ಪಿ.ಎಮ್.ಜಿ.ಜಿ.ಬಿ.ವೈ. ಹಾಗೂ ಪಿ.ಎಮ್.ಎಸ್.ಬಿ.ವೈ.ಫಲಾನುಭವಿಗಳಿಗೆ ಚೆಕ್ ವಿತರಣೆ
ಕಲಬುರಗಿ:ಜೂ.20:ಭಾರತ ಸರ್ಕಾರದ ವಿವಿಧ ಸಾಮಾಜಿಕ ಭದ್ರತಾ ಯೋಜನೆಯ ಅರಿವು ಮೂಡಿಸುವ ಕಾರ್ಯಕ್ರಮ, ‘ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ’ (PMJJBY), “ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ’ (PMSBY) ಮತ್ತು ಪಿಂಚಣಿ ಯೋಜನೆ “ಅಟಲ್ ಪಿಂಚಣಿ ಯೋಜನೆ (APY) ಕುರಿತು ಜಾಗೃತಿ ಮೂಡಿಸುವ ಕಲಬುರಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಾದೇಶಿಕ ವ್ಯವಹಾರ ಕಚೇರಿ ಮತ್ತು ಆಳಂದ ತಾಲೂಕಿನ ನಿಂಬಗಾ ಗ್ರಾಮದ ಎಸ್.ಬಿ.ಐ. ಶಾಖೆಯಲ್ಲಿ ಬುಧವಾರ (ಜೂನ್ 19 ರಂದು) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ನಿಂಬರ್ಗಾ ಎಸ್.ಬಿ.ಐ. ಶಾಖೆಯ ಶಾಖಾ ವ್ಯವಸ್ಥಾಪಕ ಮಹೇಶ್ವರ ರೆಡ್ಡಿ, ಕಲಬುರಗಿ ಎಸ್.ಬಿ.ಐ. ಆರ್.ಬಿ.ಓ. ಎಫ್-1 ಮ್ಯಾನೇಜರ್ ಅಮರನಾಥ ಪಿ. ಹಾಗೂ ಕಲಬುರಗಿ ಲೀಡ್ ಬ್ಯಾಂಕ್ ಕಚೇರಿಯ ಎಫ್.ಎಲ್.ಸಿ. ಯವರಾದ ಗೋಪಾಲ ಕುಲಕರ್ಣಿ ಉಪಸ್ಥಿತರಿದ್ದರು.