ಸಮಾನತೆಗಾಗಿ ಸಂಘರ್ಷ ದಿನ ಜೂ.26ರಂದು
ಹುಮನಾಬಾದ್:ಜೂ.20: ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರವಾದ ವತಿಯಿಂದ ಜೂ.26ರಂದು ಸಮಾನತೆಗಾಗಿ ಸಂಘರ್ಷ ದಿನ ಹಾಗೂ ಜಿಲ್ಲಾ ಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ ಡಾಕುಳಗಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಿತ್ತಿಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಟ್ಟಣದ ಕಾಲೋನಿಯಲ್ಲಿರುವ ಟೀಚರ್ ಅಂಬೇಡ್ಕರ್ ಭವನದಲ್ಲಿ ಅಂದು ಬೆಳಿಗ್ಗೆ 11.30ಕ್ಕೆ ಕಾರ್ಯಕ್ರಮ ನಡೆಯಲಿದೆ. ಹೆಚ್ಚಿನ ಜನರು ಬಂದು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.
ತಾ.ಪಂ ಮಾಜಿ ಸದಸ್ಯ ಬಾಬು ಟೈಗರ್, ಕೈಲಾಶ ಮೇಟಿ ಜಲಸಂಗಿ, ಅಶೋಕ್ ಚಳಕಪೂರೆ, ಬಾಬು ಮಾಲೆ, ಸುಶೀಲ್ ಭೋಲಾ, ಶಿವರಾಜ್ ಲಾಡಕರ, ಗಣಪತಿ ಅಷ್ಟೋರೆ, ವಿಠಲ್ ಲಾಡಕರ, ಕಾನೀಫ್ ಜಾನವೀರ್ ಸೇರಿದಂತೆ ಅನೇಕರು ಇದ್ದರು.