ವೀ.ವಿ.ಸಂಘದ ಮುನಿರಬಾದ್ ಕಾಲೇಜ್ ಲೀಜ್ 30 ವರ್ಷ ಮುಂದುವರಿಕೆಗೆ ಸರ್ಕಾರದ ಅನುಮತಿ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.21: ಕೊಪ್ಪಳ ಜಿಲ್ಲೆಯ  ಮುನಿರಾಬಾದ್‌ ಗ್ರಾಮದಲ್ಲಿ  ಇಲ್ಲಿನ ವೀರಶೈವ ವಿದ್ಯಾವರ್ಧಕ ಸಂಘ  ನಡೆಸುತ್ತಿರುವ ವಿಜಯನಗರ ಸಂಯುಕ್ತ ಪದವಿ ಪೂರ್ವ ಕಾಲೇಜಿನ  ಲೀಸ್ ನ್ನು 30 ವರ್ಷಗಳ ಅವಧಿಗೆ ಮುಂದುವರೆಸಿ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಕರ್ನಾಟಕ ನೀರಾವರಿ ನಿಗಮದ 2.70 ಎಕರೆ ಜಾಗದಲ್ಲಿ ಎರೆಡು ಕೋಟಿರೂ ಗಳಿಗೂ ಹೆಚ್ಚು ವೆಚ್ಚದಿಂದ ಇಲ್ಲಿ ಕಟ್ಟಡ ಕಟ್ಟಿರುವ ಸಂಘ.  1994 ರ ನಂತರ  ಲೀಜ್ ಮುಂದುವರೆಸಿಕೊಂಡಿರಲಿಲ್ಲ. ಸಚಿವ ಸೋಮಣ್ಣರ ಪ್ರಭಾವ ಬಳಿಸಿ  ಈ ಹಿಂದೆ ರಿನಿವಲ್ ಮಾಡಿತ್ತು‌. ಅದು ಈ ವರ್ಷಕ್ಕೆ ಮುಗಿಯುತ್ತಿತ್ತು.
ಮತ್ತೆ ಈಗ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರ ಸಹಕಾರದಿಂದ 01.04.2023 ರಿಂದ 31.03.2053
ರವರೆಗೆ ಲೀಜ್ ನ್ನು ವಿಸ್ತರಿಸಲು ಅನುಮತಿ‌ನೀಡಿದೆ. ಆದರೆ ಈವರೆಗೆ ನಿಗಧಿಯಾಗಿದ್ದ ವಾರ್ಷಿಕ ಬಾಡಿಗೆಯನ್ನು 98 ಸಾವಿರಗಳಿಂದ  2 ಲಕ್ಷ ರೂಪಾಯಿಗೆ ಹೆಚ್ಚಿಸಿ ಸಚಿವ ಸಂಪುಟ ಅನುಮೋದನೆ ನೀಡಿದೆ.
ಇದಕ್ಕಾಗಿ ಸಂಘದ ಅಧ್ಯಕ್ಷ  ಅಲ್ಲಂ ಗುತುಬಸವರಾಜ್, ಕಾರ್ಯದರ್ಶಿ ಅರವಿಂದ ಪಾಟೀಲ್,   ಮಾಜಿ ಅಧ್ಯಕ್ಷ ರಾಮನಗೌಡ,  ಅಜೀವ ಸದಸ್ಯ ಪ್ರಭುಸ್ವಾಮಿ ಅವರು ಸಚಿವ ಶರಣ ಪ್ರಕಾಶ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.