ಕಂಟೈನರ್ ಲಾರಿ – ಸ್ಕೂಟಿ ಅಪಘಾತ – ಸ್ಕೂಟಿ ಸವಾರ ಗಂಭೀರ
ಸುಳ್ಯ:ಕಂಟೈನರ್ ಲಾರಿ ಹಾಗೂ ಸ್ಕೂಟಿ ನಡುವೆ ಮುಖಾಮುಖಿ ಅಪಘಾತ ಸಂಭವಿಸಿ ಸ್ಕೂಟಿ ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಮಂಗಳವಾರ ಸಂಪಾಜೆ ಗ್ರಾಮದ ಗೂನಡ್ಕದಲ್ಲಿ ನಡೆದಿದೆ.
ಕಾಸರಗೋಡು ನಿವಾಸಿಯಾದ ಮಹಮ್ಮದ್ ಜಮೀರ್ ಅವರು ಎಮ್ಮೆಮಾಡಿನಿಂದ ಕಾಸರಗೋಡಿಗೆ ಹಿಂದಿರುಗಿ ತಮ್ಮ ಸ್ಕೂಟಿಯಲ್ಲಿ ಬರುತ್ತಿದ್ದ ವೇಳೆ ಸುಳ್ಯ ಭಾಗದಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಕಂಟೈನರ್ ಲಾರಿ ಗೂನಡ್ಕದ ಶಿರಾಡಿ ದೈವಸ್ಥಾನದ ಸಮೀಪ ಮುಖ್ಯರಸ್ತೆಯಲ್ಲಿ ಸ್ಕೂಟಿಗೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬೈಕ್ ಸವಾರ ಜಮೀರ್ ಅವರ ಮುಖ, ಕೈ ಕಾಲಿಗೆ ಗಂಭೀರವಾಗಿ ಗಾಯವಾಗಿದ್ದು, ಸ್ಥಳೀಯರು ಸೇರಿ ಅವರನ್ನು ಸುಳ್ಯದ ಆಸ್ಪತ್ರೆಗೆ ದಾಖಲಿಸಿಸಲಾಗಿದೆ. ಘಟನಾ ಸ್ಥಳಕ್ಕೆ ಕಲ್ಲುಗುಂಡಿ ಹೊರಠಾಣಾ ಪೊಲೀಸರು ಆಗಮಿಸಿ ಕೇಸು ದಾಖಲಿಸಿಕೊಂಡಿದ್ದಾರೆ.