ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ತರಬೇತಿ

ಸಂಜೆವಾಣಿ ವಾರ್ತೆ
ದಾವಣಗೆರೆ .ಜೂ.೨೧; ಸರ್ಕಾರಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯಲ್ಲಿ 10ನೇ ಅಂತರಾಷ್ಟ್ರೀಯ ಯೋಗ ದಿನ ಅಂಗವಾಗಿತರಬೇತಿ ಪಡೆಯುತ್ತಿರುವ ಸಾರ್ವಜನಿಕರಿಗೆ, ಮಕ್ಕಳಿಗೆ ಯೋಗಾಸನ ಸ್ಪರ್ಧೆ ಏರ್ಪಡಿಸಿ ಭಾಗವಹಿಸಿದವರಿಗೆ ಪ್ರಶಂಸಾ ಪತ್ರ ವಿತರಿಸಲಾಯಿತು. ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ರತ್ನ ಡಿ.ಎಂ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಆಧುನಿಕ ಜೀವನ ಶೈಲಿಯಿಂದ ರೋಗಗಳು ಬರುತ್ತಿದ್ದು. ಜೀವನ ಶೈಲಿ ಬದಲಾವಣೆ ಮಾಡಿಕೊಂಡು ಯೋಗವನ್ನು ಸೀಮಿತಗೊಳಿಸದೇ ಪ್ರತಿನಿತ್ಯ ಊಟ ನಿದ್ರೆಯಂತೆ ಯೋಗವನ್ನು ಕೂಡ ದಿನಚರಿ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಆಯುಷ್ ವಿಭಾಗದ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವೈದ್ಯಾಧೀಕಾರಿಗಳಾದ ಡಾ. ಮಂದಾಕಿನಿ ಮಾತಾನಾಡಿ, ಈಗ ಸಣ್ಣ ಮಕ್ಕಳಲ್ಲಿ ಮಾನಸಿಕ ಒತ್ತಡ, ಮಧುಮೇಹ, ಥೈರಾಡ್ ಸಮಸ್ಯೆ ಹೃದ್ರೋಗ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸುತ್ತ ಪ್ರತಿನಿತ್ಯ ಯೋಗಸಾನ ಮಾಡುವುದರಿಂದ ಮಾನಸಿನ ಸಮತೋಲನ ಏಕಗ್ರತೆ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ ಎಂದರು.ಯೋಗ ಗುರು ಆನಂದ ಕುಮಾರ್, ರೇವಣ್ಣ ಸಿಬ್ಬಂದಿಗಳಾದ ವಸಂತ ಲಕ್ಷ್ಮಿ, ಕವಿತ, ಪವಿತ್ರ  ರಾಮಂಜನೇಯ ಡಿ, ಈಶ್ವರ, ವಿಜಯಮ್ಮ, ಉಪಸ್ಥಿತರಿದ್ದರು