ಮಕ್ಕಳಲ್ಲಿ ಬುನಾದಿ ಸಾಕ್ಷರತೆ, ಸಂಖ್ಯಾಜ್ಞಾನ ಸಾಮರ್ಥ್ಯ ಬೆಳೆಸಿ

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜೂ.21; ಮಕ್ಕಳಲ್ಲಿ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ಸಾಮರ್ಥ್ಯ ಪರಿಣಾಮಕಾರಿಯಾಗಿ ಬೆಳೆಸಬೇಕು ಎಂದು ಡಯಟ್‌ನ ಹಿರಿಯ ಉಪನ್ಯಾಸಕ ಎಸ್.ಜ್ಞಾನೇಶ್ವರ ಹೇಳಿದರು. ನಗರದ ಡಯಟ್ ನಲ್ಲಿ ಜಿಲ್ಲೆಯ ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ಕನ್ನಡ ಭಾಷಾ ಶಿಕ್ಷಕರಿಗೆ ಈಐಓ ಮತ್ತು ಓPಇP(ರಾಷ್ಟಿçÃಯ ಜನಸಂಖ್ಯಾ ಶಿಕ್ಷಣ ಯೋಜನೆ)ಕಾರ್ಯ ಚಟುವಟಿಕೆಗಳ ಮಾಹಿತಿ ಕುರಿತು ಬುಧವಾರ ಆಯೋಜಿಸಿದ್ದ ಜೂಮ್ ಸಭೆಯಲ್ಲಿ ಮಾತನಾಡಿ, ಪ್ರತಿ ಮಾಹೆ ಶಾಲಾ ಹಂತದಲ್ಲಿ ಮಾನಕಗಳನ್ನು ಬಳಸಿ ವಿದ್ಯಾರ್ಥಿಗಳ ಈಐಓ ಸಾಧನೆಯ ಪ್ರಗತಿ ಪರಿಶೀಲಿಸಿ ಮಾರ್ಗದರ್ಶನ ಮಾಡಬೇಕು ಎಂದರು.ಉಪನ್ಯಾಸಕ ಯು.ಸಿದ್ದೇಶಿ ಮಕ್ಕಳಲ್ಲಿ ಪ್ರಸ್ತುತ ಇರುವ ಬುನಾದಿ ಸಾಕ್ಷರತೆ ಸಾಮರ್ಥ್ಯ ಮಾಹಿತಿ ಪರಿಶೀಲಿಸಿ ಮಾತನಾಡಿ, ಕೌನ್ ಬನೆಗಾ ಸ್ವರಾಧಿಪತಿ ರಸಪ್ರಶ್ನೆ ಕಾರ್ಯಕ್ರಮದ ಮೂಲಕ ಸ್ವರ, ವ್ಯಂಜನ, ಗುಣಿತಾಕ್ಷರದ ಪರಿಕಲ್ಪನೆ ಗುರುತಿಸಿ ವಿವಿಧ ಕಾರ್ಯ ತಂತ್ರಗಳ ಮೂಲಕ ಮಕ್ಕಳಲ್ಲಿ ಓದು ಬರಹದ ಸಾಮರ್ಥ್ಯ ಬೆಳೆÀಸಿ ಭಾಷಾ ಸಾಮರ್ಥ್ಯ ಹೆಚ್ಚಿಸಬೇಕು ಎಂದರು.ಎನ್.ಪಿ.ಇ.ಪಿ ಜಿಲ್ಲಾ ನೋಡಲ್ ಅಧಿಕಾರಿ ಎಸ್.ಬಸವರಾಜು ಮಾತನಾಡಿ, ಮಕ್ಕಳಲ್ಲಿ ಆತ್ಮವಿಶ್ವಾಸ, ಸಂವೇದನಾಶೀಲತೆ ಬೆಳೆಸುವುದರ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಎನ್.ಪಿ.ಇ.ಪಿ ಚಟುವಟಿಕೆಗಳು ಪೂರಕವಾಗಿವೆ. ಆಯುಷ್ಮಾನ್ ಭಾರತ ಯೋಜನೆಯ ಶಾಲಾ ಆರೋಗ್ಯ ಮತ್ತು ಕ್ಷೇಮ ಕಾರ್ಯಕ್ರಮವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಸಹಯೋಗದಲ್ಲಿ ನಡೆಸುವ ಕಾರ್ಯಕ್ರಮವಾಗಿದ್ದು ಸದರಿ ಕಾರ್ಯಕ್ರಮವನ್ನು ಎನ್.ಸಿ.ಇ.ಆರ್.ಟಿ ಯ ಎನ್.ಪಿ.ಇ.ಪಿ ವತಿಯಿಂದ ಅನುಷ್ಠಾನಗೊಳಿಸಲಾಗುತ್ತದೆ. ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್‌ರವರ ಮಾರ್ಗದರ್ಶನದಲ್ಲಿ ಪ್ರಸಕ್ತ ವರ್ಷದಲ್ಲಿ ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳಲ್ಲಿ ಆರೋಗ್ಯಕರವಾಗಿ ಬೆಳೆಯುವುದು, ಅಂತರ ವ್ಯಕ್ತೀಯ ಸಂಬAಧಗಳು, ಭಾವನಾತ್ಮಕ ಸ್ವಸ್ಥತೆ ಮತ್ತು ಮಾನಸಿಕ ಆರೋಗ್ಯ, ಮೌಲ್ಯ ಮತ್ತು ಜವಾಬ್ದಾರಿಯುತ ನಾಗರಿಕ, ಲಿಂಗ ಸಮಾನತೆ, ಆರೋಗ್ಯ ಮತ್ತು ನೈರ್ಮಲ್ಯ, ಮಾದಕ ವಸ್ತುಗಳ ದುರ್ಬಳಕೆ ತಡೆಗಟ್ಟುವಿಕೆ, ವಿದ್ಯುನ್ಮಾನ ಉಪಕರಣಗಳು, ಅಂತರ್ಜಾಲ ರಕ್ಷಣಾತ್ಮಕ ಬಳಕೆ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗುವುದು. ಮುಖ್ಯ ಶಿಕ್ಷಕರು ಪರಿಣಾಮಕಾರಿಯಾಗಿ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿ ಶಾಲೆಯಲ್ಲಿ ಪ್ರತ್ಯೇಕವಾಗಿ ಎನ್.ಪಿ.ಇ.ಪಿ ಕಡತ ನಿರ್ವಹಿಸಬೇಕು ಎಂದರು.
