ಇಂಗ್ಲಿಷ್ ಮಾಧ್ಯಮ ತರಗತಿ ಉದ್ಘಾಟಿಸಿದ ಶಾಸಕ ಚವ್ಹಾಣ
ಸಂಜೆವಾಣಿ ವಾರ್ತೆ
ಔರಾದ :ಜೂ.21: ತಾಲೂಕಿನ ಮಹಾರಾಷ್ಟ್ರದ ಗಡಿಭಾಗಕ್ಕೆ ಹೊಂದಿಕೊಂಡಿರುವ ಬಾದಲಗಾಂವ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮ ಎಲ್ ಕೆಜಿ ಯುಕೆಜಿ ಹಾಗೂ ಒಂದನೇ ತರಗತಿಯನ್ನು ಶಾಸಕ ಪ್ರಭು ಚವ್ಹಾಣ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಪ್ರಭು ಚವ್ಹಾಣ ಅವರು, ತಮ್ಮ ಗ್ರಾಮದಲ್ಲಿ ಇಂಗ್ಲಿಷ್ ಮಾದ್ಯಮ ತರಗತಿ ಪ್ರಾರಂಭವಾಗಿದೆ ತಾವೆಲ್ಲಾ ತಮ್ಮ ತಮ್ಮ ಮಕ್ಕಳಿಗೆ ಇಲ್ಲಿಯೇ ವಿದ್ಯಾಭ್ಯಾಸ ನೀಡಿ ತಮ್ಮ ಮಕ್ಕಳ ಉಜ್ವಲ ಭವಿಷ್ಯ ರೂಪಿಸಿ ಕೊಡಿ, ಈ ಜಗತ್ತಿನಲ್ಲಿ ಎಲ್ಲಕಿಂತ ದೊಡ್ಡ ಆಯುಧ ಅದು ಶಿಕ್ಷಣವಾಗಿದೆ ಹೀಗಾಗಿ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ದೊಡ್ಡಿ ಅವರು ಮಾತನಾಡಿ ಸರ್ಕಾರ ಇಂಗ್ಲಿಷ್ ಮಾದ್ಯಮ ತರಗತಿ ಪ್ರಾರಂಭಮಾಡಿದ್ದು ಖುಷಿಯ ಸಂಗತಿ ಹೀಗಾಗಿ ಎಲ್ಲಾ ಶಿಕ್ಷಕರು ಪ್ರಾಮಾಣಿಕವಾಗಿ ಮಕ್ಕಳಿ ಗುಣಮಟ್ಟದ ಶಿಕ್ಷಣ ಕಲ್ಪಿಸಬೇಕೆಂದು ತಿಳಿಸಿದರು.
ಈ ಸಂಧರ್ಭದಲ್ಲಿ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ರಾಮದಾಸ ಪಾಟೀಲ, ಇಸಿಓ ಸಂಜು ಮೇತ್ರೆ, ಬಲಭೀಮ್ ಕುಲಕರ್ಣಿ, ಈಶ್ವರ ಕ್ಯಾದೆ, ಮಹಾದೇವ ಘೂಳೆ, ಶಿವಾಜಿರಾವ ಪಾಟೀಲ, ಗ್ರಾಮ ಪಂಚಾಯತ ಸದಸ್ಯರಾದ ಛಬ್ಬುಬಾಯಿ, ಸೋಪನರಾವ ಶೇರಿಕಾರ, ಹಾಗೂ ಊರಿನ ಮುಖಂಡರಾದ ಜನಾರ್ಧನ ಪಾಟೀಲ್, ಉದ್ದವ ಪಾಟೀಲ್, ಕಿಶನ ರಾಠೋಡ, ಗೌತಮ, ದೇವಿದಾಸ ಕಾಂಬಳೆ, ಜ್ಞಾನೋಬಾ ಭಾಸ್ಕರೆ, ಹಣಮಂತ, ಪಂಢರಿನಾಥ ಹಂಬಲಪೂರೆ, ದಾಮೊದಾರ ಸೇರಿಕಾರ,ಹಾಗೂ ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಮಾರ್ಥಾ ಬಾಯಿ ಹಾಗೂ ಶಾಲೆಯ ಸಿಬ್ಬಂದಿ ವರ್ಗದವರು ಶಾಲಾ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹೊಸ ಕೊಠಡಿ ನಿರ್ಮಾಣ ಮಾಡಿಕೊಡುವಂತೆ ಮನವಿ
ಬಾದಲಗಾಂವ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ರಾಮದಾಸ ಪಾಟೀಲ ಅವರು, ಶಾಲೆಯ ಕೊಠಡಿಗಳು ಶಿಥಿಲಗೊಳ್ಳುತ್ತಿವೆ ಮಕ್ಕಳು ಭಯದಲ್ಲಿ ವಿದ್ಯಾಭ್ಯಾಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಹೀಗಾಗಿ ಹಳೆ ಕೊಠಡಿಗಳನ್ನು ನೆಲಸಮ ಮಾಡಿ ಆರು ಹೊಸ ಕೊಠಡಿ ನಿರ್ಮಿಸಿಕೊಡಬೇಕೆಂದು ಶಾಸಕ ಪ್ರಭು ಚವ್ಹಾಣ ಅವರಿಗೆ ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಶಾಸಕರು ಹೊಸ ಕೊಠಡಿ ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ನೀಡಿದರು.