ಪ್ರತಿಭಾನ್ವಿತರಿಗೆ ಪ್ರೋತ್ಸಾಹ
ಕನಕಪುರ.ಜೂ೨೧:ಕಳೆದ ೧೫ ವರ್ಷಗಳಿಂದ ಗಾಣಿಗರ ಸಂಘದಆಶ್ರಯದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರತಿವರ್ಷ ಪ್ರೋತ್ಸಾಹಿಸಿಕೊಂಡು ಬರಲಾಗುತ್ತಿದೆಎಂದು ಸಂಘದಅದ್ಯಕ್ಷ ಕೆ. ಕೃಷ್ಣಪ್ಪ ತಿಳಿಸಿದ್ದಾರೆ.
ನಗರದ ಶ್ರೀ ಕೊಂದಂಡರಾಮಸ್ವಾಮಿದೇವಾಲಯದಲ್ಲಿಗಾಣಿಗರ ಸಂಘದವತಿಯಿಂದಜನಾಂಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿ ಮಾತನಾಡಿದರು.
೧೯೫೩ರಲ್ಲಿ ನಮ್ಮ ಕುಲಬಾಂಧವರು ವಯುಕ್ತಿಕಧನಸಹಾಯದೊಂದಿಗೆ ಪ್ರತಿಭಾನ್ವಿತರನ್ನು ಪ್ರೋತ್ಸಾಹಿಸಿಕೊಂಡು ಬಂದಿದ್ದರು. ನಮ್ಮಜನಾಂಗದ ಪ್ರತಿಭಾನ್ವಿತರುಇತರೆ ಸಮಾಜದೊಂದಿಗೆತಲೆಎತ್ತಿ ಬಾಳುವಂತೆ ಮಾಡಿರುವುದು ಶ್ಲಾಘನೀಯವೆಂದರು. ನಮ್ಮ ಸಂಘವು ಜನಾಂಗದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಮಟ್ಟಕ್ಕೆ ಬೆಳೆದಿದೆ ಇದಕ್ಕೆ ನಮ್ಮಜನಾಂಗಎಲ್ಲಾ ಮುಖಂಡರ ಸಹಕಾರ ದಿಂದ ಸಾಧ್ಯವಾಗಿದೆಎಂದು ತಿಳಿಸಿದರು.
ಈ ದಿನದಕಾರ್‍ಯಕ್ರಮ ಯಶಸ್ವಿಯಾಗಿ ನಡೆಯಲು ಮೂಲ ಸಂಸ್ಥಾಪಕರುಗಳಾದ ಕೆ.ಬಿ. ಅನ್ನದಾನಶೆಟ್ಟಿ, ಕೆ. ಮಾದುಶೆಟ್ಟೆಯಜಮಾನ್‌ಗೋವಿಂದಶೆಟ್ಟಿ, ಕೋಟೆ ಕೆ. ವೆಂಕಟಗಿರಿಶೆಟ್ಟಿ ಹಾಗೂ ಕೆ.ಎಸ್. ರೇವಶೆಟ್ಟಿಯವರನ್ನುಇಂದು ನಾವು ನೆನಪು ಮಾಡಿಕೊಳ್ಳಬೇಕೆಂದ ಅವಶ್ಯಕತೆಇದೆಎಂದರು.ಸಂಘದ ಪ್ರಧಾನ ಕಾರ್‍ಯದರ್ಶಿ ಪಿ. ಲೋಕೇಶ್ ಮಾತನಾಡಿಗಾಣಿಗಜನಾಂಗದ ಮಕ್ಕಳು ಹೆಚ್ಚು ವಿದ್ಯಾವಂತರಾಗಬೇಕುಅದಕ್ಕೆ ಬೇಕಾದಅಗತ್ಯ ಸಹಕಾರವನ್ನು ನಮ್ಮ ಸಂಘವು ಪ್ರತಿವರ್ಷ ಮಾಡಿಕೊಂಡು ಬಂದಿದೆಎಂದರು.ಮುಂದಿನ ದಿನಗಳಲ್ಲಿ ಮತ್ತಷ್ಟುಅಭಿವೃದ್ದಿಕಾಣಬೇಕಾದರೆ ನಮ್ಮ ಸಂಘದ ಹೆಸರಿನಲ್ಲಿ ಸಮುದಾಯ ಭವನ ನಿರ್ಮಾಣದಗುರಿಯನ್ನು ಹಮ್ಮಿಕೊಳ್ಳಲಾಗಿದೆ ಆ ನಿಟ್ಟಿನಲ್ಲಿ ಹೆಚ್ಚಿನ ಕೆಲಸವನ್ನುಮಾಡಲಾಗುತ್ತಿದೆಎಂದರು.
