ಮೀನುಗಾರಿಕೆ ಅಭಿವೃದ್ದಿ ನಿಗಮದ ಅಧ್ಯಕ್ಷೆ ಶ್ರೀಮತಿ ಮಾಲಾ ಭೇಟಿ, ಪರಿಶೀಲನೆತೆಲುವ ಜಟ್ಟಿ, ಕಾಮಗಾರಿ ತ್ವರಿತಗೊಳಿಸಲು ಸೂಚನೆ
ಬೀದರ್ ಜೂ 20ಃ ಕರ್ನಾಟಕ ಮೀನುಗಾರಿಕೆ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಶ್ರೀಮತಿ ಮಾಲಾ ಬಿ.ನಾರಾಯಣರಾವ್ ಅವರ ನಿಗಮದ ಕೇಂದ್ರ ಕಛೇರಿಗೆ ಶನಿವಾರ ಭೇಟಿ ನೀಡಿ, ನಿಗಮದ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಪಡೆದರು.
ಮಂಗಳೂರಿನ ಮೀನುಗಾರಿಕೆ ಬಂದರು, ಮಂಜುಗಡ್ಡೆ, ಸ್ಥಾವರ ಡಿಸೇಲ್ ಬಂಕ್‍ಗಳ ಪ್ರಸ್ತುತ ಸ್ಥಿತಿಗತಿಗಳನ್ನು ಪರಿಶಿಲಿಸಿದರು. ಇದೆ ಸಂದರ್ಭದಲ್ಲಿ ನಾಡದೋಣಿಗಳ ನಿಲುಗಡೆಗೆ ನಿಗಮದಿಂದ ಕೈಗೊಂಡಿರುವ ತೆಲುವ ಜಟ್ಟಿ, ಯೋಜನೆಯ ಕಾಮಗಾರಿಯನ್ನು ಪರಿಶೀಲಿಸಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೋಳಿಸಿ ಮೀನುಗಾರಿಕೆಗೆ ಸಹಕಾರವಾಗುವ ಬಗ್ಗೆ ಅಗತ್ಯ ಕ್ರಮವವಹಿಸುವಂತೆ ಸೂಚಿಸಿದರು.
ಮೀನುಗಾರಿಕಾ ಬಂದರಿನ ಭೇಟಿಯ ಸಮಯದಲ್ಲಿ ಉಪಸ್ಥಿತರಿದ್ದ ಬೋಟ್ ಮಾಲಿಕರು ಮತ್ತು ಮೀನುಗಾರರಿಂದ ಮೀನುಗಾರಿಕಾ ವಿಧಾನಗಳು, ದೋಣಿಗಳು ಮತ್ತು ಮೀನುಗಾರಿಕಾ ಚಟುವಟಿಗಳ ಬಗ್ಗೆ ಮಾಹಿತಿಯನ್ನು ಪಡೆದರು.
ಬಳಿಕ ನಿಗಮದ ಎಲ್ಲಾ ಶಾಖೆಗಳ ಶಾಖಾಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿ ಮೀನುಗಾರಿಕಾ ಚಟುವಟಿಕೆಗಳ ಬಗ್ಗೆ ನಿಗಮದ ಅಧಿಕಾರಿಗಳೊಂದಿಗೆ ಚರ್ಚಿಸಿ ಸದರಿ ಸಭೆಯಲ್ಲಿ ನಿಗಮದಲ್ಲಿ ಮೀನುಕಾರಿಕೆಗೆ ಮತ್ತು ಮೀನುಗಾರರಿಗೆ ಸಂಬಂಧಿಸಿದ ಚಾಲ್ತಿಯಲ್ಲಿರುವ ಯೋಜನೆಗಳ ಮತ್ತು 2024-25ನೇ ವರ್ಷದಲ್ಲಿ ನಿಗಮದಿಂದ ಕರಾವಳಿ ಮತ್ತು ಒಳನಾಡು ವಿಭಾಗದ ಮೀನುಗಾರಿಕಾ ಕ್ಷೇತ್ರದ ಅಭಿವೃದ್ದಿಗೆ ನೂತನ ಯೋಜನೆಯನ್ನು ಜಾರಿಗೋಳಿಸಲು ಮತ್ತು ಪ್ರಸ್ತುತ ಯೋಜನೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಭೆಯಲ್ಲಿದ್ದ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು.
