ಸರ್ಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ., ಯು.ಕೆ.ಜಿ. ಆರಂಭಕ್ಕೆ ವಿರೋಧ,ಅಂಗನವಾಡಿ ನೌಕರರ ಪ್ರತಿಭಟನೆ
ಬೀದರ:ಜೂ.20: ರಾಜ್ಯ ಸರ್ಕಾರ ಕಳೆದ ವರ್ಷದಿಂದ ಜಾರಿಗೆ ತಂದಿರುವ ಶಿಕ್ಷಣ ನೀತಿಯಿಂದ ಗ್ರಾಮೀಣ ಭಾಗಗಳ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಹಾಜರಾತಿ ಇಲ್ಲದೇ ಅಂಗನವಾಡಿ ಕೇಂದ್ರಗಳು ಮುಚ್ಚುವ ಸ್ಥಿತಿ ಬಂದಿರುವುದಲ್ಲದೇ, ಅಂಗನವಾಡಿ ಸಹಾಯಕರು ಮತ್ತು ಕಾರ್ಯಕರ್ತರು ಬೀದಿಗೆ ಬರಲಿದ್ದು, ಸರ್ಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ., ಯು.ಕೆ.ಜಿ. ತರಗತಿಗಳು ಪ್ರಾರಂಭವನ್ನು ಕೈಬಿಡುವಂತೆ ಸಿ.ಐ.ಟಿ.ಯು. ನೇತೃತ್ವದ ತಾಲೂಕಾ ಅಂಗನವಾಡಿ ಕಾರ್ಯಕರ್ತರು ಪೌರಾಡಳಿತ ಸಚಿವರಾದ
ರಹೀಂ ಖಾನ್ ಕಚೇರಿ ಮುಂದೆ ಮನವಿ ಮಾಡಿದೆ. ಚಿದ್ರಿ ಮತ್ತು ಮೈಲೂರ್ ರಿಂಗ್ ರಸ್ತೆಯ ಪೌರಾಡಳಿತ ಸಚಿವರಾದ ರಹೀಂ ಖಾನ್ ರವರ ಕಚೇರಿಯ ಮುಂದೆ 400-500 ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕರು ಸೇರಿ ಕಳೆದ 3 ದಿನಗಳಿಂದ ಧರಣಿ ಸತತ್ಯಾಗ್ರಹವನ್ನು ಹಮ್ಮಿಕೊಂಡಿದ್ದು, ಇಂತಹ ನೀತಿಯಿಂದ ಗ್ರಾಮೀಣ ಭಾಗದ ಮುಗ್ದ ಮಕ್ಕಳು ಶಿಕ್ಷಣ ಹಾಗೂ ಇತರೆ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ.
ಅಂಗನವಾಡಿ ಕೇಂದ್ರಗಳಿಗೆ ಸರ್ಕಾರ ಎಲ್.ಕೆ.ಜಿ., ಯು.ಕೆ.ಜಿ. ತರಗತಿಯನ್ನು ಶಾಲೆಗಳಲ್ಲಿ ಆರಂಭಿಸುವ ಪ್ರಯತ್ನವನ್ನು ಕೈಬಿಡಬೇಕೆಂದು ಸಿ.ಐ.ಟಿ.ಯು. ತಾಲೂಕಾ ಅಧ್ಯಕ್ಷ ಶಕುಂತಲಾ ನರಸಿಂಗ ಸೋನಿ ಇವರ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದೇವೆ
ಈ ಧರಣಿ ಸತ್ಯಾಗ್ರಹದಲ್ಲಿ ಶ್ರೀದೇವಿ ಚೂಡೆ, ಉಷಾ ಗುತ್ತೆದಾರ, ಚನ್ನಮ್ಮ ಕೆಂಪೆ, ಸುಮಿತ್ರಾ ಪೂಜಾರಿ, ವಿಜಯಲಕ್ಷಿ?? ಹುಮನಾಬಾದ, ಪ್ರಭು ಸಂತೋಷಕರ್, ಜಗದೇವಿ ಪತ್ರಿ, ಶಾಂತಾ ನಾಗೂರೆ ಇನ್ನೀತರರು ಉಪಸ್ಥಿತರಿದ್ದರು.