ನ್ಯಾಷನಲ್ ಯೂತ್ ಐಕನ್ ಪ್ರಶಸ್ತಿ”ಗೆ ಆಯ್ಕೆ

ಸಂಜೆವಾಣಿ ವಾರ್ತೆ
ದಾವಣಗೆರೆ. ಜೂ.೨೦;  ಸಾಮಾಜಿಕ ಯುವ ಚಿಂತಕ, ಸಾಮಾಜಿಕ ಹೋರಾಟಗಾರ, ದಾವಣಗೆರೆ ಜಿಲ್ಲಾಡಳಿತ ವತಿಯಿಂದ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ. ಮತ್ತು ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಮೆಮೋರಿಯಲ್ ಅವಾರ್ಡ್ ಪ್ರಶಸ್ತಿ ಪುರಸ್ಕೃತರಾದ ಸೇರಿದಂತೆ 9ರಾಜ್ಯ ಪ್ರಶಸ್ತಿ 8 ರಾಷ್ಟ್ರ ಪ್ರಶಸ್ತಿ ಪಡೆದಿರುವ ಸಂತೋಷ್ ಕುಮಾರ್ ರವರು ಸುಮಾರು 15 ವರ್ಷಗಳಿಂದ ವೃದ್ಧರು, ನಿರಾಶ್ರಿತರು, ದೀನ ದಲಿತರಿಗೆ ಸಹಾಯಸ್ತಾ ತೋರಿರುವಿದಲ್ಲದೆ, ಬಡ ಮಕ್ಕಳಿಗೆ ಪುಸ್ತಕ, ಸಮವಸ್ತ್ರ ವಿತರಣೆ, ಅಂಗವಿಕಲರಿಗೆ ಹಣ್ಣು ಹಂಪಲು ವಿತರಣೆ, ಪರಿಸರ ದಿನಾಚರಣೆ ಪ್ರಯುಕ್ತ ಸಸಿಗಳ ವಿತರಣೆ, ಮಹಿಳಾ ದಿನಾಚರಣೆ, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಾಕರುಗಳಿಗೆ ಸನ್ಮಾನಿಸುವುದು ಹಾಗೂ ಮತ್ತು ಆರೋಗ್ಯ ಇಲಾಖೆಯಲ್ಲಿ ಸೈಕಿಯಾಟ್ರಿಕ್ ಸೋಷಿಯಲ್ ವರ್ಕರ್ ಆಗಿ ಮನೋರೋಗಿಗಳ ಮನೆಭೇಟಿ ನೀಡಿ ಅವರಿಗೆ ಚಿಕಿತ್ಸೆ, ಆಪ್ತಸಮಾಲೋಚನೆ,ಮನೋವೈದ್ಯಕಿಯ ಶಿಕ್ಷಣ ನೀಡಿ ಅನುಸರಣೆ ಕಳೆದ 8 ವರ್ಷಗಳಿಂದ ಮಾಡುತ್ತಿದ್ದಾರೆ ಆದ್ದರಿಂದ ಇವರ ಅನುಪಮ ಸೇವೆಯನ್ನು ಗುರುತಿಸಿ ಏಶಿಯನ್ ಇಂಟರ್ ನ್ಯಾಷನಲ್ ಕಲ್ಚರಲ್ ರೀಸರ್ಚ್ ಯೂನಿವರ್ಸಿಟಿ ವತಿಯಿಂದ ಕೊಡಮಾಡುವ “ನ್ಯಾಷನಲ್ ಯೂತ್ ಐಕಾನ್ ಅವಾರ್ಡ್” ಗೆ ಆಯ್ಕೆಮಾಡಲಾಗಿದೆ ಮತ್ತು ಇದೆ ಜೂನ್ 29 ರಂದು ಸಂತೋಷ್ ಕುಮಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಏಶಿಯನ್ ಇಂಟರ್ ನ್ಯಾಷನಲ್ ಕಲ್ಚರಲ್ ರೀಸರ್ಚ್ ಯೂನಿವರ್ಸಿಟಿಯೂ ಪ್ರಕಟಣೆಯಲ್ಲಿ ತಿಳಿಸಿದೆ