ಓಮ್ನಿ ಕಾರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಮೃತ ದೇಹದ ಗುರುತು ಪತ್ತೆ
ಸುಳ್ಯ:ಸುಳ್ಯ ಪರಿವಾರಕಾನದಲ್ಲಿ ಕಲ್ಲುಮುಟ್ಲು ಕಡೆಗೆ ಹೋಗುವ ರಸ್ತೆ ಬದಿ ನಿಲ್ಲಿಸಲ್ಪಟ್ಟಿದ್ದ ಓಮ್ನಿ ಕಾರಿನಲ್ಲಿ ಸೋಮವಾರ ಪತ್ತೆಯಾದ ಅಪರಿಚಿತ ಮೃತದೇಹದ ಗುರುತು ಪತ್ತೆಯಾಗಿದೆ.
ಮೃತವ್ಯಕ್ತಿ ಸುಳ್ಯ ನಗರದ ಕಲ್ಲುಮುಟ್ಲು ನಿವಾಸಿ ಮನೋಹರ್ ರೈ (೪೫) ಎಂದು ಗುರುತಿಸಲಾಗಿದೆ. ಸೋಮವಾರ ಕಾರಿನಲ್ಲಿದ ಮೃತ ದೇಹವನ್ನು ಪರಿಶೀಲನೆ ನಡೆಸಿದಾಗ ದೇಹದಲ್ಲಿದ್ದ ಬಟ್ಟೆಯಲ್ಲಿ ಲಭಿಸಿದ ದಾಖಲೆ ಪತ್ರದ ಮೂಲಕ ಗುರುತು ಪತ್ತೆಯಾಗಿದೆ.
ನಂತರ ಅವರ ಕುಟುಂಬದವರಿಗೆ ಮಾಹಿತಿ ನೀಡಲಾಗಿತ್ತು. ಇತ್ತೀಚೆಗೆ ಮನೋಹರ್‌ರವರು ಮದ್ಯಪಾನ ಹೆಚ್ಚು ಮಾಡುತಿದ್ದು ಇದೇ ಕಾರಣದಿಂದ ಪತ್ನಿ ಮತ್ತು ಮಕ್ಕಳು ಸ್ವಲ್ಪ ದೂರವಾಗಿ ಪತ್ನಿಯ ತಾಯಿ ಮನೆ ಕಲ್ಮಡ್ಕದಲ್ಲಿ ವಾಸ ಮಾಡುತ್ತಿದ್ದರು. ಅತಿಯಾದ ಕುಡಿತದಿಂದಲೇ ಅವರು ಮೃತ ಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಸುಳ್ಯ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.