ಸಭೆಯಲ್ಲಿ ನಿಗಮದ ವತಿಯಿಂದ ನಾಡದೋಣಿಗಳಿಗೆ ಅವಶ್ಯವಿರುವ ಸೀಮೆಎಣ್ಣೆ ವಿತರಣೆಗೆ ತೊಂದರೆಯಾಗದ ರೀತಿಯಲ್ಲಿ ಕಾರ್ಯನಿರ್ವಹಿಸಲು ಮತ್ತು ಮೀನು ಹಿಡುವಳಿಯ ಮಾರಾಟಕ್ಕಾಗಿ ಮತ್ತು ಉತ್ತಮ ನೈರ್ಮಲ್ಯಕರ ವಾತಾವರಣವನ್ನು ಕಲ್ಪಿಸುವ ಹಿನ್ನಲೆಯಲ್ಲಿ ಹೊಸ ಮೀನು ಮಾರುಕಟ್ಟೆಗಳನ್ನು ರಾಜ್ಯದ ವಿವಿಧ ಭಾಗಗಳಲ್ಲಿ ನಿರ್ಮಾಣ ಮಾಡಲು ಮತ್ತು ಹೊನ್ನಾವರ ಬಂದರಿನಲ್ಲಿ ಮೀನುಗಾರ ಬೋಟುಗಳಿಗೆ ಕರರಹಿತ ಡೀಸಿಲನ್ನು ವಿತರಿಸಲು ಹೊಸ ಡೀಸಿಲ್ ಬಂಕನ್ನು ಮೀನುಗಾರಿಕಾ ಶುತು ಪ್ರಾರಂಭವಾಗುವ ಮುಂಚೆಯೆ ಪ್ರಾರಂಭಿಸಲು ಅಗತ್ಯ ಕ್ರಮ ವಹಿಸುವಂತೆ ಸಭೆಯಲ್ಲಿ ತಿಳಿಸಿದರು.
ನಂತರ ಉಳ್ಳಾಲ ಮಹಿಳಾ ಮೀನುಗಾರಿಕಾ ಸಹಕಾರಿ ಸಂಘದ ಕಛೇರಿಗೆ ಭೇಟಿ ನೀಡಿ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರೊಂದಿಗೆ ಸಂವಾದವನ್ನು ನಡೆಸಿ, ಮೀನುಗಾರಿಕಾ ಚಟುವಟಿಕೆಗಳಲ್ಲಿ ಮಹಿಳೆಯರ ಪಾತ್ರ ಮತ್ತು ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಪಡೆದರು.
ಸಭೆಯಲ್ಲಿ ಸಂಘದ ಅಧ್ಯಕ್ಷರಾದ ಶ್ರೀಮತಿ ಜಾನಕಿ ಪುತ್ರನ್, ಉಪಾಧ್ಯಕ್ಷರಾದ ಶ್ರೀಮತಿ ಮೀನಾಕ್ಷಿ ಹಾಗೂ ನಿರ್ದೇಶಕರುಗಳಾದ ಶ್ರೀಮತಿ ನಾರಾಯಣಿ, ಶ್ರೀಮತಿ ರೋಹಿಣಿ ಮತ್ತು ಸಂಘದ ಕಾರ್ಯದರ್ಶಿ ಶ್ರೀಮತಿ ಉಮಾವತಿ, ವ್ಯವಸ್ಥಾಪಕ ನಿರ್ದೇಶಕರಾದ ಕೆ.ಗಣೇಶ, ಪ್ರ-ವ್ಯವಸ್ಥಾಪಕರಾದ ಮಹೇಶ ಕುಮಾರ್ ಯು, ಹಿರಿಯ ವ್ಯವಸ್ಥಾಪಕರಾದ ಮಲ್ಲೇಶ, ಮತ್ತು ಚಂದ್ರು ಎಚ್.ಎಸ್., ವ್ಯವಸ್ಥಾಪಕರಾದ ಮಹೇಶ ಜೀ, ಲಿಂಗೇಶ್, ಸುರ್ಜಿತ್ ಪ್ರಸಾದ್, ಸಹಾಯಕ ವ್ಯವಸ್ಥಾಪಕರಾದ ರಮೇಶ ಖಾರ್ವಿ, ಶಿವಕುಮಾರ, ದತ್ತಾತ್ರೇಯ ಬೀರಾಮುಕ್ರಿ ಸೇರಿದಂತೆ ಕಛೇರಿ ಸಿಬ್ಬಂದಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.