿ (ಕ್ರಿ.ಶ.ಸು 1048) ಆ ಕಾಲದ ಪ್ರಸಿದ್ಧ ಕುಲ ಕಸುಬಿನ ಎಣ್ಣೆ ವ್ಯಾಪಾರಿಯಾಗಿದ್ದು ವ್ಯಾಪಾರದಲ್ಲಿ ನಷ್ಟ ಬಂದು ಕಷ್ಟಕ್ಕೀಡಾದಾಗ ಗುರುವಿನ ಮೊರೆ ಹೋದಾಗ ರೇವಣಸಿದ್ಧರು ಮಾರುವೇಷದಿಂದ ಭಕ್ತನ ಮನೆಗೆ ಬಂದು ಆಜ್ಞಾತ ವ್ಯಕ್ತಿಯಾಗಿ ಆರು ತಿಂಗಳು ಭಕ್ತನ ಮನೆಯಲ್ಲಿ ನೌಕರನ ರೀತಿಯಲ್ಲಿ ಕೆಲಸ ಮಾಡಿ ಅವನ ಕಷ್ಟ ಕಳೆದರಲ್ಲದೇ ಹಣದ ಹೊಳೆ ಹರಿಯುವಂತೆ ಮಾಡಿದರು. ಇದರಿಂದ ಅಗರ್ಭ ಶ್ರೀಮಂತನಾದ ಗಾಣದ ಕಲ್ಲಿಶೆಟ್ಟಿಯು ಇವರನ್ನು ಅರಿಯಲಿಲ್ಲ. ಮುಂದೆ ಅರಿತಾಗ ರೇವಣಸಿಧ್ಧರು ಅದೃಶ್ಯರಾಗಿ ಹೋದರು ಇದನ್ನು ಕಂಡು ಮಮ್ಮಲ ಮರುಗಿದ ಕಲ್ಲಿಶೆಟ್ಟಿ ದಂಪತಿಗಳು ರೇವಣಸಿದ್ಧರ ದರ್ಶನಕ್ಕಾಗಿ ಪರಿಪರಿಯಾಗಿ ಹಲುಬಿದರು. ಮಂದಿನ ಬದಕು ರೇವಣಸಿದ್ಧರ ಆಶೀರ್ವಾದಾದಿಂದ ಲೋಕದ ಕಲ್ಯಾಣ ಕಲ್ಲಿಶೆಟ್ಟಿ ದಂಪತಿಗಳು ಮುಡಪಾಗಿಟ್ಟರು. ರೇವಣಸಿದ್ಧರ ಕೃಪೆಯಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡರು. ರೇವಣಸಿದ್ಧರ ಪ್ರಸಾದ ಬಟ್ಟಲು ಪರುಷ ಬಟ್ಟಲಾಗಿ ಬದಲಾಗಿತ್ತು. ಕಷ್ಟ ಹೇಳಿಕೊಂಡು ಮನೆಗೆ ಬಂದ ಜನರಿಗೆ ಆ ಪರುಷ ಬಟ್ಟಲಿನಿಂದ ಕಷ್ಟವನ್ನು ಕಳೆದು ಸುಕೀರ್ತಿ ಪಡೆದರೆಂಬ ಈ ಅಪೂರ್ವ ಸಂಗತಿಯನ್ನು ಮಹಾಕವಿ ಹರಿಹರನು ತನ್ನ ರೇವಣಸಿದ್ಧ ರಗಳೆಯಲ್ಲಿ ಬಹು ಮಾರ್ಮಿಕವಾಗಿ ದಾಖಲಿಸಿರುವನು. ಕಲ್ಲಿಶೆಟ್ಟಿಯ ಪ್ರಾರ್ಥನೆಗೆ ಒಲಿದ ಜಗದ್ಗುರು ರೇವಣಸಿದ್ಧರು ಗಾಣಿಗ ಕುಲ ಸಿರಿ ಸಂಪತ್ತಿನ ಆಗರವಾಗಲೆಂದು ವರವನ್ನು ನೀಡಿದ್ದರಿಂದ ಇಡೀ ಗಾಣಿಗ ಸಮಾಜ ರೇವಣಸಿದ್ಧರನ್ನು ತಮ್ಮ ಕುಲದೇವರೆಂದು ಇಂದಿಗೂ ಭಕ್ತಿಯಿಂದ ನಡೆದುಕೊಳ್ಳುವರು.
ಗಾಣಿಗ ಕುಲ ತಿಲಕ ಗಾಣದ ಕಲ್ಲಿಶೆಟ್ಟಿಯ ಕುರಿತು ಸಮಾಜದಲ್ಲಿ ಹೆಚ್ಚಿನ ಪ್ರಚಾರ ಮಾಡುವುದು ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಸಮಾಜ ಮುಂದೆ ಬಂದು ಅವರ ಕುರಿತು ದೇವಸ್ಥಾನ-ಸ್ಮಾರಕಗಳು ನಿರ್ಮಾಣಗೊಳ್ಳಬೇಕೆಂದು ಶ್ರೀಗಳು ಹೇಳಿದರು.
ಉಡಮನಳ್ಳಿಯ ಪಂ. ಬಸವರಾಧ್ಯ ಶಾಸ್ತ್ರಿಗಳು, ನಾಗಣ್ಣ ಸಜ್ಜನಶೆಟ್ಟಿ ದಂಪತಿಗಳು, ಬಸಮ್ಮ ಸಜ್ಜನ, ಜಗ್ನನಾಥ ಮೊಗಡಂಪಳ್ಳಿ, ಕುಬೇಂದ್ರಪ್ಪ ಮುಂತಾದವರು ಇದ್ದರು ರಾಜಕುಮಾರ ಸಜ್ಜನಶೆಟ್ಟಿ ಎಲ್ಲರನ್ನು ಸ್ವಾಗತಿಸಿದರು