ಸರ್ಕಾರಿ ವೈದ್ಯಕೀಯ ಕಾಲೇಜ ಮಂಜೂರಾತಿಗೆ ಆಗ್ರಹಿಸಿ ಹೋರಾಟ: ಶ್ರೀಶೈಲ ಮುಳಜಿ
ಸಂಜೆವಾಣಿ ವಾರ್ತೆ,
ವಿಜಯಪುರ,ಜೂ.21:ಐತಿಹಾಸಿಕ ವಿಜಯಪುರ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್ ಮಂಜೂರಾತಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣ ಬೀದಿಗಿಳಿದು ಹೋರಾಟ ಮಾಡಲಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ನೂತನ ಜಿಲ್ಲಾ ಅಧ್ಯಕ್ಷ ಶ್ರೀಶೈಲ ಮುಳಜಿ ಅವರು ತಿಳಿಸಿದರು.
ಗುರುವಾರ ನಗರದಲ್ಲಿ ಪತ್ರಿಕಾ ಗೋಷ್ಠಿಯನ್ನುದ್ದೇಶಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್ ಬೇಡಿಕೆ ಇದೆ. ತಾಂತ್ರಿಕ ನೆಪವೊಡ್ಡಿ ಸರ್ಕಾರ ವೈದ್ಯಕೀಯ ಕಾಲೇಜ ಸ್ಥಾಪನೆಗೆ ಮೀನ ಮೇಷ ಎನಿಸುತ್ತಿದೆ. ಆದ್ದರಿಂದ ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ತೀವ್ರ ಒತ್ತಡ ಹೇರಲಾಗುವುದು ಎಂದರು.
ವಿಜಯಪುರ ಜಿಲ್ಲೆಯಲ್ಲಿ ಕನ್ನಡ ನಾಮಫಲಕಗಳನ್ನು ಶೇ. 60ರಷ್ಟು ಕನ್ನಡ ಹಾಗೂ ಶೇ. 40 ಅನ್ಯ ಭಾಷೆ ನಾಮಫಲಕಗಳನ್ನು ಅಂಗಡಿ ಮುಂಗಟ್ಟು ಹಾಗೂ ಸಂಘ ಸಂಸ್ಥೆಗಳು ಅಳವಡಿಸಿಕೊಳ್ಳಬೇಕು ಎಂದು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮಾಡಿದ್ದರೂ ಜಿಲ್ಲಾಡಳಿತ ಕಾರ್ಯ ರೂಪಕ್ಕೆ ಇಳದಿಲ.್ಲ ಇದೇ ರೀತಿ ಈ ವಿಷಯದಲ್ಲಿ ನಿರ್ಲಕ್ಷ ತೋರಿದರೆ ಬರುವ ದಿಗಳಲ್ಲಿ ಈ ನಿಟ್ಟಿನಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದರು.
ಬರಗಾಲದಿಂದ ತತ್ತರಿಸಿರುವ ವಿಜಯಪುರ ಜಿಲ್ಲೆಯಲ್ಲಿ ಮುಂಗಾರು ಮಳೆ ಉತ್ತಮ ಆಗಿರುವ ಪ್ರಯುಕ್ತ ರೈತರಿಗೆ ಬೀಜ ಗೊಬ್ಬರ ಆದಷ್ಟು ಬೇಗನೆ ಕೈಗೆ ತಲುಪಬೇಕು ಬೆಲೆ ಗಗನಕ್ಕೆ ಏರಿವೆ ರೈತರ ಪರ ಇರುವ ಸರ್ಕಾರ ಕೂಡಲೇ ಬೆಲೆ ಕಡಿಮೆ ಮಾಡಿ ಸಬ್ಸಿಡಿ ರೂಪದಲ್ಲಿ ರೈತರನ್ನು ರಕ್ಷಣೆ ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ಡಾ. ಸರೋಜಿನಿ ಮಹಿಷಿ ವರದಿ ಸಮಗ್ರ ಜಾರಿಗಾಗಿ ಮುಂಬರುವ ದಿನಗಳಲ್ಲಿ ರಾಜ್ಯಾಧ್ಯಕ್ಷÀ ಟಿ.ಎ. ನಾರಾಯಣಗೌಡರ ನೇತೃತ್ವದಲ್ಲಿ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ವಿಧಾನ ಸೌಧ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಅಷ್ಟೇ ಅಲ್ಲದೆ ವಿಜಯಪುರ ಜಿಲ್ಲೆಯಾದಂತ್ಯ ವಾರದಲ್ಲಿ ಒಂದೆರಡು ಕೊಲೆ,ಸುಲಿಗೆ ಅತ್ಯಾಚಾರ,ದರೋಡೆಗಳು ನಿರಂತರವಾಗಿ ನಡೆಯುತ್ತಿವೆ. ಇದಕ್ಕೆ ಜಿಲ್ಲಾ ಪೆÇಲೀಸ್ ಇಲಾಖೆ ಕಡಿವಾಣ ಹಾಕಲು ಮುಂದಾಗಬೇಕೆಂದು ಒತ್ತಾಯಿಸಿದರು. ಇಲಾಖೆಯೊಂದಿಗೆ ಕರವೇ ಕೂಡಾ ಕೈ ಜೋಡಿಸಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವನಗೌಡ ಗುಜಗೊಂಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ ಬಿಜಾಪುರ, ಜಿಲ್ಲಾಸಂಚಾಲಕ ಸಾಯಬಣ್ಣ ಮಡಿವಾಳರ, ಸಂಜು ಕರ್ಪೂರಮಠ, ಡಾ, ಎಂ.ಡಿ. ಮೇತ್ರಿ, ಫಯಾಜ್ ಕಲಾದಗಿ , ಅನುರಾಧ ಕಲಾಲ, ಸುಮಿತ್ರಾ ಪೂಜಾರಿ, ಸಿದ್ದುಗೌಡ ತೊರವಿ, ಸುರೇಶ ಜತ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.