ವಾಟರ್ ಏಡ್ ಸಂಸ್ಥೆಯ ಜಿಲ್ಲಾ ಮಟ್ಟದ ಪಾಲುದಾರರ ಸಭೆ
ಕಲಬುರಗಿ,ಜೂ.20-ನಗರದ ಜಿಲ್ಲಾ ಪಂಚಾಯತಿ ಹೊಸ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಾಟರ್ ಏಡ್ ಸಂಸ್ಥೆಯ ಜಿಲ್ಲಾ ಮಟ್ಟದ ಪಾಲುದಾರರ ಸಭೆಗೆ ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ ಚಾಲನೆ ನೀಡಿದರು.
ಮಳೆಯ ಕೊರತೆಯಿಂದ ಜಿಲ್ಲೆಯಾದ್ಯಂತ ಈ ವರ್ಷ ಬರಗಾಲ ಉಂಟಾಗಿದ್ದು ನೀರಿನ ಮಹತ್ವ ಮತ್ತು ಇದರ ಉಳಿಯುವಿಕೆ ಬಗ್ಗೆ ಸಮುದಾಯಕ್ಕೆ ಅರಿವಿನ ಅಗತ್ಯವಿದ್ದು ಇದನ್ನು ವಾಟರ್ ಏಡ್ ಸಂಸ್ಥೆಯವರು ಚೆನ್ನಾಗಿಯೇ ನಿರ್ವಹಿಸುತ್ತಿದ್ದಾರೆ. ಅಲ್ಲದೇ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಭೂಮಿಗೆ ನಿರುಣಿಸುವ ಕಾಮಗಾರಿಗಳಾದ ಇಂಜೆಕ್ಷನ್ ಬೋರೆವೆಲ್, s ಸ್ಟೋರ್ಮ್ ವಾಟರ್ ರಿಚಾರ್ಜ್, ಚೆಕ್ ಡ್ಯಾಮ್, ಗೋಕಟ್ಟೆಯಲ್ಲಿನ ಹೂಳೆತ್ತುವಿಕೆ, ಇಂಗುಗುಂಡಿ ಯಂತಹ ವಿವಿಧ ವಿನ್ಯಾಸಗಳ ಮೂಲಕ ಸಮುದಾಯದಲ್ಲಿ ಸಿವಿಲ್ ಸ್ಟ್ರಕ್ಷರ್‍ಗಳನ್ನು ನಿರ್ಮಾಣ ಮಾಡಿರುವುದು ನಿಜವಾಗಿಯೂ ಶ್ಲಾಘನಿಯ. ಇಂತಹ ಒಂದು ಕಾಮಗಾರಿಗಳ ಅವಶ್ಯಕತೆ ಎಲ್ಲಾಕಡೆಯು ಇದ್ದು ವಾಟರ್ ಏಡ್ ಸಂಸ್ಥೆಯವರ ಸಂಯೋಗದೊಂದಿಗೆ ಅನುಷ್ಠಾನಮಾಡಬಹುದು ಎಂದು ತಿಳಿಸಿದರು. ಕಾರ್ಯನಿರ್ವಾಹಕ ಅಧಿಕಾರಿ ಸಯ್ಯದ್ ಪಟೇಲ್, ಕಲಬುರಗಿ ತಾಲೂಕು, ಆಳಂದ, ಕಲಬುರಗಿ, ಕಮಲಾಪುರ ತಾಲೂಕಿನ ಆಯ್ದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಶಾಲಾ ಮುಖ್ಯ ಉಪಾಧ್ಯಾ ಯಾರುಗಳು, ತಾಂತ್ರಿಕ ಸಂಯೋಜಕರು, ಸಹಾಯಕರು, ನರೇಗಾ ಅಧಿಕಾರಿಗಳು, ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿಗಳು ಮತ್ತು ವಾಟರ್ ಏಡ್ ಸಂಸ್ಥೆಯ ವತಿಯಿಂದ ಬೈಜೇಶ್, ಅಭಯರಾಜ್ ಮತ್ತು ಶಶಿಕಾಂತ್, ನಾಗರೆಡ್ಡಿ ಪಾಟೀಲ್ ಉಪಸ್ಥಿತರಿದ್ದರು.