ಕ.ಕಾ.ಪ್ರ.ದ. ಕಾಲೇಜು: ಎನ್.ಎಸ್.ಎಸ್. ಶಿಬಿರಕ್ಕೆ ಚಾಲನೆ
ಬೀದರ,ಜೂ.20:: ಬೀದರ ವಿಶ್ವವಿದ್ಯಾಲಯ ಬೀದರ ಹಾಗೂ ಕವಿರತ್ನ ಕಾಳಿದಾಸ ಪ್ರಥಮ ದರ್ಜೆ ಕಾಲೇಜು, ಬೀದರ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ಶಿಬಿರ ಕಾರ್ಯಕ್ರಮವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿಟ್ಟಾವಾಡಿ ಯಲ್ಲಿ ಜೂನ್ 19, ರಿಂದ ಜೂನ್ 25ರ ವರೆಗೆ ಹಮ್ಮಿಕೋಳ್ಳಲಾಗಿದೆ.
ಕಾರ್ಯಕ್ರಮವನ್ನು ಮಹಾತ್ಮ ಗಾಂಧಿಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದ ಸಂಸ್ಥೆಯ ಅಧ್ಯಕ್ಷರಾದ ಅಮೃತರಾವ ಚಿಮಕೋಡೆ ಅವರು ಮಾತನಾಡುತ್ತ, ನಗರ ಮತ್ತು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ಮಾದರಿಯ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.
ಕಾಲೇಜು ಪ್ರಾಂಶುಪಾಲರಾದ ಡಾ. ಗಿರಿರಾವ ಕುಲಕರ್ಣಿಯವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ಸರಕಾರವು ವಿಶೆಷವಾಗಿ ವಿಧ್ಯಾರ್ಥಿಗಳಿಗಾಗಿ ಹಲವು ಯೋಜನೆಗಳಲೋಂದಾದ ಎನ್.ಎಸ್.ಎಸ್ ಶಿಬರವು ಇದೆ, ಇದರ ಸದುಪಯೊಗ ಪಡೆದುಕೋಳ್ಳಬೇಕು ಎಂದರು.
ಗ್ರಾಮ ಪಂಚಾಯತ ಅದ್ಯಕ್ಷರಾದ ಶೀಮತಿ ಸರಸ್ವತಿ ರವರು ಮುಖ್ಯ ಅತಿಥಿಸ್ಥಾನ ವಹಿಸಿ ಮಾತನಾಡಿದರು.
ಗ್ರಾ.ಪಂ.ಸದಸ್ಯರಾದ ಶ್ರೀಮತಿ ಜಗದೇವಿ ಮದ್ದರಗಿಕರ, ಶಾಲೇಯ ಎಸ್.ಡಿ.ಎಮ್.ಸಿ.ಅಧ್ಯಕ್ಷರಾದ ಶಿವರಾಜ ವಗ್ಗೆ, ಕನ್ನಡ ಶಾಲೇಯ ಮುಖ್ಯ ಗುರುಗಳಾದ ಶ್ರೀಮತಿ ಶೀಲಾ ಮಡಿವಾಳ, ಉರ್ದು ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ತಮಕಿನ್ ಮತ್ತು ಸಂಸ್ಥೆಯ ಸದಸ್ಯರಾದ ಅವಿನಾಶÀ ಅ.ಚಿಮಕೋಡೆ ಯವರು ಅತಿಥಿ ಸ್ಥಾನ ವಹಿಸಿ ಮಾತನಾಡಿದರು.
ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ಅಧಿಕಾರಿಗಳಾದ ಡಾ. ಗೋವಿಂದ ಮೋತಿರಾಮ ಸ್ವಾಗತಿಸಿ ಪ್ರಾಸ್ತವೀಕ ಮಾತನಾಡಿದರು.
ಪ್ರಾರಂಭದಲ್ಲಿ 5ನೇ ತರಗತಿಯ ಕು.ಸುನಿತಾ ಪ್ರಾರ್ಥನ ಗೀತೆ ಹಾಡಿದರೆ, ಕಾಲೇಜಿನ ಕು.ಪಾರ್ವತಿ ಪಿ. ಮತ್ತು ಅಕ್ಷತಾ ಸ್ವಾಗತ ಗೀತೆ ಹಾಡಿದರು.ಓಂಕಾರ ಮಾಶೆಟ್ಟಿ ನಿರೂಪಿಸಿದರೆ, ವೈಜಿನಾಥ ಗೌಡನಗುರು ವಂದಿಸಿದರು.
ಕಾಂiÀರ್iಕ್ರಮದಲ್ಲಿ ಶಾಲೇಯ ಮತ್ತು ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಇದ್ದರು.