ವಾರ್ತಾಧಿಕಾರಿ ಡಾ.ಜಿ.ಸುರೇಶಗೆ ಸನ್ಮಾನ
ಬೀದರ್: ಜೂ.20:ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಜಿ.ಸುರೇಶ ಅವರಿಗೆ ಪತ್ರಕರ್ತರ ನಿಯೋಗದಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಬುಧವಾರ ನಗರದ ರೈಲ್ವೆ ನಿಲ್ದಾಣದ ಪಕ್ಕದಲ್ಲಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅವರಣದಲ್ಲಿ ಡಾ.ಜಿ ಸುರೇಶ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು.
ತಾನು ಬೀದರ್‍ಗೆ ಬಂದ ಬಳಿಕ ಎಲ್ಲ ಒಳ್ಳೆಯದಾಗುತ್ತಿದೆ. ನಾನು ಇಲ್ಲಿ ಒಬ್ಬ ವಾರ್ತಾ ಸಹಾಯಕನಾಗಿ, ಪ್ರಭಾರ ಸಹಾಯಕ ನಿರ್ದೇಶಕನಾಗಿ ಸೇವೆಗೆ ಬಂದೆ. ಆದರೆ ಇಲ್ಲಿಯ ಪತ್ರಕರ್ತರ ಸಹಕಾರ ಹಾಗೂ ನಿರಂತರವಾಗಿ ನೀಡುತ್ತಿರುವ ಆದರದ ಗೌರವದಿಂದ ನನ್ನ ಸೇವಾನಿಷ್ಟೆ ಇನ್ನಷ್ಟು ಗಟ್ಟಿಯಾಯಿತು. ಇಲ್ಲಿಯ ಪತ್ರಕರ್ತರ ಶುಭಿಚ್ಛೆಯಿಂದ ಇಲಾಖೆಯ ಖಾರ್ಯ ಸಹಾಯಕ ನಿರ್ದೇಶಕನಾದೆ. ಈಗ ಗುಲಬರ್ಗಾ ವಿಶ್ವವಿದ್ಯಾಲಯವು ನನ್ನ ಅಧ್ಯಯನಕ್ಕೆ ಡಾಕ್ಟರೆಟ್ ಪದವಿ ದೊರೆತಿರುವುದಕ್ಕೆ ನನಗೆ ಇನ್ನಷ್ಟು ಕೆಲಸ ಮಾಡುವ ಹಂಬಲ ಹಾಗೂ ಉತ್ಸಾಹ ಇಮ್ಮಡಿಗೊಂಡಿದೆ ನನ್ನ ಎಲ್ಲ ಯಶಸ್ಸಿಗೆ ಕಾರಣರಾದ ಇಲ್ಲಿಯ ಮಾಧ್ಯಮ ಸ್ನೇಹಿತರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಸುರೇಶ ಹೇಳಿದರು.
ಹಿರಿಯ ಪತ್ರಕರ್ತರು ಹಾಗೂ ಮಾಧ್ಯಮ ಪಟ್ಟಿಯಲ್ಲಿರುವ ಸಂಪಾದಕರ ಸಂಘದ ಅಧ್ಯಕ್ಷ ಬಾಬು ವಾಲಿ ಮಾತನಾಡಿ, ಡಾ.ಸುರೇಶ ಅವರು ಮಿತ ಮಾತು, ಹಿತ ಕೆಲಸುಗಾರ. ತಾನಾಯಿತು, ತನ್ನ ಕೆಲಸವಾಯಿತು. ಅವರ ಗಾಂಭಿರ್ಯ ಅವರ ಘನತೆ ಇನ್ನಷ್ಟು ಹೆಚ್ಚಿಸಿದೆ. ತಮ್ಮ ವೃತ್ತಿ ಬದುಕಿನಲ್ಲೂ ಕಠಿಣ ಪರಿಶ್ರಮಪಟ್ಟು ಪಿ.ಹೆಚ್.ಡಿ ಪದವಿ ಸಂಪಾದಿಸಿ ಡಾಕ್ಟರೆಟ್ ಪದವಿಗೆ ಭಾಜ£ರಾದ ತಮಗೆ ಅನಂತ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಹಿರಿಯ ಪತ್ರಕರ್ತರು ಹಾಗೂ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕುಟದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಅಪ್ಪಾರಾವ ಸೌದಿ ಮಾತನಾಡಿ, ಡಾ.ಸುರೇಶ ಅವರು ಬೀದರ್‍ಗೆ ಬಂದಾಗಿನಿಂದ ಹಲವಾರು ಪತ್ರಿಕೆಗಳು ಮಾಧ್ಯಮ ಪಟ್ಟಿಗೆ ಸೇರಿಸುವಲ್ಲಿ ಮುತುವರ್ಜಿ ವಹಿಸಿದ್ದಾರೆ. ಅವರ ಮಾಧ್ಯಮ ಲೋಕದ ಪ್ರೀತಿಗೆ ಧನ್ಯವಾದ ತಿಳಿಸುವುದಾಗಿ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಡಿ.ಕೆ ಗಣಪತಿ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ಕರ್ನಾಟಕ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯ ಪ್ರತಿನಿಧಿ ಮಾಳಪ್ಪ ಅಡಸಾರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶಿಪಾಟೀಲ ಸಂಗಮ,. ಇತರೆ ಪತ್ರಕರ್ತರಾದ ಮಲ್ಲಿಕಾರ್ಜುನ ನಾಗರಾಳ, ಬಸವರಾಜ ಪವಾರ, ಜಗನ್ನಾಥ ಜೀರ್ಗಾ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿದ್ದರು.