ಹಾನಿಯಾದ ತೋಟಗಾರಿಕೆ ಬೆಳೆಗಳ ಮಾಹಿತಿ ನೀಡಿ: ಶಾಸಕ ಯಶವಂತರಾಯಗೌಡ ಪಾಟೀಲ
ಇಂಡಿ:ಜೂ.20: ತಾಲೂಕಿನಾದ್ಯೆಂತ ಕಳೆದೆ ವಾರ ಮಳೆಗಾಲ ಪ್ರಾರಂಭವಾಗಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡಿದೆ ರೈತಾಪಿ ವರ್ಗ ಬಿತ್ತನೆ ಪ್ರಾರಂಭಸಿದ್ದು ರೈತರಿಗೆ ಬೀಜ, ಗೋಬ್ಬರ ಯಾವುದೇ ಕಾರಣಕ್ಕೂ ಕಡಿಮೆ ಬೀಳದಂತೆ ನೋಡಿಕೊಳ್ಳಿ ಎಂದು ಶಾಸಕ, ಕರ್ನಾಟಕಸರಕಾರದ ಅಂದಾಜು ಸಮಿತಿ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಿನಿವಿಧಾನಸೌಧಾದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಸದಾ ಬರಗಾಲಕ್ಕೆ ತುತ್ತಾಗಿರುವ ಈ ಭಾಗ ರೈತರ ಸಂಕಷ್ಟ ಹೇಳತೀರದು. ಕಳೆದ 15 ದಿನಗಳ ಹಿಂದೆ ಭೀಕರ ಬೀರುಗಾಳಿಗೆ ತೋಟಗಾರಿಕಾ ಬೆಳೆಗಳಾದ ಲಿಂಬೆ.ದಾಳಿಂಬೆ, ಕಬ್ಬು, ಬಾಳೆ ಇತ್ಯಾದಿ ರೈತರು ಬೆಳೆದ ಬೆಳೆ ಹಾನಿಯಾಗಿವೆ ಎಂದು ಕಂಡು ಬಂದಿದೆ ಅಧಿಕಾರಿಗಳು ನಿಜವಾದ ಹಾನಿಯಾದ ಫಲಾನುಭವಿಗಳ ಬಗ್ಗೆ ಸಂಪೂರ್ಣ ಮಾಹಿತಿ ಕೊಡಿ ಅಧಿಕಾರಿಗಳು ಎಲ್ಲೋ ಕುಳಿತು ಯಾರಿದಲೋ ಮಾಹಿತಿ ಪಡೆದು ಸರಕಾರಕ್ಕೆ ವರದಿ ನೀಡಬಾರದು ವಸ್ತುನಿಷ್ಠವಾಗಿರಲಿ. ನಾನು ಈಗಾಗಲೆ ಕೃಷಿ ಇಲಾಖೆಯ ಕಾರ್ಯದರ್ಶಿಗೆ ಹಾಗೂ ಸಚಿವರು ಹಾಗೂ ತೋಟಗಾರಿಕಾ ಮಂತ್ರಿಗಳೊಂದಿಗೆ ನನ್ನ ಮತಕ್ಷೇತ್ರದ ಹಾನಿಯಾದ ಬಗ್ಗೆ ವಾಸ್ತವಿಕ ಸತ್ಯ ಹೇಳಿರುವೆ ಸಕಾರಾತ್ಮ ಸ್ಪಂದನೆ ನೀಡಿದ್ದಾರೆ ನಮ್ಮ ಸರಕಾರ ರೈತರ ಪರವಾಗಿದೆ ಅವರಿಗೆ ಕೂಡಲೆ ಸಹಾಯ ಸಹಕಾರ ಸಿಗಲಿದೆ.
