ಭಗವದ್ಗೀತಾ ಬೋಧಕ ಕೃಷ್ಣಪ್ಪರಿಗೆ ಸನ್ಮಾನ
ವಿಜಯಪುರ -ಆಧ್ಯಾತ್ಮಿಕ ಚಿಂತನೆಗಳು ನಮ್ಮ ಜೀವನದಲ್ಲಿ ಅತ್ಯಾಮೂಲ್ಯವಾಗಿದೆ. ಚಿಂತನೆಗಳನ್ನು ಅಳವಡಿಸಿಕೊಂಡು ಭಕ್ತಿ ಮಾರ್ಗದಲ್ಲಿ ನಡೆಯಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷರಾದ ಜೆ. ಆರ್ ಮುನಿ ವೀರಣ್ಣನವರು ತಿಳಿಸಿದರು
ವಿಜಯಪುರ ಸೀನಿಯರ್ ಚೇಂಬರ್ ಹಾಗೂ ವಿಜಯಪುರ ಜೆಸಿಐ ಸಂಸ್ಥೆಯ ವತಿಯಿಂದ ಪಟ್ಟಣದ ಅಶೋಕನಗರ ಮೂರನೇ ಕ್ರಾಸ್ ನಲ್ಲಿರುವ ಜೆ ಆರ್ ಮುನಿವೀರಣ್ಣ ನವರ ನಿವಾಸದಲ್ಲಿ ಸುಬ್ಬರಾಯ ಶರ್ಮ ಸತ್ಸಂಗ ಸೇವಾ ಸಮಿತಿಯ ಮುಖ್ಯಸ್ಥರು ಹಾಗೂ ಭಗವದ್ಗೀತ ಪ್ರಚಾರಕರಾಗಿ ಉಚಿತ ಸೇವೆ ಸಲ್ಲಿಸುತ್ತಿರುವ, ಗೀತಾ ಪ್ರವಚನ ಮತ್ತು ಭಕ್ತಿ ಮಧು ಪುಸ್ತಕಗಳ ಲೇಖಕರಾಗಿರುವ ಎಂ ಕೃಷ್ಣಪ್ಪ ದಾಸರ ಅಭಿನಂದನಾ ಕಾರ್ಯಕ್ರಮದಲ್ಲಿ ಅವರನ್ನು ಅಭಿನಂದಿಸಿ ಮಾತನಾಡುತ್ತಿದ್ದರು.
ಈ ಸಮಾರಂಭದಲ್ಲಿ ಬುಳ್ಳಹಳ್ಳಿಯ ಶ್ರೀ ಸದ್ಗುರು ಮಂಜುನಾಥ್ ಮಹಾರಾಜ್ ಸ್ವಾಮಿಗಳು ರಾಷ್ಟ್ರೀಯ ಉಪಾಧ್ಯಕ್ಷರಾದ ಡಾ. ಎಂ. ಶಿವಕುಮಾರ್, ರಾಷ್ಟ್ರೀಯ ಸಂಯೋಜಕರಾದ ಎನ್ ಜಯರಾಮ್, ವಿ ವೆಂಕಟೇಶ್, ಸೀನಿಯರ್ ಸಂಸ್ಥಾಪಕ ಅಧ್ಯಕ್ಷರಾದ ಕೆವಿ ಬೈರೇಗೌಡ, ಸೀನಿಯರ್ ಚೇಂಬರ್ ಅಧ್ಯಕ್ಷರಾದ ದಿನ್ನೂರು ಕೆ ವೆಂಕಟೇಶ್, ಸಹ ಕಾರ್ಯದರ್ಶಿಯಾದ ವಿ.ಆನಂದ್ , ಪುರಸಭಾ ಸದಸ್ಯರುಗಳಾದ ಸಿ. ನಾರಾಯಣಸ್ವಾಮಿ ಹಾಗೂ ಎಂ ರಾಜಣ್ಣ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಚೆಂದ್ರಶೇಖರ್ ಹಡಪದ್, ಜೇಸಿಐ ೧೪ರ ವಲಯ ಅಧಿಕಾರಿಗಳಾದ ಎನ್ ಸಿ ಮುನಿ ವೆಂಕಟರಮಣ, ಜೆ ಸಿ ಐ ಅಧ್ಯಕ್ಷರಾದ ಬೈರೇಗೌಡ, ಕಾರ್ಯದರ್ಶಿಯಾದ ಮಾಧವಿ ರಮೇಶ್, ಜೆಸಿಐ ಮಾಜಿ ಅಧ್ಯಕ್ಷರಾದ ಎಂ ಮುನಿಕೃಷ್ಣ, ಎಸ್ ರಮೇಶ್, ಎ ಮಂಜುನಾಥ್, ಎಸ್ ವಿ ಬಸವರಾಜ್,ಶ್ರೀನಿವಾಸ ಭಟ್ಟಾಚಾರ್ಯ, ಜನಾರ್ದನ್ ಮೂರ್ತಿ, ನಿಕಟ ಪೂರ್ವ ಕಾರ್ಯದರ್ಶಿಯಾದ ಪುನೀತ್ ಆರಾಧ್ಯ, ಸದಸ್ಯರುಗಳಾದ ಶಶಿಕುಮಾರ್, ಎಂ ನಾಗರಾಜ್, ಜೆ ಟಿ ನಾರಾಯಣ ಸ್ವಾಮಿ, ಮುರುಳಿ, ಕರ್ನಾಟಕ ತಿಗಳ ಜನಾಂಗದ ನಿರ್ದೇಶಕರಾದ ಎನ್ ಕನಕರಾಜ್, ರಜನಿ ಕನಕರಾಜ್, ಮುನಿನಾರಾಯಣಪ್ಪ, ಜಿಎಂ ಚಂದ್ರು, ಆಂಜಿನಪ್ಪ (ಗುಂಡಣ್ಣ), ಪೊಲೀಸ್ ನಾಗರಾಜಣ್ಣ, ಎಲ್ ಸುಬ್ರಮಣಿ ,ಶಿಕ್ಷಕರಾದ ಎ ಬಿ ಪರಮೇಶ್ ಹಾಗೂ ಸಿ ಎಂ ನಾಗರಾಜ್ ಉಪಸ್ಥಿತರಿದ್ದರು.