ರಸ್ತೆ ಅಭಿವೃದ್ಧಿಗೆ ೨೫ ಕೋಟಿ ಬಿಡಗಡೆ
ಕೋಲಾರ,ಜೂ,೨೧- ಕೋಲಾರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಕಾಮಗಾರಿಗಳಿಗೆ ರಾಜ್ಯ ಸರ್ಕಾರವು ರಸ್ತೆಗಳ ಅಭಿವೃದ್ದಿಗೆ ೨೫ ಕೋಟಿ ಬಿಡುಗಡೆ ಮಾಡಿದೆ. ಕೋಲಾರ ಕ್ಷೇತ್ರದ ಶಾಸಕರಾದ ಕೊತ್ತೂರು ಮಂಜುನಾಥ್ ಹಾಗೂ ವಿಧಾನ ಪರಿಷತ್ ಸದಸ್ಯರಾದ ಎಂ.ಎಲ್.ಅನಿಲ್ ಕುಮಾರ್ ಅವರ ಒತ್ತಾಸೆಯ ಮೇರೆಗೆ ಸರ್ಕಾರವು ಅನುದಾನವನ್ನು ಬಿಡುಗಡೆ ಮಾಡಿದೆ ಜುಲೈ ಅಂತ್ಯದೊಳಗೆ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ಲೋಕೋಪಯೋಗಿ ಇಲಾಖೆಯ ಸಹಾಯ ಕಾರ್ಯಪಾಲಕ ಇಂಜನಿಯರ್ ಎಂ.ಮಂಜುನಾಥ್ ತಿಳಿಸಿದರು,
ನಗರ ಲೋಕೋಪಯೋಗಿ ಇಲಾಖೆಯಲ್ಲಿ ಭೇಟಿಯಾದ ಮಾಧ್ಯಮದವರೊಂದಿಗೆ ಅವರು ಮಾತನಾಡಿ ಎಸ್.ಹೆಚ್.೯೬,ದೇವನಹಳ್ಳಿ ಕೆಂಪಾಪುರ ರಸ್ತೆಯಿಂದ ಗದ್ದೆ ಕಣ್ಣೂರು ಗ್ರಾಮಕ್ಕೆ ಹೋಗುವ ರಸ್ತೆ ಅಭಿವೃದ್ದಿಗೆ ೩೦೦ ಲಕ್ಷ ರೂ, ಕೋಲಾರ ತಾಲ್ಲೂಕು ಎನ್.ಹೆಚ್.-೭೫ ರಿಂದ ವಕ್ಕಲೇರಿ-ಮಾರ್ಕಂಡಪುರ-ಅರಾಭಿಕೊತ್ತನೂರು ಜಿಲ್ಲಾ ಮುಖ್ಯ ರಸ್ತೆಗೆ ಸೇರುವ ರಸ್ತೆ ಸೇರುವ ರಸ್ತೆ ಅಭಿವೃದ್ದಿ ೩,೬ ಕಿ.ಮೀ ಹಾಗೂ ಖಾಜಿ ಹಳ್ಳಿ ಮೂಲಕ ಆಂಜನೇಯ ಸ್ವಾಮಿ ಬೆಟ್ಟಕ್ಕೆ ಹೋಗುವ ರಸ್ತೆ ನಿರ್ಮಾಣದ ಕಾಮಗಾರಿಗೆ ೫೦೦ ಲಕ್ಷ ರೂ ನಿಗಧಿ ಪಡೆಸಲಾಗಿದೆ ಎಂದರು,
ಕೋಲಾರ ತಾಲ್ಲೂಕು ಕ್ಯಾಲನೂರು ಜಿಲ್ಲಾ ಮುಖ್ಯ ರಸ್ತೆಯಿಂದ ವೇಮಗಲ್ ಹೊಸಹಳ್ಳಿ, ಜಿಲ್ಲಾ ಮುಖ್ಯ ರಸ್ತೆಗೆ ವಯಾ ಬೈರಂಡ ಹಳ್ಳಿ, ಸೀತಿ ಹೊಸೂರು,ಚಂಚಿಮಲೆ ರಸ್ತೆ ಅಭಿವೃದ್ದಿ ೬.೮ ಕಿ.ಮಿ ರಸ್ತೆ ಕಾಮಗಾರಿಗೆ ೫೦೦ ಲಕ್ಷ ರೂ ನಿಗಧಿ ಪಡೆಸಿದೆ ಎಂದು ಹೇಳಿದರು,
