ಮುಖ್ಯ ಸಚೇತಕ ಸಲೀಂ ಅಹ್ಮದ್ ಗೆ ಸನ್ಮಾನ

ದಾವಣಗೆರೆ. ಜೂ.೨೦; ಸರ್ಕಾರದ ವಿಧಾನ ಪರಿಷತ್‌ನ  ಮುಖ್ಯ ಸಚೇತಕರಾದ ಸಲೀಂ ಅಹ್ಮದ್ ರವರು ಹಾವೇರಿಗೆ ಹೋಗುವ ಮಾರ್ಗ ಮಧ್ಯೆ ದಾವಣಗೆರೆ ಸರ್ಕೀಟ್ ಹೌಸ್‌ಗೆ ಭೇಟಿ ನೀಡಿದಾಗ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್ ರವರು ಸಲೀಂ ಅಹ್ಮದ್ ರವರಿಗೆ ಶಾಲು ಹೊದಿಸಿ ಹೂವು ಗುಚ್ಛ ನೀಡಿ ಸ್ವಾಗತಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಬಿ.ಎನ್. ವಿನಾಯಕ, ಕೆ.ಎಂ. ಮಂಜುನಾಥ್, ಡಿ. ಶಿವಕುಮಾರ್, ಬಿ.ಹೆಚ್. ಉದಯಕುಮಾರ್, ಬಿ.ಎಸ್. ಸುರೇಶ್, ಎಂ.ಆರ್. ಈಶ್ವರ್ ಸೇರಿದಂತೆ ಇತರರು ಹಾಜರಿದ್ದರು.