ವಾಡಿ:ಹಗಲು ಹೊತ್ತಿನಲ್ಲೇ ಉರಿಯುತ್ತಿರುವ ಬೀದಿ ದೀಪ
ವಾಡಿ,ಜೂ.20-ಪಟ್ಟಣದ ಅನೇಕ ಕಡೆ ಬೀದಿ ದೀಪ ಹಗಲು ಹೊತ್ತಿನಲ್ಲಿಯೂ ಉರಿಯುತ್ತಿವೆ. ಬೀದಿ ದೀಪ ಹಗಲು ಹೊತ್ತಿನಲ್ಲಿಯೂ ಉರಿಯುತ್ತಿದ್ದರೂ ವಿದ್ಯುತ್ ಸರಬರಾಜು ಕಂಪನಿ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಅನಗತ್ಯವಾಗಿ ವಿದ್ಯುತ್ ಪೋಲಾಗುತ್ತಿದ್ದರೂ ಯಾರೂ ಇತ್ತ ಗಮನ ಹರಿಸುತ್ತಿಲ್ಲ.
ಒಂದು ಕಡೆ ರೈತರ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಪೂರೈಕೆ ಮಾಡಲು ಹೆಣಗಾಡುತ್ತಿರುವ ವಿದ್ಯುತ್ ಸರಬರಾಜು ಕಂಪನಿ ಇನ್ನೊಂದೆಡೆ ಹಗಲು ಹೊತ್ತಿನಲ್ಲಿಯೇ ಬೀದಿ ದೀಪಗಳು ಉರಿದು ವಿದ್ಯುತ್ ಪೋಲಾಗಿ ಹೋಗುತ್ತಿದ್ದರೂ ಅದನ್ನು ತಡೆಯಲು ಅಗತ್ಯವಾದ ಕ್ರಮ ಕೈಗೊಳ್ಳುತ್ತಿಲ್ಲ.
ವಿದ್ಯುತ್ ಸರಬರಾಜು ಕಂಪನಿ ಈಗಲಾದೂರ ಎಚ್ಚೆತ್ತುಕೊಂಡು ವಿದ್ಯುತ್ ಪೋಲಾಗುತ್ತಿರುವುದನ್ನು ತಡಯಬೇಕು ಎಂದು ಸಾರ್ವಜನಿಕರು ಆಗ್ರಹಪಡಿಸಿದ್ದಾರೆ. ವಿದ್ಯುತ್ ಸರಬರಾಜು ಕಂಪನಿ ಈ ಬಗ್ಗೆ ಗಮನ ಹರಿಸುವುದೇ ಎಂಬುವುದನ್ನು ಕಾದು ನೋಡಬೇಕಾಗಿದೆ.