ಸ್ಥಳೀಯ ಕಾಂಗ್ರೆಸ್ ನಾಯಕರಿಂದ ಅಧಿಕಾರದ ದುರುಪಯೋಗ:ಡಾ.ಸಿದ್ದು ಪಾಟೀಲ
ಹುಮನಾಬಾದ :ಜೂ20: ಕ್ಷೇತ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿರುವದನ್ನು ಸಹಿಸಲಾಗದೆ, ಸ್ಥಳೀಯ ಕಾಂಗ್ರೆಸ್ ನಾಯಕರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಅಧಿಕಾರ ಅಸ್ತಿತ್ವದಲ್ಲಿರುವ ಕಾರಣ ಸ್ಥಳೀಯ ಕಾಂಗ್ರೆಸ್ ನಾಯಕರು ತಾಲೂಕಿನ ಕಠಳ್ಳಿ ಪ್ರಕರಣಕ್ಕೆ ಬಣ್ಣ ಬಳೆಯುವ ಕೆಲಸ ಮಾಡುವ ಮೂಲಕ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಶಾಸಕ ಡಾ. ಸಿದ್ದು ಪಾಟೀಲ್ ಆರೋಪಿಸಿರು.
ಪಟ್ಟಣದ ಶಾಸಕರ ಗೃಹ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಟ್ಟಣದಲ್ಲಿ ಸಂಚಾರಿ ಠಾಣೆಯಿಂದ ಜನಸಾಮಾನ್ಯರ ಸುಲಭ ಸಂಚಾರಕ್ಕೆ ಅನುಕೂಲ ಮಾಡಿಕೊಡುವದನ್ನು ಬಿಟ್ಟು, ಕೆವಲ ಸಂಚಾರಿ ನಿಯಮ ಉಲ್ಲಂಘನೆ ಹೆಸರಿನಲ್ಲಿ ರೈತರಿಗೆ ಹಾಗೂ ಬಡ ಜನರಿಗೆ ದಂಢ ಹಾಕಲಾಗುತ್ತಿದೆ. ಇದರಿಂದ ರೈತರ ಮೇಲೆ ಬೀತ್ತನೆಯ ಜತೆಗೆ ಇದರ ಹೊರೆ ಬಿಳುತ್ತಿದೆ. ಸಂಚಾರ ನಿಯಮ ಪಾಲನೆ ಕುರಿತು ಕೆಲಸ ಮಾಡಲಿ ಆದರೆ ಹೊಲಕ್ಕೆ ತೆರಳುವ ರೈತರಿಗೆ ದಂಡ ವಿಧಿಸುವುದು ಸರಿಯಲ್ಲ ಎಂದು ಕಿಡಿಕಾರಿದರು.
ಇದೇ ವೇಳೆ ಬಿಜೆಪೆÇ ಮಂಡಲ ಅಧ್ಯಕ್ಷ ಪ್ರಭಾಕರ ನಾಗರಾಳೆ, ಬಸವರಾಜ ಆರ್ಯ, ಅನೀಲ್ ಪಸರ್ಗಿ, ಗಜೇಂದ್ರ ಕನಕಟ್ಟಕರ್, ನಾಗಭೂಷಣ ಸಂಗಮಕರ್, ರಾಜು ಭಂಡಾರಿ, ಸುನಿಲ್ ಪತ್ರಿ ಇದ್ದರು.