ಕೋಲಾರ ತಾಲ್ಲೂಕು ರಾಷ್ಟ್ರೀಯ ಹೆದ್ದಾರಿ-೭೫ ( ಎನ್.ಹೆಚ್,-೪) ರಿಂದ ನರಸಾಪುರ ಗ್ರಾಮದ ಮೂಲಕ ಹಾದು ಹೋಗಿ ರಾಷ್ಟ್ರೀಯ ಹೆದ್ದಾರಿ-೭೫ ರಿಂದ (ಎನ್.ಹೆಚ್.-೪)ನ್ನು ಸೇರುವ ಸರಪಳಿ ೨.೩೫ ರಿಂದ ೩.೨೦ ಕಿ.ಮೀ.ವರೆಗೆ ೪ ಪಥದ ರಸ್ತೆ ನಿರ್ಮಾಣ ಕಾಮಗಾರಿಗೆ ೭೦೦ ಲಕ್ಷ ರೂ ನಿಗಧಿ ಪಡೆಸಿದೆ ಎಂದರು.
ಕೋಲಾರ-ಮಾಲೂರು-ಹೊಸೂರು(ಎಸ್.ಹೆಚ್- ೨೩೫) ಎ.ಪಿ.ಎಂ.ಸಿ. ಮುಂಭಾಗ ಎಡಭಾಗದ ರಸ್ತೆ ೭೦೦ ಮೀ.ಸಿ.ಸಿ.ರಸ್ತೆ ಹಾಗೂ ಬಾಕ್ಸ್ ಡ್ರೈನ್ ನಿರ್ಮಾಣ ಮತ್ತು ೮.೦೫ ಕಿ.ಮೀ.ರಿಂದ ೮.೬೦ ಕಿ.ಮೀ. ವರೆಗೆ ರಸ್ತೆ ಅಭಿವೃದ್ದಿ ಕಾಮಗಾರಿಗೆ ೭೦೦ ಕೋಟಿ ರೂ ನಿಗಧಿ ಪಡೆಸಲಾಗಿದೆ ಎಂದರು.
ಒಟ್ಟಾರೆಯಾಗಿ ೫ ಮಹತ್ವದ ರಸ್ತೆ ಕಾಮಗಾರಿಗಳಲ್ಲಿ ಒಟ್ಟು ೨೫೦೦ ಲಕ್ಷ ರೂಗಳನ್ನು ಸರ್ಕಾರವು ಬಿಡುಗಡೆ ಮಾಡಿದೆ ಎಂದು ವಿವರಿಸಿದರು,
ಕೋಲಾರ ನಗರದಲ್ಲಿ ಸಂಚಾರದ ಒತ್ತಡವನ್ನು ನಿಯಂತ್ರಿಸುವ ದೆಸೆಯಲ್ಲಿ ನಗರ ಹೊರವಲಯದಲ್ಲಿ ಚರ್ತುಥ ಪಥ ( ೪ ಪಥ) ವರ್ತೂಲ ರಸ್ತೆಯನ್ನು ನಿರ್ಮಿಸುವಂತ ಬಹುದಿನದ ಕನಸನ್ನು ಶೀಘ್ರದಲ್ಲೇ ನನಸು ಮಾಡಲು ಶಾಸಕ ಕೊತ್ತೂರು ಮಂಜುನಾಥ್ ಮತ್ತು ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್‌ಕುಮಾರ್ ಅವರುಗಳ ಸಕಾರದ ಮೇಲೆ ಒತ್ತಡ ಹೇರಿ ಕಾಮಗಾರಿಯನ್ನು ಮಂಜೂರು ಮಾಡಿಸಿದ್ದಾರೆ ಎಂದರು.
