ಬಸವಲಿಂಗ ಶ್ರೀಗಳಿಗೆ ಗೌರವ ಸನ್ಮಾನ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜೂ.21: ನಗರದ ಕೊಟ್ಟೂರು ಸ್ವಾಮಿ ಮಠದಲ್ಲಿ ನಿನ್ನೆ ಸಂಜೆ ಜರುಗಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಸವ ಪುರಸ್ಕಾರ ಪ್ರಶಸ್ತಿ ಪಡೆದ, ಕರ್ನಾಟಕ ಇತಿಹಾಸ ಅಕಾಡೆಮಿ ಜಿಲ್ಲಾಧ್ಯಕ್ಷ ಟಿ. ಹೆಚ್. ಎಂ. ಬಸವರಾಜ ಅವರು ಸಭೆಯ ಸಾನಿಧ್ಯವಹಿಸಿದ್ದ ಕೊಟ್ಟೂರು ಸಂಸ್ಥಾನ‌ಮಠದ ಬಸವಲಿಂಗ ಮಹಾಸ್ವಾಮಿಗಳನ್ನು ಸನ್ಮಾನಿಸಿ ಗೌರವಿಸಿದರು.
 ಈ ಸಂದರ್ಭದಲ್ಲಿ ಮಹಾಸಭಾದ ಗಣ್ಯರು,  ಜಿಲ್ಲಾಧ್ಯಕ್ಷ ಚಾನಾಳ ಶೇಖರ್, ಡಿ. ಕಗ್ಗಲ್ ಶಂಕರ್, ಅಂಗಡಿಯ ಮಲ್ಲಿಕಾರ್ಜುನ, ಆರ್‌.ಎಚ್. ಎಂ. ಚನ್ನಬಸಯ್ಯ, ಮಹಾಸಭಾದ ಆಂದ್ರಪ್ರದೇಶದ ಅಧ್ಯಕ್ಷ  ದಂಡಿನ ಶಿವಾನಂದ,  ಶ್ರೀನಿವಾಸ್ ರೆಡ್ಡಿ, ಅರವಿ ಬಸವನಗೌಡ, ಜಾನೆ ಕುಂಟೆ ಬಸವರಾಜ್, ಉಡೇದ  ಬಸವರಾಜ್,  ದರೂರು ಶಾಂತನಗೌಡ ಮುಂತಾದವರು ಉಪಸ್ಥಿತರಿದ್ದರು