ನಗರದ  ಜೆಡಿಎಸ್ ಕಚೇರಿಯಲ್ಲಿಉಚಿತ ಆರೋಗ್ಯ ತಪಾಸಣಾ ಶಿಬಿರ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.20: ಹೃದಯ ಸಂಬಂಧಿ ಖಾಯಿಲೆಗಳು,ಕಣ್ಣಿನ, ಎಲುಬು ಕೀಲುಗಳ ತೊಂದರೆ, ನರರೋಗದ ಸಮಸ್ಯೆ, ಕಿಡ್ನಿಯಲ್ಲಿ ಕಲ್ಲು ,ಕ್ಯಾನ್ಸರ್ ಮತ್ತಿತರ ಖಾಯಿಲೆಗಳ ಬಗ್ಗೆ  ಇಂದು ನಗರದ ಜೆಡಿಎಸ್ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.
ಪಕ್ಷದ  ಜಿಲ್ಲಾ ಅಧ್ಯಕ್ಷ ಮೀನಳ್ಳಿ ತಾಯಣ್ಣ ನೇತೃತ್ವದಲ್ಲಿ,  ಮಲ್ಲಿಕಾರ್ಜುನ ಹಚ್ಚೊಳಿ ಅವರ ಸಹಭಾಗಿತ್ವದಲ್ಲಿ ಇದನ್ನು ಆಯೋಜಿಸಿತ್ತು.
ಮುಂದಿನ ದಿನಗಳಲ್ಲಿ ಗ್ರಾಮೀಣ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗುವುದೆಂದು ಮೀನಳ್ಳಿ ತಾಯಣ್ಣ ಈ ಸಂದರ್ಭದಲ್ಲಿ ತಿಳಿಸಿದರು.
ಡಾ. ಪೃಥ್ವಿ, ಡಾ. ರೋಹಿತ್, ಡಾ. ಜಯಂತ್ , ಡಾ ಯಶವಂತ್ ,ಪಕ್ಷದ ಮುಖಂಡರುಗಳಾದ ನಗರ ಘಟಕದ ಅಧ್ಯಕ್ಷ ವಂಡ್ರಿ, ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಶೋಕ,ರಾಮಾಂಜೀನಿ,ಬಸಪ್ಪ,ಚರುಕುಂಟೆ ಈರಣ್ಣ, ಸಿದ್ದು ಹೆಗಡೆ, ಭವಾನಿ, ವರಲಕ್ಷ್ಮಿ, ಜಮೀಲಾ ಬೇಗಂ,ಯಶೋಧ, ನೀಲಾ, ರೇಣುಕಾ, ನಾಗವೇಣಿ  ಮತ್ತಿತರರು ಇದ್ದರು