ಈ ಯೋಜನೆ ರಾಜ್ಯ ಹೆದ್ದಾರಿಯಿಂದ ೩೦.೬ ಕಿ.ಮಿ. ವಿಸ್ತೀರ್ಣತೆ ಹೊಂದಿದೆ. ಕೋಲಾರದಿಂದ ಬೆಂಗಳೂರು ಮಾರ್ಗ ರಾಷ್ಟ್ರೀಯ ಹೆದ್ದಾರಿ ೭೫ ಜಂಕ್ಷನ್ ನಿಂದ ಮುಳಬಾಗಿಲು ಮಾರ್ಗದ ಚದುಮನಹಳ್ಳಿ ರಸ್ತೆಯನ್ನು ಸಂಪರ್ಕಿಸಲಿದೆ, ಪ್ರಥಮವಾಗಿ ಎನ್.ಹೆಚ್.೭೫ರ ನಾಗಲಾಪುರ ಚಿಕ್ಕಬಳ್ಳಾಪುರ ರಸ್ತೆಯ ತಲಗುಂದ, ಚಿಕ್ಕಬಳ್ಳಾಪುರ ದಿಂದ ಚಿಂತಾಮಣಿ ಮಾರ್ಗ( ವೈಯಾ ಉರಿಗಿಲಿ ಮತ್ತು ಹನುಮಂತಪುರ ಮಾರ್ಗ) ಕಲ್ಲೂರು, ಜನ್ನಘಟ್ಟ, ಮಾರ್ಗವಾಗಿ ಶ್ರೀನಿವಾಸಪುರದ ರಸ್ತೆ ಕೊಡುವ ಬೆಳ್ಳಂಬೂರಿ ,ಮಣಿಘಟ್ಟ, ಮತ್ತಿಕುಂಟೆ, ಪಾರೇಹೊಸಹಳ್ಳಿ, ಚದು|ಮನ ಹಳ್ಳಿ ಮಾರ್ಗವಾಗಿ ಎನ್.ಹೆಚ್.೭೫ರ ರಸ್ತೆಯನ್ನು ಸಂರ್ಪಕಿಸಲಿದೆ.
ಕೋಲಾರ ಮುಳಬಾಗಿಲು ರಾಷ್ಟ್ರೀಯ ಹೆದ್ದಾರಿ ಮಾರ್ಗದ ಕಾಳಹಸ್ತಿಪುರ, ಬೇತಮಂಗಲ, ಬಂಗಾರಪೇಟೆ, ಟೇಕಲ್.ಮಾಲೂರು ಮಾರ್ಗವಾಗಿ ಎನ್.ಹೆಚ್.೭೫ ಹೆದ್ದಾರಿಯನ್ನು ಸಂರ್ಪಕಿಸಲಿದೆ ಈ ಯೋಜನೆಯ ಡಿ.ಪಿ.ಆರ್. ಸಿದ್ದಪಡೆಸಲಾಗುತ್ತಿದೆ.
ನಾಗಲಾಪುರದಿಂದ ಚದುಮನಹಳ್ಳಿಯ ವರೆಗಿನ ವರ್ತೂಲ ರಸ್ತೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಬೈರತಿ ಸುರೇಶ್ ಅವರು ಸರ್ಕಾರದಿಂದ ಈಗಾಗಲೇ ೧೦೦ ಕೋಟಿ ರೂ ಮೀಸಲಿಡಲಾಗಿದೆ ಎಂದಿದ್ದಾರೆ. ಈ ಯೋಜನೆ ಸುಮಾರು ೨೦.ಕಿ.ಮಿ. ರಸ್ತೆ ಅಭಿವೃದ್ದಿ ಯೋಜನೆಯಾಗಿದ್ದು ಇದಕ್ಕೆ ಅಗತ್ಯವಾದ ೧೬ ಎಕರೆ ಜಮೀನು ಸ್ವಾಧೀನ ಪಡೆಸಿ ಕೊಳ್ಳಲು ೧೬ ಕೋಟಿ ರೂ ನಿಗಧಿ ಪಡೆಸಿದೆ ಎಂದು ಹೇಳಿದರು,