ಈ ಸಂದರ್ಭದಲ್ಲಿ ಸಂಘದ ಸಹಕಾರ್‍ಯದರ್ಶಿ ವಿ. ರಾಮಕೃಷ್ಣ, ಉಪಾಧ್ಯಕ್ಷರಾದಎನ್. ನಾಗರಾಜು, ತಮ್ಮಯ್ಯ ಶೆಟ್ಟಿ, ಸಿ. ನಾಗರಾಜು, ಖಜಾಂಚಿಗಳಾದ ಆರ್. ಸುರೇಶ್, ಹಾಗೂ ಚನ್ನಕೇಶವ ಮಾತನಾಡಿ ಈ ವರ್ಷ ೩೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿದರು. ಉಚಿತ ನೋಟ್ ಬುಕ್, ಪೆನ್ನು ಸೇರಿದಂತೆಇನ್ನಿತರೆ ಪರಿಕರಗಳನ್ನು ನೀಡಲಾಯಿತುಎಂದರು.
ಹಾಗೆಯೇ ಸಂಘಟನಾ ಕಾರ್‍ಯದರ್ಶಿಗಳಾದ ಎಂ. ಶಂಕರ್, ಕೆ.ಟಿ. ನಾರಾಯಣಸ್ವಾಮಿ, ಸಂಚಾಲಕರುಗಳಾದ ಸಿ.ಕೆ. ನಾಗರಾಜು, ವಿ. ಸುರೇಶ್, ಶೆಟ್ಟಿಗಾರು ಮಜ್ಜಿಗೆ ವೆಂಕಟಪ್ಪ, ತರಕಾರಿ ಮಂಡಿ ಸುರೇಶ್, ವೆಂಕಟರಮಣಸ್ವಾಮಿಯವರುಗಳು ಮಾತನಾಡಿ ಮುಂದಿನ ದಿನಗಳಲ್ಲಿ ನಮ್ಮ ಮಕ್ಕಳ ಭವಿಷ್ಯಉತ್ತಮ ವಾಗಿರಬೇಕದರೆಇಂತಹ ಕಾರ್‍ಯಕ್ರಮಗಳು ಹೆಚ್ಚು ಹೆಚ್ಚು ನಡೆಯುತ್ತಿರಬೇಕೆಂದುತಮ್ಮಅಭಿಪ್ರಾಯ ವ್ಯಕ್ತಪಡಿಸಿದರು.
ಸಂಘದಗೌರವಾಧ್ಯಕ್ಷರಾದ ದಿ.ಎಂ. ಶ್ರೀನಿವಾಸ್‌ರವರ ಪುತ್ರಿಕೆ.ಎಸ್. ನಳಿನಾರವರು ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ವಿದ್ಯಾಥಿಗಳಿಗೆ ತಮ್ಮತಂದೆಯ ನೆನಪಿನಾರ್ಥವಾಗಿತಲಾ ೧೫೦೦ ಸಾವಿರ ಸಹಾಯಧನ ನೀಡಿದರು.
ನಗರಸಭಾ ಮಾಜಿ ಸದಸ್ಯರುಗಳಾದ ನಾಗೇಶ್, ಗಂಗಾಧರ್, ಮಹೇಶ್, ರವಿ ಧನಂಜಯ್ಯ, ಕಬ್ಬಾಳಮ್ಮ ನಾಗರಾಜು, ಪರಮೇಶ್, ಶಿವಮಾದ್, ವೆಂಕಟರಮಣಪ್ಪ, ಸಂಚಾಲಕರುಗಳಾದ ರೇಷ್ಮೆಇಲಾಖೆಯ ನಿವೃತ್ತ ನೌಕರರಾದ ನಾಗರಾಜು, ಹಾಗೂ ಸುರೇಶ್ ಸೇರಿದಂತೆಎಲ್ಲಾ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು. ಹಾಗೆಯೇಇದೇ ಸಂದರ್ಭದಲ್ಲಿಎಲ್ಲರಿಗೂಉಪಹಾರದ ವ್ಯವಸ್ಥೆಯನ್ನುಕಲ್ಪಿಸಲಾಗಿತ್ತು.