ಮದರ ತೆರೆಸಾ ಶಾಲೆಯಲ್ಲಿ ಯೋಗ ದಿನಾಚರಣೆ
ಕಲಬುರಗಿ:ಜೂ.21:ಯೋಗ ದಿನಾಚರಣೆಯ ಪ್ರಯುಕ್ತ ಮದರ್ ತೆರೆಸಾ ಆಂಗ್ಲ ಮಾಧ್ಯಮ ಶಾಲೆ ಹಾಗೂ ಇಶಾ ಫೌಂಡೇಷನ್ ಸಂಯುಕ್ತ ಆಶ್ರಯದಲ್ಲಿ 21ನೇ ಜೂನ್ 2024 ರಂದು ಬೆಳಿಗ್ಗೆ 9.00 ರಿಂದ 10.00 ಗಂಟೆಯವರೆಗೆ ಮದರ್ ತೆರೆಸಾ ಚಾರಿಟೇಬಲ್ ಟ್ರಸ್ಟ್‍ನ ಅಡಿಯಲ್ಲಿರುವ ಮದರ್ ತೆರೆಸಾ ಆಂಗ್ಲ ಮಾಧ್ಯಮ ಶಾಲೆ, ಗೋದುತಾಯಿ ನಗರ ಕಲಬುರಗಿಯಲ್ಲಿ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಇಶಾ ಫೌಂಡೇಷನ ಸ್ವಯಂ ಪ್ರೇರಿತ (ಗಿoಟuಟಿಣeeಡಿ) ರಿಂದ ದಿನನಿತ್ಯ ಯೋಗ ಮಾಡುವುದರಿಂದ ಆಗುವ ಲಾಭಗಳು, ಉತ್ತಮ ಆರೋಗ್ಯ, ಏಕಾಗ್ರತೆ, ಮಾನಸಿಕ ನಿಯಂತ್ರಣ, ಒತ್ತಡ ನಿವಾರಣೆ, ಕುಳಿತುಕೊಳ್ಳುವ ಶಾರೀರಿಕ ಭಂಗಿ, ಮಾನಸಿಕ ಉತ್ಸಾಹ ಹಾಗೂ ಜೀವನದಲ್ಲಿ ಚಟುವಟಿಕೆಯಿಂದಿರಲು ಯೋಗ ಹಾಗೂ ಧ್ಯಾನ ಬಹಳ ಮಹತ್ವದ ಪಾತ್ರವಹಿಸುತ್ತದೆ ಎಂದು ಯೋಗದ ಕುರಿತು ತಿಳಿ ಹೇಳಿದರು. ಅಲ್ಲದೇ ಈ ಸಂದರ್ಭದಲ್ಲಿ ಯೋಗಾಸನವನ್ನು ಪ್ರದರ್ಶನ ಮಾಡಿ ತೋರಿಸಿದರು.
“ಯೋಗದಿಂದ ಆರೋಗ್ಯ, ಆರೋಗ್ಯದಿಂದ ಸಮೃದ್ಧಿ” ಎಂಬ ಘೋಷ ವಾಕ್ಯದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ, ಇಶಾ ಫೌಂಡೇಷನ ಸ್ವಯಂ ಪ್ರೇರಿತ (ಗಿoಟuಟಿಣeeಡಿ) ಭಾಗವಹಿಸಿದ್ದರು ಹಾಗೂ ಮದರ್ ಶಾಲೆಯ ಪ್ರಾಂಶುಪಾಲರಾದ ಶ್ರೀ ನಾಗೇಂದ್ರ ಬಡಿಗೇರ್, ಶಾಲೆಯ ಶಿಕ್ಷಕ ವೃಂದದವರು ಸಿಬ್ಬಂಧಿ ವರ್ಗದವರು ಭಾಗವಹಿಸಿದ್ದರು.