ಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ಸಮಾಜ ಸೇವಕ ಮಹಲಿಂಗಯ್ಯ ಶಾಸ್ತ್ರಿ ನಾಮಪತ್ರ ಸಲ್ಲಿಕೆ

ಸಂಜೆವಾಣಿ ವಾರ್ತೆ
ಶಿವಮೊಗ್ಗ.ಜೂ.೨೧- ನಗರದಲ್ಲಿ ಸಾಕಷ್ಟು ಸಾಮಾಜಿಕ ಕೆಲಸಗಳನ್ನು ಮಾಡು ತ್ತಿರುವ ಮತ್ತು ಕಳೆದ 15ವರ್ಷಗಳಿಂದ ಶ್ರೀ ಶಾಂತವೀರೇಶ್ವರ ಟೂರ‍್ಸ್ ಅಂಡ್ ಟ್ರಾವಲ್ಸ್ ಪ್ರಾರಂಭಿಸಿ ತಂದು ಲಕ್ಷಾಂತರ ಜನರಿಗೆ ರಿಯಾಯ್ತಿ ದರದಲ್ಲಿ ತೀರ್ಥ ಕ್ಷೇತ್ರಗಳ ದರ್ಶನ ಮಾಡಿಸಿ, ನಿರಂತರ ಸೇವೆಯಲ್ಲಿರುವ ಎಸ್.ಎನ್. ಮಹಾಲಿಂಗಯ್ಯ ಶಾಸ್ತಿçಯವರು ಪ್ರತಿಷ್ಠಿತ ಡಿಸಿಸಿ ಬ್ಯಾಂಕ್‌ಗೆ ಇತರೆ ಕ್ಷೇತ್ರ -4ಗೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ.ಕಳೆದ 25ವರ್ಷಗಳಿಂದ ಶಿವಮೊಗ್ಗ ನಗರದ ಗೋಪಾಳ ಬಡಾವಣೆಯ ತಮ್ಮ ನಿವಾಸದಲ್ಲಿ ವಧು-ವರರ ಅನ್ವೇಷಣಾ ಕೇಂದ್ರದ ಕಛೇರಿಯನ್ನು ಪ್ರಾರಂಭಿಸಿ, ಇದೀಗ ರಾಜ್ಯಾ ದ್ಯಂತ ಹಲವಾರು ಜಿಲ್ಲೆಗಳಲ್ಲಿ ಶಾಖಾ ಕಛೇರಿಗಳನ್ನು ತೆರೆದಿದ್ದಾರೆ. ಕೇಂದ್ರ ಇದುವರೆಗೆ ಸಾವಿರಾರು ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.ಶ್ರೀಯುತರು ಜಿಲ್ಲಾ ಜಂಗಮ ಪುರೋಹಿತ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ಹತ್ತು ವರ್ಷದಿಂದೀಚೆಗೆ ಶ್ರೀಶೈಲ ಗೃಹ ನಿರ್ಮಾಣ ಸಹಕಾರ ಸಂಘವನ್ನು ಪ್ರಾರಂಭಿಸಿ ಕಡಿಮೆ ದರದಲ್ಲಿ ಬಡವರಿಗೆ ನಿವೇಶನ ನೀಡಿದ್ದಾರೆ. ಜೊತೆಗೆ ಬಡವರ ಸೇವೆಗೆಂದೇ ಇನ್ನೂ ಹತ್ತಾರು ಕಡೆಜಾಗವನ್ನು ಪಡೆದು ನಿವೇಶನ ಮಾಡಿ ಹಂಚಲಿದ್ದಾರೆ.ಇವರ ಸೇವೆ ಇಷ್ಟಕ್ಕೇ ನಿಂತಿಲ್ಲ ಸಮಾಜದಮುಖಿ ಕೆಲಸಗಳನ್ನು ಮುಂದುವರೆಸುತ್ತಲೇ, ಶ್ರೀ ಕಾಶಿ ವಿಶ್ವನಾಥ ವಿವಿದೋದ್ಧೇಶ ಸಹಕಾರ ಸಂಘ, ಶ್ರೀಶೈಲ ಸೌಹಾರ್ಧ ಸಹಕಾರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಗರದ ಶಿವಮೂತಿ ಸರ್ಕಲ್‌ನಲ್ಲಿ ಜನರ ಅಪೇಕ್ಷೆ ಮೇರೆಗೆ ಶ್ರೀಶೈಲ ಚಿಟ್ಸ್ ಫಂಡ್ ಪ್ರಾರಂಭಿಸಿ ಅಧ್ಯಕ್ಷರಾಗಿ ಸಾವಿರಾರು ಜನರ ಬದುಕಿಗೆ ಭದ್ರ ಬುನಾದಿ ಹಾಕಿದ್ದಾರೆ.ಇತ್ತೀಚೆಗೆ ನಡೆದ ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ಚುನಾವಣೆಯಲ್ಲಿ ನಿರ್ಧೇಶಕರಾಗಿ ಆಯ್ಕೆಯಾಗಿದ್ದಾರೆ. ಮುಖ್ಯವಾಗಿ ಮಹಲಿಂಗಯ್ಯ ಶಾಸ್ತಿçಯವರು ದಾನ ಧರ್ಮದಲ್ಲಿ ಎತ್ತಿದ ಕೈ. ಒಟ್ಟಾರೆ ಸಮಾಜಸೇವೆಗೆಂದೇ ಹುಟ್ಟಿರುವ ಇವರು ನಿರಂತರವಾಗಿ ಬಡವರ ಸೇವೆ ಮಾಡಿ ಈಗೆ ಆರೋಗ್ಯವಂತರಾಗಿರಲಿ ಎಂದು ಶಿವಮೊಗ್ಗದ ಲಕ್ಷಾಂತರ ಅಭಿಮಾನಿಗಳ ಹಾರೈಕೆಯಾಗಿದೆ.ಇದೀಗ ಇವರು ಶಿವಮೊಗ್ಗದ ಪ್ರತಿಷ್ಠಿತ ಡಿಸಿಸಿ ಬ್ಯಾಂಕ್ ಚುನಾವಣಗೆ ಮಹಾಲಿಂಗಯ್ಯ ಶಾಸ್ತಿç ನಾಮಪತ್ರ ಸಲ್ಲಿಸಿದ್ದು, ಅಭೂತ ಪೂರ್ವ ಗೆಲುವು ಸಾಧಿಸುವಲ್ಲಿ ಅನುಮಾನವಿಲ್ಲ ಎಂದು ಅಭಿಮಾನಿ ಗಳು ಮತ್ತು ಹಿತೈಷಿಗಳು ತಿಳಿಸಿದ್ದಾರೆ. ನಾಮಪತ್ರ ಸಂದರ್ಭದಲ್ಲಿ ಜೊತೆಗೆ ಮಾಜಿ ಪಾಲಿಕೆ ಸದಸ್ಯö, ಉದ್ಯಮಿ ಶ್ರೀನಾಥ, ರಾಕೇಶ್, ವಸಂತಕುಮಾರ್, ಮಂಜುಳಾ ಮತ್ತು ಆಶಾ ಚನ್ನಬಸಪ್ಪ ಇನ್ನಿತರರಿದ್ದರು.