ದೊಡ್ಡಪ್ಪ ಅಪ್ಪ ಪ.ಪೂ.ವಿಜ್ಞಾನ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ
ಕಲಬುರಗಿ:ಜೂ.21:ದೊಡ್ಡಪ್ಪ ಅಪ್ಪ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು . ಶರಣಬಸವ ವಿಶ್ವವಿದ್ಯಾಲಯದ ಯೋಗ ತರಬೇತಿದಾರರು ,ಪತಂಜಲಿ ಯೋಗ ಒಕ್ಕೂಟದ ವೀರಭದ್ರಯ್ಯ ಮಠಪತಿ ಅವರು ಶಿವಪ್ರಕಾಶ್ ಮತ್ತು ಮಾದೇವ ಅವರ ಜೊತೆಗೂಡಿ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಿದರು . ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ ಈ ಕಾರ್ಯಕ್ರಮದಲ್ಲಿ ಮಠಪತಿಯವರು ಯೋಗ ಪ್ರಾತ್ಯಕ್ಷಿಕೆ ನೀಡುವ ಜೊತೆಗೆ ಯೋಗಾಸನದ ಮಹತ್ವ ಮತ್ತು ರೋಗನಿರೋಧಕ ಗುಣಗಳನ್ನು ವಿವರಿಸಿದರು . ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಯೋಗಾಸನ ಮಾಡಿದರು . ಪ್ರಾಂಶುಪಾಲರಾದ ವಿನೋದ್ ಎಲ್ ಪತಂಗೆಯವರು ಪ್ರಸ್ತಾವಿಕ ನುಡಿಗಳನ್ನಾಡಿದರು . ಡಾ. ಆನಂದ ಸಿದ್ದಾಮಣಿ ನಿರೂಪಿಸಿದರು .ಸಂದರ್ಭದಲ್ಲಿ ಬೋಧಕ ಬೋಧಕೇತರ ಸಿಬ್ಬಂದಿ ಹಾಜರಿದ್ದರು.