ಯೋಗಯುಕ್ತ ಜೀವನದಿಂದ ರೋಗ ಮುಕ್ತ ರಾಷ್ಟ್ರ ನಿರ್ಮಾಣ
ಕಲಬುರಗಿ:ಜೂ.21: ಯೋಗವು ದೈಹಿಕ ಹಾಗೂ ಮಾನಸಿಕವಾಗಿ ವ್ಯಕ್ತಿಯನ್ನು ಸದೃಢವಾಗಿರುವಂತೆ ಮಾಡುವ ವೈಜ್ಞಾನಿಕ ಪದ್ದತಿಯಾಗಿದೆ. ಆದ್ದರಿಂದ ಪ್ರತಿಯೊಬ್ಬರು ಯೋಗವನ್ನು ಜೀವನದ ಅಳವಡಿಸಿಕೊಂಡರೆ ರೋಗ ಮುಕ್ತ ರಾಷ್ಟ ನಿರ್ಮಾಣವಾಗುತ್ತದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ಖಾದ್ರಿ ಚೌಕ್‍ನಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದ ಆವರಣದಲ್ಲಿ ತರಬೇತಿ ಕೇಂದ್ರ, ‘ಬಸವೇಶ್ವರ ಸಮಾಜ ಸೇವಾ ಬಳಗ’ ಮತ್ತು ‘ಶ್ರೀ ಬಸವ ಟ್ಯೂಟೋರಿಯಲ್ಸ್’ ಇವುಗಳ ವತಿಯಿಂದ ಶುಕ್ರವಾರ ಜರುಗಿದ ’10ನೇ ಅಂತಾರಾಷೀಯ ಯೋಗ ದಿನಾಚರಣೆ’ಯಲ್ಲಿ ಅವರು ಮಾತನಾಡುತ್ತಿದ್ದರು.
ಆಧುನಿಕ ಕಾಲದ ಒತ್ತಡದ ಬದುಕಿನಲ್ಲಿ ಮಾನವ ಇಂದು ತನ್ನ ಜೀವನ ಸಾಗಿಸುತ್ತಿದ್ದಾನೆ. ಸೂಕ್ತ ಸಂದರ್ಭದಲ್ಲಿ ಆಹಾರ, ವಿಶ್ರಾಂತಿ ತೆಗೆದುಕೊಳ್ಳದೆ ಕೆಲಸದ ಒತ್ತಡದಲ್ಲಿ ಜೀವನ ಸಾಗಿಸುತ್ತಿರುವದರಿಂದ ಅನೇಕ ಸಮಸ್ಯೆಗಳು ಎದುರಿಸುತ್ತಿದ್ದು, ಅದರಿಂದ ಹೊರಬರದೇ ತೊಳಲಾಡುತ್ತಿರುವ ಸಂದರ್ಭ ನಮಗೆ ಎಲ್ಲಡೆ ಕಂಡು ಬರುತ್ತಿದೆ. ಅದಕ್ಕಾಗಿ ನಾವು ಇಂದು ಪ್ರಕೃತಿ ಚಿಕಿತ್ಸೆ, ಯೋಗದಂತಹ ಪದ್ದತಿಗಳಿಗೆ ಮೊರೆಹೊಗಿ ಸದೃಢವಾದ ಆಹಾರವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆಯೆಂದರು.
ಪ್ರಾಚೀನ ಕಾಲದಿಂದಲೂ ಯೋಗವು ನಮ್ಮ ಸಂಸ್ಕøತಿಯ ಒಂದು ಭಾಗವಾಗಿ ಕಂಡು ಬರುತ್ತಿದೆ. ಅದರಲ್ಲಿ ಕಂಡು ಬರುವ ಆಸನಗಳು ಮತ್ತು ಕ್ರಿಯೆಗಳು ಹಲವಾರು ವ್ಯಾದಿಗಳನ್ನು ಗುಣಪಡಿಸುತ್ತವೆ. ಆದರೆ ಇದರ ಬಗ್ಗೆ ಹೆಚ್ಚಿನ ಜ್ಞಾನದ ಕೊರತೆಯಿಂದ ಸಾಕಷ್ಟು ಜನರು ಔಷಧಗಳ ಮೊರೆಹೋಗಿ ತಮ್ಮ ಆರೋಗ್ಯವನ್ನು ತಮ್ಮ ಕೈಯಿಂದಲೇ ಕೆಡಿಸಿಕೊಳ್ಳುವಂತಹ ಸಂದರ್ಭ ಗೋಚರವಾಗುತ್ತಿರುವದು ವಿಷಾದನೀಯ ಸಂಗತಿಯಾಗಿಯೆಂದರು.
