ಜಿಂದಾಲ್ ನಲ್ಲಿ ಯೋಗ  ದಿನಾಚರಣೆಸಿದ್ದರಾಮಯ್ಯ ಭಾಗಿ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ ಜೂ.21: ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಇಂದು ಗಣಿನಾಡು ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ವಿದ್ಯಾನಗರದಲ್ಲಿ ಸಂತೋಷ್ ಲಾಡ್ ಫೌಂಡೇಷನ್ ಮತ್ತು ಶ್ವಾಸ ಯೋಗ ಸಂಸ್ಥೆ ಆಯೋಜಿಸಿದ್ದ ಹಮ್ಮಿಕೊಂಡಿದ್ದ ಯೋಗ ಕಾರ್ಯಕ್ರಮದಲ್ಲಿಮುಖ್ಯಮಂತ್ರಿ ಸಿದ್ದರಾಮಯ್ಯ, ಕಾರ್ಮಿಕ  ಸಚಿವ  ಸಂತೋಷ್ ಲಾಡ್,  ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಸಂಸದ ಈ.ತುಕಾರಾಂ, ಸರ್ಕಾರದ ಕಾರ್ಯದರ್ಶಿ ತ್ರಿಲೋಕ್ ಚಂದ್ರ, ನಟಿ ಶ್ರೀಲಾಲಾ, ವಚನಾನಂದ ಸ್ವಾಮೀಜಿ, ಶಾಸಕ ಶ್ರೀನಿವಾಸ್, ಕೆಎಂಎಫ್  ಅಧ್ಯಕ್ಷ ಭೀಮಾನಾಯ್ಕ್, ಲಿಡ್ಕರ್ ಅಧಗಯಕ್ಷ ಮುಂಡ್ರಿಗಿ ನಾಗರಾಜ್ ಮೊದಲಾದವರು ಪಾಲ್ಗೊಂಡಿದ್ದರು.