ಕ.ಕಾ.ಪ್ರ.ದ. ಕಾಲೇಜು: 2ನೇ ದಿನದ ಎನ್.ಎಸ್.ಎಸ್. ಶಿಬಿರ
ಬೀದರ,ಜೂ.21: ಬೀದರ ವಿಶ್ವವಿದ್ಯಾಲಯ ಬೀದರ ಹಾಗೂ ಕವಿರತ್ನ ಕಾಳಿದಾಸ ಪ್ರಥಮ ದರ್ಜೆ ಕಾಲೇಜು, ಬೀದರ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ಶಿಬಿರ ಕಾರ್ಯಕ್ರಮವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿಟ್ಟಾವಾಡಿ ಯಲ್ಲಿ 2ನೇ ದಿನದ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಮಹಾತ್ಮ ಗಾಂಧಿಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸು ಮೂಲಕ ಉದ್ಘಾಟಿಸಿದ ಜಿ.ಟಿ. ಗಣಪುರಕರ್. ಸಹಾಯಕ ಪ್ರಾಧ್ಯಾಪಕರು, ಡಾ|| ಆರ್.ಅಂಬೇಡ್ಕರ ಪ್ರಥಮ ದರ್ಜೆ ಕಾಲೇಜು, ಬೀದರ ಅವರು ಮಾತನಾಡುತ್ತ, ರಾಷ್ತ್ರೀಯ ಭಾವೈಕ್ಯತೆ ಮತ್ತು ಭಾತೃತ್ವ ವಷಯದ ಇದರ ಮಹತ್ವದ ಬಗ್ಗೆ ಮಕ್ಕಳೀಗೆ ತಿಳಿಸಿ ಹೇಳಿದರು.
ಕಾಲೇಜಿನ ಡಾ. ಶ್ರೀನಿವಾಸ ಬಂಡಿ ರವರು ಅಧ್ಯಕ್ಷತೆ ವಹಿಸಿದರು ಮತ್ತು ಡಾ|| ರಾಜಕುಮಾರ ರಾಠೋಡ ರವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯತು.
ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ಅಧಿಕಾರಿಗಳಾದ ಡಾ. ಗೋವಿಂದ ಮೋತಿರಾಮ ಸ್ವಾಗತಿಸಿದರು.
ಪ್ರೋ.ಶಿವಶಂಕರ ಉಪ್ಪಿನ ನಿರೂಪಿಸಿದರೆ, ಪ್ರೋ.ಲೀಲಾವತಿ ಪೂಜಾರ ವಂದಿಸಿದರು.
ಕಾಂiÀರ್iಕ್ರಮದಲ್ಲಿ ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಇದ್ದರು.