ಉಪ್ಪಿನ ಡಿಗ್ರಿ ಕಾಲೇಜ್ ಶೈಕ್ಷಣಿಕ ವರ್ಷಾರಂಭ
ವಿಜಯಪುರ,ಜೂ.20:ನಗರದಲ್ಲಿ ಶ್ರೀ ಸಿದ್ದೇಶ್ವರ ಸಂಸ್ಥೆಯ ಅಡಿಯಲ್ಲಿ ನೂತನವಾಗಿ ನಿರ್ಮಿಸಲಾದ ಸಂಗನಬಸವ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಮಹಾ ವಿದ್ಯಾಲಯ ಮತ್ತು ಎಸ್. ಸಿ. ಉಪ್ಪಿನ ಡಿಗ್ರಿ ಕಾಲೇಜು ವಿಜಯಪುರದಲ್ಲಿ 2024-25 ನೇ ಶೈಕ್ಷಣಿಕ ವμರ್Áರಂಭವನ್ನು ಶ್ರೀ ಸಿದ್ದೇಶ್ವರ ಮತ್ತು ಸರಸ್ವತಿ ಮಹಾಪೂಜೆಯನ್ನು ನೆರವೇರಿಸುವ ಮೂಲಕ ಸಂಸ್ಥೆಯ ವಿದ್ಯುಕ್ತವಾಗಿ ಉದ್ಘಾಟಿಸಲಾಯಿತು.
ಸಿದ್ದೇಶ್ವರ ಸಂಸ್ಥೆ ಚೇರಮನ್ ಬಸಯ್ಯ ಹಿರೇಮಠ ಹಾಗೂ ಕೋಶಾಧಿಕಾರಿ ಶಿವಾನಂದ ನೀಲಾ ಮತ್ತು ಪ್ರಾಂಶುಪಾಲ ಪೆÇ್ರ, ಹೇಮಂತಕೃಷ್ಣ ಉಡುಪಿ ಹಾಗೂ ಉಪಪ್ರಾಚಾರ್ಯ ವಿರೇಶ ಪಿ., ವಿಜಯಪುರ ಸಂಗನಬಸವ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಮಹಾ ವಿದ್ಯಾಲಯ ಮತ್ತು ಎಸ್. ಸಿ. ಉಪ್ಪಿನ ಡಿಗ್ರಿ ಕಾಲೇಜ ಹಾಗೂ ಸಿದ್ದೇಶ್ವರ ಸಂಸ್ಥೆಯ ಆಡಳಿತ ಮಂಡಳಿ ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಪೂಜೆಯಲ್ಲಿ ಪಾಲ್ಗೊಂಡಿದ್ದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಸಿದ್ದೇಶ್ವರ ಸಂಸ್ಥೆಯ ಉಪಾಧ್ಯಕ್ಷ ಸಂಗನಬಸಪ್ಪ ಸಜ್ಜನ ಅವರು ವಿದ್ಯಾರ್ಥಿಗಳ ಕುರಿತು ಮಾತನಾಡಿ, ದೇಶದ ಭವಿಷ್ಯದಲ್ಲಿ ಶಿಕ್ಷಣದ ಪಾತ್ರ ಬಹುಮುಖ್ಯವಾದುದು ಎಂದು ಹೇಳಿದರು.
ಸಿದ್ದೇಶ್ವರ ಸಂಸ್ಥೆಯ ಚೇರಮನ್ ಬಸಯ್ಯ ಹಿರೇಮಠ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣ ಎನ್ನುವುದು ಒಂದು ಸಾಧನೆ “ಸಾಧನೆ ಸಾಧಕನ ಸ್ವತ್ತೆ ಹೊರತು ಸೋಮಾರಿಯ ಸ್ವತಲ್ಲ” ಎಂದು
ನುಡಿದರು.
ಕವಲಗಿಯ ಎಸ್. ಆರ್. ಪಿ, ಯು ಕಾಲೇಜ ನಿರ್ದೇಶP,À ಪ್ರಾಂಶುಪಾಲ ಪ್ರೊ. ಹೇಮಂತಕೃಷ್ಣ ಉಡುಪಿ ಅವರು ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ನೂತನವಾದ ಕಟ್ಟಡದಲ್ಲಿ ಇತಿಹಾಸ ಸೃಷ್ಟಿಸುವ ವಿದ್ಯಾರ್ಥಿಗಳು ಹೊರ ಹೊಮ್ಮಬೇಕು ಎಂದು ಪ್ರೋತ್ಸಾಹಿಸಿ ಹಾರೈಸಿದರು.
ಸಿದ್ದೇಶ್ವರ ಸಂಸ್ಥೆಯ ಪದಾಧಿಕಾರಿಗಳಾದ ಸದಾನಂದ ದೇಸಾಯಿ, ಬಸವರಾಜ ಸುಗೂರ, ಮಲ್ಲಿಕಾರ್ಜುನ ಸಜ್ಜನ, ನಿಂಗೊಂಡಪ್ಪ ಗೊಲಾಯಿ, ಸುಧೀರ ಚಿಂಚಲಿ, ಸದಾಶಿವ ಗುಡ್ಡೋಡಗಿ, ಚಂದಪ್ಪ ಹುಂಡೇಕರ, ನಾಗಪ್ಪ ಗುಗ್ಗರಿ, ಸಾಯಬಣ್ಣ ಭೋವಿ, ಮಲಕಪ್ಪ ಗಾಣಿಗೇರ, ಮಲ್ಲಿಕಾರ್ಜುನ ಹಕ್ಕಾಪಕ್ಕಿ, ಡಾ. ಎಚ್. ವೆಂಕಟೇಶ (ಸಿಎಒ- ಶಿಕ್ಷಣ) ಹಾಗೂ ಎನ್. ಎಮ್. ಪ್ಯಾಟಿ (ಸಿಎಒ) ಉಪಸ್ಥಿತರಿದ್ದರು.
ಕುಮಾರಿ ವೈಷ್ಣವಿ ಕೊಲ್ಹಾರ ಸ್ವಾಗತಿಸಿದರು. ಜಯಲಕ್ಷ್ಮಿ ಅನವಾಲ ನಿರೂಪಿಸಿದರು. ಪವನ್ ಹಿರೇಮಠ ವಂದಿಸಿದರು.