ರಾಜ್ಯದ ವಸತಿ ಸಚಿವರ ಪ್ರವಾಸ
ಕಲಬುರಗಿ:ಜೂ.20:ರಾಜ್ಯದ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರಾದ ಬಿ.ಜೆಡ್. ಜಮೀರ ಅಹ್ಮದ್ ಖಾನ್ ಅವರು ಹೊಸಪೇಟೆದಿಂದ ರಸ್ತೆ ಮೂಲಕ ಜೂನ್ 22 ರಂದು ಶನಿವಾರ ಸಂಜೆ 7.30 ಗಂಟೆಗೆ ಕಲಬುರಗಿಗೆ ಆಗಮಿಸಿ ವಾಸ್ತವ್ಯ ಮಾಡುವರು.
ಜೂನ್ 23 ರಂದು ಭಾನುವಾರ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಸಚಿವರ ಕಾರ್ಯಕ್ರಮ ಕಾಯ್ದಿರಿಸಲಾಗಿದೆ. ಸಂಜೆ 4.30 ಗಂಟೆಗೆ ಕಲಬುರಗಿಯಿಂದ ರಸ್ತೆ ಮೂಲಕ ಬೀದರ ಜಿಲ್ಲೆಯ ಬಸವಕಲ್ಯಾಣಕ್ಕೆ ಪ್ರಯಾಣಿಸಿ, ನಿಗದಿತ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಮರಳಿ ರಾತ್ರಿ 9.30 ಗಂಟೆಗೆ ಬೀದರದಿಂದ ಕಲಬುರಗಿಗೆ ಆಗಮಿಸಿ ವಾಸ್ತವ್ಯ ಮಾಡುವರು.
ಜೂನ್ 24 ರಂದು ಸೋಮವಾರ ಬೆಳಿಗ್ಗೆ 9.30 ಗಂಟೆಗೆ ಕಲಬುರಗಿಯಿಂದ ರಸ್ತೆ ಮೂಲಕ ಬೀದರಗೆ ಪ್ರಯಾಣಿಸಿ, ನಿಗದಿತ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಮರಳಿ ರಾತ್ರಿ 8.30 ಗಂಟೆಗೆ ಬೀದರದಿಂದ ಕಲಬುರಗಿಗೆ ಆಗಮಿಸಿ ವಾಸ್ತವ್ಯ ಮಾಡುವರು.
ಜೂನ್ 25 ರಂದು ಮಂಗಳವಾರ ಬೆಳಿಗ್ಗೆ 8.30 ಗಂಟೆಗೆ ಕಲಬುರಗಿಯಿಂದ ರಸ್ತೆ ಮೂಲಕ ಬೀದರಿಗೆ ಪ್ರಯಾಣಿಸಿ, ನಿಗದಿತ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಮರಳಿ ಸಂಜೆ 7 ಗಂಟೆಗೆ ಬೀದರದಿಂದ ಕಲಬುರಗಿಗೆ ಆಗಮಿಸಿ, ಕಲಬುರಗಿಯಿಂದ ರಾತ್ರಿ 8.40 ಗಂಟೆಗೆ ಸ್ಟಾರ್ ಏರ್ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣಿಸುವರು.