ಭರಮಸಾಗರದಲ್ಲಿ “ಶಾರದ ಪುರಸ್ಕಾರ” ಕಾರ್ಯಕ್ರಮ

ದಾವಣಗೆರೆ. ಜೂ.೨೦; ಇದೇ ಜೂ. 23ರಂದು‌ ಕಳೆದ 20 ವರ್ಷಗಳಿಂದ ನಿರಂತರವಾಗಿ ಸಾಹಿತ್ಯ, ಕಲೆ, ಶಿಕ್ಷಣ, ಸಾಂಸ್ಕೃತಿಕ, ಧಾರ್ಮಿಕ ಇತರೆ ಕ್ರಿಯಾಶೀಲ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಪವಮಾನ ಪ್ರತಿಷ್ಠಾನವು ಪ್ರತಿ ವರ್ಷದಂತೆ ಈ ವರ್ಷವೂ 2023-2024 ಸಾಲಿನ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಭರಮಸಾಗರದ ಶಾಲೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ 5 ಶಾಲೆಯಿಂದ 5 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ಡಿ.ವಿ.ಎಸ್.ವಿದ್ಯಾಸಂಸ್ಥೆ ಭಾವನ ಹೆಚ್.ಎಂ., ಶ್ರೀ ಅಕ್ಕಮಹಾದೇವಿ ಬಾಲಿಕಾ ಪ್ರೌಢಶಾಲೆ ಅಂಕಿತ ವಿ., ಸರ್ಕಾರಿ ಪ್ರೌಢಶಾಲೆ ಐಶ್ವರ್ಯ ಬಿ., ಬಾಪೂಜಿ ಪ್ರೌಢಶಾಲೆ ಬಸವರಾಜ್ ಎಸ್., ಸಾನ್ವಿ ಕಶ್ಯಪ್ ಟಿ.ಪಿ. ಶಾಲೆಗೆ ಕೀರ್ತಿ ತಂದಿರುತ್ತಾರೆ.ಈ ವಿದ್ಯಾರ್ಥಿಗಳಿಗೆ ಸ್ಥಳೀಯ ವಾಣಿ ನಿವಾಸ ಅಂಗಳದಲ್ಲಿ ಜೂ. 23 ರ ಸಂಜೆ 4-30ಕ್ಕೆ ಕಾರ್ಯಕ್ರಮದಲ್ಲಿ “ಶಾರದ ಪುರಸ್ಕಾರ” ನೀಡಿ ಗೌರವಿಸಲಾಗುವುದೆಂದು ನಿರ್ದೇಶಕಿ ಅಂಜನರಾವ್ ತಿಳಿಸಿದ್ದಾರೆ.ಈ ಸಮಾರಂಭಕ್ಕೆ ಸ್ಥಳೀಯ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ರತ್ನಮ್ಮ ಆರ್. ಜಯ್ಯಣ್ಣ, ಶ್ರೀಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ, ಟ್ರಿಸ್ಟ್ ಯೋಜನಾಧಿಕಾರಿ  ನಾಗರಾಜ್ ಕುಲಾಲ್, ದಂತ ತಜ್ಞರಾದ ಡಾ. ರೂಪ ಶಶಿಕಾಂತ್, ಡಿ.ವಿ.ಎಸ್. ಆಂಗ್ಲ ಮಾಧ್ಯಮ ಉಪನ್ಯಾಸಕರು,  ಗುರುಕಮಲೇಶ್ ಜಿ.ಕೆ., ಬಿ.ಜೆ.ಪಿ. ಹಿರಿಯ ಕಾರ್ಯಕರ್ತ  ಎಸ್. ನಾರಾಯಣರಾವ್ ಭಾಗವಹಿಸುತ್ತಿದ್ದಾರೆ.