ತಾಲೂಕಿನಾದ್ಯೆಂತ ರಸ್ತೆಗಳು ಸಂಪೂರ್ಣ ಕೆಟ್ಟು ಹೋಗಿವೆ ಸಾರ್ವಜನಿಕರು ಮಾತನಾಡುವಂತಹ ಪರಸ್ಥಿತಿ ನಿರ್ಮಾಣವಾಗಿದೆ. ಅಗರಖೇಡ, ಇಂಡಿ -ರೂಗಿ ರಸ್ತೆಗಳ ಕಥೆ ಹೇಳತೀರದು. ವಾಹನಗಳಿಗೆ ಸಾಕಷ್ಟು ತೊಂದರೆಯಾಗಿತ್ತಿದೆ ಕನಿಷ್ಠ ಪಕ್ಷವಾದರೂ ರಸ್ತೆಗಳ ಸುಧಾರಣೆ ಮಾಡಿ ಎಂದು ಪಿ.ಡಬ್ಲ್ಯೋ,ಡಿ ಅಧಿಕಾರಿ ದಯಾನಂದ ಮಠ ಅವರಿಗೆ ಸೂಚನೆ ನೀಡಿದರು. ತಕ್ಕಮಟ್ಟಿಗೆ ಸುಧಾರಣೆ ಮಾಡುವುದಾಗಿ ಶಾಸಕರಿಗೆ ಅಧಿಕಾರಿ ತಿಳಿಸಿದರು.
ನಿಸರ್ಗ ಕಾಪಾಡುವುದು ಪ್ರತಿನಾಗರೀಕ ಸಮಾಜದ ಆದ್ಯ ಕರ್ತವ್ಯ, ಅರಣ್ಯ ಇಲಾಖೆಯವರು ಸಸಿಗಳನ್ನು ನೆಟ್ಟರೆಸಾಲದು ಅವುಗಳ ಸಂರಕ್ಷಣೆ ಪ್ರಮುಖವಾಗಿದೆ.
ಕಾಲುವೆಗಳ ನೀರು ಟೇಲ್ ಎಂಡ್ ಹರಿಸಬೇಕು. ನಾವು ಬೆಸಿಗೆಯಲ್ಲಿ ಇದ್ದಾಗ ಟೇಲ್ ಎಂಡ್ ನೀರು ಹರಿಸಬೇಕು ಎನ್ನುವುದು ಕನಸಿನ ಮಾತು ಸುಳ್ಳು ಹೇಳುವುದು ಬೇಡ ನೀರಾವರಿ ಇಲಾಖೆಯ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಿ .ಪೊಲೀಸ್ ಇಲಾಖೆಯ ಸಹಕಾಯದಿಂದ ಒತ್ತಾಯ ಮಾಡಿ ನೀರು ಹರಿಸುವಂತಾಗಬಾರದು ಕಾಲುವೆಗಳಿಗೆ ಸಹಜ ನೀರು ಹರಿಸುವುದು ಕ್ರೀಯ ಎಂದಾಗಬೇಕು. ಈಗ ಮಳೆಗಾಲ ಟೇಲ್ ಎಂಡ್ ನೀರು ಹರಿಸಬೇಕು ಎಂದು ಕೆಬಿಜೆಎನ್ ಎಲ್ ಅಧಿಕಾರಿಗಳಿಗೆ ಶಾಸಕರು ತಾಕೀತು ಮಾಡಿದರು. ಆಯ್.,ಬಿ.ಸಿ.ಆಯ್.ಎಲ್..ಸಿ ,ತಿಡಗುಂದಿ ,ಶ್ರೀರೇವಣಸಿದ್ದೇಶ್ವರ ಯಾತನೀರಾವರಿಯಿಂದ ಇಡೀ ರೈತಾಪಿ ವರ್ಗದ ಜಮೀನು ನೀರಾವರಿಯಾಗಬೇಕು 1 ಎಕರೆ ಭೂಮಿ ಸಹಿತ ಉಳಿಯಬಾರದು ಅಧಿಕಾರಿಗಳು ಹೆಚ್ಚವರಿಯಾಗಿ ಯೋಜನೆ ತಯಾರಿಸಿ ಈ ಯೋಜನೆಗಳಿಂದ ಕೊನೆಯ ಪ್ರದೇಸಕ್ಕೂ ನೀರಿನ ಅನುಕೂಲವಾಗುತ್ತದೆ. ವಸತಿ ಪ್ರದೇಶಗಳಿಗೆ ನೀರು ಒದಗಿಸಿ ಇದಕ್ಕಾಗಿ ಪ್ರತ್ಯೇಕ ಗ್ಯ್ರಾಂಟ ತರುತ್ತೇನೆ ಬೆಂಗಳೂರು ಮಟ್ಟದ ಅಧಿಕಾರಿಗಳಿಗೆ ಮಾತನಾಡಿದ್ದೇನೆ ವಸತಿ ಪ್ರದೇಶಗಳಿಗೂ ಶಾಶ್ವತ ಪರಿಹಾರ ಯೋಜನೆ ರೂಪಿಸಿ
ತಾಲೂಕಿನ ಸಿರಕನಹಳ್ಳಿ ,ಮಾವಿನಹಳ್ಳಿ ಕರೆಗಳಿಗೂ ನೀರು ತುಂಬಿಸಬೇಕು ನಾನು ಈಗಾಗಲೇ ಎರಡೂ ಗ್ರಾಮದ ರೈತರಿಗೆ ಮಾತು ಕೊಟ್ಟಿದ್ದೇನೆ ,ಬದ್ದತೆ ನನ್ನ ಆದ್ಯ ಕರ್ತವ್ಯ ಅಧಿಕಾರಿಗಳಿಗೆ ಮುನ್ನೇಚ್ಚರಿಕೆ ನೀಡಿದರು.
