ಚಿರತೆ ದಾಳೆಗೆ ಮೇಕೆ ಮರಿ ಬಲಿ
ಸಂಜೆವಾಣಿ ವಾರ್ತೆ
ಹನೂರು ಜೂ 21 :- ಸಮೀಪದ ಚಿಕ್ಕಮಾಲಾಪುರ ತೋಟದ ಮನೆಯ ರೈತ ಮಾದಪ್ಪ ಅವರಿಗೆ ಸೇರಿದ ಮೇಕೆ ಮನೆಯ ಮುಂಭಾಗ ಕಟ್ಟಿ ಹಾಕಲಾಗಿತ್ತು ಚಿರತೆ ದಾಳಿ ಮಾಡಿದ ಹಿನ್ನೆಲೆಯಲ್ಲಿ ಬುಧವಾರ ಬೆಳಗಿನ ಜಾವ ಮೇಕೆ ಬಲಿಯಾಗಿರುವ ಘಟನೆ ನಡೆದಿದೆ.
ಚಿರತೆ ತೋಟದ ಮನೆಯಲ್ಲಿ ಕಟ್ಟಿ ಹಾಕಲಾಗಿದ್ದ ಮೇಕೆಯನ್ನು ಬಲಿ ಪಡೆದಿರುವುದರಿಂದ ಇಲ್ಲಿನ ತೋಟದ ಮನೆಯ ರೈತರು ಹಾಗೂ ಈ ಭಾಗದಲ್ಲಿ ಸಂಚರಿಸುವ ನಾಗರಿಕರು ಭಯಬಿತರಾಗಿದ್ದಾರೆ ಕೂಡಲೇ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಚಿರತೆಯನ್ನು ಸೆರೆ ಹಿಡಿಯಲು ಕ್ರಮ ಕೈಗೊಳ್ಳಬೇಕು ಎಂದು ರೈತ ಮಾದಪ್ಪ ಹಾಗೂ ಈ ಭಾಗದಲ್ಲಿರುವ ತೋಟದ ಮನೆಯ ರೈತರು ಒತ್ತಾಯಿಸಿದ್ದಾರೆ.
ಅರಣ್ಯದಂಚಿನ ತೋಟದ ಜಮೀನುಗಳಿಗೆ ಚಿರತೆ ದಾಳಿ ಮಾಡಿ ರೈತ ಮಾದಪ್ಪನ ಮೇಕೆಯನ್ನು ಬಲಿ ಪಡೆದಿರುವುದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ರೈತನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಕಾಡುಪ್ರಾಣಿಗಳ ಹಾವಳಿ ತಡೆಗಟ್ಟಲು ಅಧಿಕಾರಿಗಳ ನಿರ್ಲಕ್ಷ ರೈತರ ಆರೋಪ : ಕಳೆದ ಹಲವಾರು ದಿನಗಳಿಂದ ಲೋಕ್ಕನಹಳ್ಳಿ ಆಂಡಿಪಾಳ್ಯ ತೋಟದ ಜಮೀನುಗಳ ಬಳಿ ಕಾಡಾನೆಗಳಿಂದ ರೈತರ ಫಸಲು ನಾಶಗೊಳಿಸುತ್ತಿದ್ದು ಜೊತೆಗೆ ಚಿರತೆ ಸಹ ಮತ್ತೊಂದೆಡೆ ಮೇಕೆ ಬಳಿ ಪಡೆದಿರುವುದರಿಂದ ಕಾಡುಪ್ರಾಣಿಗಳ ಹಾವಳಿ ನಿಯಂತ್ರಿಸಲು ಶಾಶ್ವತ ಪರಿಹಾರ ನೀಡಬೇಕು ಎಂದು ರೈತರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.