ವಿಶ್ವದ ಮನುಕುಲಕ್ಕೆ ಭಾರತವು ನೀಡಿರುವ ಅಪೂರ್ವ ಕೊಡುಗೆಗಳಲ್ಲಿ ಯೋಗ ಪ್ರಮುಖವಾಗಿದೆ. ಇದು ಒಂದು ಅತ್ಯುತ್ತಮ ಜೀವನ ಪದ್ದತಿಯಾಗಿದೆ. ಯೋಗಾಭ್ಯಾಸದಿಂದ ದೈಹಿಕ, ಮಾನಸಿಕ, ಸ್ಥಿರತೆ ಉಂಟಾಗಿ ಸಮತೋಲನವನ್ನು ಕಾಯ್ದುಕೊಳ್ಳಬೇಕಾಗಿದೆ. ಶಾರೀರಿಕ, ಮಾನಸಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಹಂತಗಳಲ್ಲಿ ಸಮತೋಲವನ್ನು ಕಾಯ್ದುಕೊಳ್ಳುವುದು ಸ್ವಸ್ಥ ಜೀವನದ ಉದ್ದೇಶವಾಗಿದೆ. ಯೋಗದ ಗುರಿ ದೇಹ ಮತ್ತು ಮನಸನ್ನು ಸಮತೋಲನದಲ್ಲಿ ಸಾಧಿಸಿ ವ್ಯಕ್ತಿ ಮತ್ತು ಅವನ ಸುತ್ತಲಿನ ಪ್ರಪಂಚದೊಂದಿಗೆ ಸಂಪೂರ್ಣ ಏಕತೆಯನ್ನು ಸಾಧಿಸುವುದಾಗಿದೆ. ಇದು ವ್ಯಕ್ತಿಯ ಸಮಗ್ರ ವಿಕಾಸಕ್ಕೆ ಶೈಕ್ಷಣಿಕ ಪ್ರಕೃತಿಯಾಗಿದೆ ಎಂದು ಹೇಳಿದರು.
ಯೋಗ ಸಾಧಕ ಡಾ.ಸುನೀಲಕುಮಾರ ಎಚ್.ವಂಟಿ ಯೋಗಾಸನ, ಸೂರ್ಯ ನಮಸ್ಕಾರದ ವಿವಿಧ ಪ್ರಾತ್ಯಕ್ಷಿಕೆಗಳನ್ನು ತೋರಿಸಿಕೊಟ್ಟರು. ವಿದ್ಯಾರ್ಥಿಗಳು ದಿನನಿತ್ಯ ಯೋಗ ಮಾಡಬೇಕು. ಮೋಬೈಲ್ ವೀಕ್ಷಣೆಯಿಂದ ದೂರವಿರಬೇಕು ಎಂದು ತಿಳಿಸಿದರು.
ಸಕ್ಸಸ್ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಟ್ಯುಟೋರಿಯಲ್ಸ್ ಮುಖ್ಯಸ್ಥ ಮಲ್ಲಿಕಾರ್ಜುನ ಜಿಡಗೆ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಪತ್ರಿಕಾ ಕಾರ್ಯದರ್ಶಿ ದೇವೇಂದ್ರಪ್ಪ ಗಣಮುಖಿ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಶಿಕ್ಷಕ ಕೈಲಾಸ ಪಾಟೀಲ, ಸಿಬ್ಬಂದಿ ಸೋಹೆಲ್ ಶೇಖ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.