ತಾಲೂಕಿನಾದ್ಯೆಂತ ಸರಕಾರಿ ಜಮೀನುಗಳ ಅಕ್ರಮವಾಗಿವೆ ಎಂಬ ಸುದ್ದಿ ಸಾಕಷ್ಟು ಹರಿದಾಡುತ್ತಿವೆ ಇಂತಹ ಅಚಾತ್ರ್ಯು ನಡೆಯಕೂಡದು ಸರಕಾರ ಭೂಮಿ ಸ್ವಾದಿನ ಮಾಡಿಕೊಡಬಾರದು ಇದು ದೊಡ್ಡ ವಂಚನೆ. ಸರಕಾರದ ಭೂಮಿಯಲ್ಲಿ ಬೇರೆ ಬೇರೆ ಕೆಲಸ ಕಾರ್ಯಗಳಿಗೆ ಮೀಸಲಾಗಿಡಬೇಕು ಅಧಿಕಾರಿಗಳೆ ತಪ್ಪು ಮಾಡಿದರೆ ಸರಕಾರ ಕ್ರಮಕೈಗೊಳ್ಳುತ್ತದೆ .ಸರಕಾರದ ಭೂಮಿಗಳಲ್ಲಿ ಒಳ್ಳೇಯ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಬೇಕು ಎಂಬ ದೂರದೃಷ್ಠಿ ಇಟ್ಟುಕೊಂಡಿರುವೆ. ಶ್ರೀಕ್ಷೇತ್ರ ಸುತ್ತೂರ ಮಠದ ಶ್ರೀಗಳಿಗೆ ಈ ಭಾಗದ ಜ್ವಲಂತ ಸಮಸ್ಯ ಶಿಕ್ಷಣ ಕುಂಠಿತ ಇದ್ದ ಬಗ್ಗೆ ಮಾಹಿತಿ ನೀಡಿರುವೆ ಈ ಭಾಗದಲ್ಲಿ ಶ್ರೀಮಠದಂತ ಶಿಕ್ಷಣ ಸಂಸ್ಥೆಗಳು ಕಟ್ಟಿದರೆ ನಮ್ಮ ಪೀಳಿಗೆಗೆ ಒಳ್ಳೇಯದಾಗುತ್ತದೆ. ಬಬಲಾದ ಹತ್ತೀರ ಸಣ್ಣ ಕೈಗಾರಿಕೆಗಳ ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ ಇಂತಹ ಒಳ್ಳೇಯ ಕೆಲಸ ಕಾರ್ಯಗಳಿಗೆ ಸರಕಾರದ ನಿವೇಶನ ಕಾಯ್ದೀರಿಸಿ ಎಂದು ಅಧಿಕಾರಿಗಳಿಗೆ ಶಾಸಕ ಯಶವಂತರಾಯಗೌಡ ಪಾಟೀಲ ತಾಲೀತು ಮಾಡಿದರು.
ಎ.ಸಿ ಅಭೀದ ಗದ್ಯಾಳ ,ತಹಶೀಲ್ದಾರ ಶ್ರೀಮತಿ ಮಂಜುಳಾ ನಾಯಕ, ತಾ.ಪಂ ಅಧಿಕಾರಿ ಬಾಬು ನಾಯಕ ,ಡಿವೈಎಸ್ಪಿ ವೇದಿಕೆಯಲ್ಲಿದ್ದರು.