ಯೋಗ ನಡಿಗೆಗೆ ಚಾಲನೆ
ಕಲಬುರಗಿ,ಜೂ.20-ಹತ್ತನೇಯ ಅಂತರಾಷ್ಟ್ರೀಯ ವಿಶ್ವ ಯೋಗ ದಿನಾಚರಣೆ ಅಂಗವಾಗಿ ನಗರದ ಜಗತ್ ವೃತ್ತದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ ಯೋಗ ಜಾಗರಣೆ ನಡಿಗೆಗೆ ಚಾಲನೆ ನೀಡಿದರು.
ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿ ಡಾ. ರತಿಕಾಂತ್ ಸ್ವಾಮಿ, ಆಯುಷ್ ಇಲಾಖೆಯ ಅಧಿಕಾರಿ ಡಾ ಗಿರಿಜಾ ಎಸ್ .ಯು. ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ವಿವಿಧ ನಸಿರ್ಂಗ್ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಸಂಘ ಸಂಸ್ಥೆಗಳು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ಯೋಗ ನಡಿಗೆಯು ಜಗತ್ ವೃತ್ತದಿಂದ ಆರಂಭವಾಗಿ ಎಸ್.ವಿ.ಪಿ. ವೃತ್ತ ಮಾರ್ಗವಾಗಿ ಡಿ.ಸಿ. ಕಚೇರಿಗೆ ಮುಕ್ತಾಯವಾಯಿತು.