ಸಚಿವ ಆರ್.ಬಿ.ತಿಮ್ಮಾಪೂರಗೆ ಮಾದಿಗ ಸಮಾಜದಿಂದ ಸನ್ಮಾನ ನಾಳೆ
ಕಲಬುರಗಿ,ಜೂ.20-ಅಬಕಾರಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಮೇಲೆ ಮೊದಲ ಬಾರಿಗೆ ನಗರಕ್ಕೆ ಆಗಮಿಸುತ್ತಿರುವ ಸಚಿವ ಆರ್.ಬಿ.ತಿಮ್ಮಾಪೂರ ಅವರಿಗೆ ಜಿಲ್ಲಾ ಮಾದಿಗ ಸಮಾಜದ ವತಿಯಿಂದ ಸ್ವಾಗತ ಮತ್ತು ಸನ್ಮಾನ ಸಮಾರಂಭವನ್ನು ಜೂ.21 ರಂದು ಸಂಜೆ 4 ಗಂಟೆಗೆ ನಗರದ ಗುಲಾಬವಾಡಿ ಬಡಾವಣೆಯ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾದಿಗ ಸಮನ್ವಯ ಸಮಿತಿ ಅಧ್ಯಕ್ಷ ಪರಮೇಶ್ವರ ಖಾನಾಪೂರ ತಿಳಿಸಿದ್ದಾರೆ.
ಸಮಾಜದ ಮುಖಂಡರಾದ ಶ್ಯಾಮ್ ನಾಟಿಕಾರ, ಚಂದ್ರಿಕಾ ಪರಮೇಶ್ವರ, ಲಿಂಗರಾಜ ತಾರಫೈಲ್, ನಾಗರಾಜ ಗುಂಡಗುರ್ತಿ, ಗೋಪಿಕೃಷ್ಣ ಗುಡೇನವರ್, ಸಿದ್ಧಾರ್ಥ ಕೋರವಾರ, ಮಲ್ಲಿಕಾರ್ಜುನ ನೀಲೂರ, ದತ್ತು ಹೆಚ್.ಭಾಸಗಿ, ಮಂಜುನಾಥ ನಾಲವಾರಕರ್, ಗೋಪಾಲ ನಾಟಿಕಾರ, ಪರಶುರಾಮ ನಾಟಿಕಾರ, ಪ್ರಕಾಶ ಮಾಳಗೆ, ರವಿ ಹೊಸಮನಿ, ಚಂದ್ರಕಾಂತ ನಾಟಿಕಾರ, ವಿಠ್ಠಲ ವಾಲಿಕಾರ, ಕಾಶಿನಾಥ ಹಾದಿಮನಿ, ಮಲ್ಲಿಕಾರ್ಜುನ ಹಿಪ್ಪರಗಿ, ರುಕ್ಕಪ್ಪ ಟಿ.ಕಾಂಬಳೆ, ನಾಗಪ್ಪ ಆರ್.ಟೈಗರ್, ಜಯರಾಜ ಕಿಣಗಿಕರ್, ಶರಣು ಸಂಜೀವನಗರ, ಉಮೇಶ ಮಾಳಗೆ ಸೇರಿದಂತೆ ಸಮಾಜದ ಮುಖಂಡರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಸಮಾಜದ ಬುದ್ಧಿಜೀವಿಗಳು, ಚಿಂತಕರು, ಪ್ರಜ್ಞಾವಂತರು ಹಾಗೂ ಹಿರಿಯ ಮುಖಂಡರು, ಯುವಕರು ಮತ್ತು ಮಹಿಳೆಯರು ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾರಂಭವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.