ಜೂ.25 ರಂದು ವಿಶೇಷ ಸಂಕಷ್ಟಹರ ಗಣಪತಿ ಚತುರ್ಥಿ

ಸಂಜೆವಾಣಿ ವಾರ್ತೆ
ಹಿರಿಯೂರು.ಜೂ.20- ಜೂ.೨೫ ರ ಮಂಗಳವಾರ ವಿಶೇಷ ಸಂಕಷ್ಟಹರ ಗಣಪತಿ ಚತುರ್ಥಿ ಇದ್ದು ಅಂದು ಹಿರಿಯೂರು ನಗರದ ಹುಳಿಯಾರು ರಸ್ತೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿರುವ ಈ ಅಂಗಾರಕ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.  ಇದರ ಅಂಗವಾಗಿ ಲೋಕಕಲ್ಯಾಣಾರ್ಥವಾಗಿ ಗಂಗಾ ಪೂಜೆ 108 ಮೋದಕ ಪೂಜೆ ನವಗ್ರಹ ಶಾಂತಿ ಪಂಚ ಕಲಶ ಸ್ಥಾಪನೆ ನಾಂದಿ ಪೂಜೆ ಹೋಮ ಹವನ ಕಥಾಶ್ರವಣ ನಡೆಯಲಿದೆ. ಸಂಜೆ 6 ಗಂಟೆಗೆ ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಇರುತ್ತದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಸಂಕಷ್ಟಹರ ಗಣಪತಿ ಕೃಪೆಗೆ ಪಾತ್ರರಾಗುವಂತೆ ಪೂಜಾ ಕಾರ್ಯಕ್ರಮ ಸಂಯೋಜಕರು ಮನವಿ ಮಾಡಿದ್ದಾರೆ